ಶೈಕ್ಷಣಿಕ ವರ್ಷ ಆರಂಭವಾದರೂ ಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ ಪುಸ್ತಕಗಳು

ಶೈಕ್ಷಣಿಕ ವರ್ಷ ಆರಂಭವಾದರೂ ಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ ಪುಸ್ತಕಗಳು

ಬೆಂಗಳೂರು: ಕೊರೊನಾ ಕಾಲದಲ್ಲಿ ಮಕ್ಕಳಿಗೆ ಆನ್​ಲೈನ್​ ತರಗತಿಗಳೇ ಮೊದಲ ಪಾಠ ಶಾಲೆಗಳಾಗಿ ಮಾರ್ಪಾಡಾಗಿದೆ. ಆನ್​ಲೈನ್​ ತರಗತಿಗಳೇನೊ ಆರಂಭವಾಗಿವೆ ಅದರ ಜೊತೆ ಪಠ್ಯ ಪುಸ್ತಕಗಳ ಕೊರತೆಯೂ ಎದ್ದು ಕಾಣ್ತಿದೆ.

2021-2022 ರ ಶೈಕ್ಷಣಿಕ ವರ್ಷ ಆರಂಭವಾಗಿ 10 ದಿನಗಳೇ ಕಳೆದಿವೆ. ಆದರೆ ಇನ್ನು ಪಠ್ಯ ಪುಸ್ತಕಗಳು ಮಾತ್ರ ವಿದ್ಯಾರ್ಥಿಗಳ ಕೈಸೇರಿಲ್ಲ. ಮಕ್ಕಳಿಗೆ ಪುಸ್ತಕಗಳು ಇನ್ನು ದೊರೆತಿಲ್ಲವಾದ್ದರಿಂದ ಅವರ ಓದಿಗೆ ಕಷ್ಟವಾಗುತ್ತಿದೆ ಎಂದು ಪೋಷಕರು ಹೇಳುತ್ತಿದ್ದಾರೆ. ಪಠ್ಯ ಪುಸ್ತಕಗಳಿಲ್ಲದೇ ಶಿಕ್ಷಕರು ಕೂಡ ಪಾಠ ಮಾಡಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮಕ್ಕಳಿಗೆ ಸರಿಯಾಗಿ ಶಿಕ್ಷಣ ಸಿಕ್ಕಿಲ್ಲ, ಹೀಗಿರುವಾಗ ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಕಳೆದ ವರ್ಷ ವಿತರಣೆ ಮಾಡಿದ್ದ ಹಳೆಯ ಪುಸ್ತಕಗಳನ್ನ ವಾಪಸ್ ಪಡೆದು ಶೇಕಡಾ 60 ರಿಂದ ಶೇಕಡಾ  70 ರಷ್ಟು ಹಳೆಯ ಪುಸ್ತಕಗಳನ್ನೇ ಪುನಃ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಆದರೆ ಇನ್ನು ಶೇಕಡಾ 30ರಷ್ಟು ಪುಸ್ತಕಗಳು ಲಭ್ಯವಾಗುತ್ತಿಲ್ಲ.

ಪಠ್ಯ ಪುಸ್ತಕ ಒದಗಿಸುವಂತೆ ಶಿಕ್ಷಣ ಇಲಾಖೆಗೆ ಖಾಸಗಿ ಶಾಲಾ ಒಕ್ಕೂಟ ‌ಮನವಿ ಮಾಡಿದ್ದು ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೋಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಶಿಕ್ಷಣ ಸಚಿವರನ್ನ ಕೇಳಿದ್ರೆ ಸಮಸ್ಯೆ ಬಗೆ ಹರಿಸ್ತೇವೆ ಎಂದು ಆಶ್ವಾಸನೆ ಮಾತ್ರ ನೀಡ್ತಾರೆ ಎಂದಿದ್ದಾರೆ. ಆದಷ್ಟು ಬೇಗ ಭೌತಿಕ ತರಗತಿಗಳು ಆರಂಭವಾಗಿ, ಮಕ್ಕಳಿಗೆ ಪುಸ್ತಕ ದೊರೆತು ಈ ವರ್ಷವಾದರು ಉತ್ತಮ ಶಿಕ್ಷಣ ಸಿಗಲಿ ಎನ್ನುತ್ತಾರೆ ಪೋಷಕರು.

The post ಶೈಕ್ಷಣಿಕ ವರ್ಷ ಆರಂಭವಾದರೂ ಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ ಪುಸ್ತಕಗಳು appeared first on News First Kannada.

Source: newsfirstlive.com

Source link