ಹೆಚ್​​ಡಿಕೆ v/s ಸುಮಲತಾ: ಎಲ್ಲರೂ ಅಣ್ಣತಮ್ಮರಂತೆ ಬದುಕೋದನ್ನ ಕಲಿಯಬೇಕು -ಸಿಎಂ

ಹೆಚ್​​ಡಿಕೆ v/s ಸುಮಲತಾ: ಎಲ್ಲರೂ ಅಣ್ಣತಮ್ಮರಂತೆ ಬದುಕೋದನ್ನ ಕಲಿಯಬೇಕು -ಸಿಎಂ

ಕಲಬುರಗಿ: ಸಂಸದೆ ಸುಮಲತಾ ವರ್ಸಸ್​ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ವಾಕ್ಸಮರದ ಕುರಿತು ಸಿಎಂ ಬಿ.ಎಸ್​ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಎಲ್ಲರೂ ಅಣ್ಣತಮ್ಮರಂತೆ ಬದುಕೋದನ್ನ ಕಲಿಯಬೇಕಿದೆ. ಈ ವಿವಾದ ನಿಲ್ಲಿಸಬೇಕು ಅಂತ ಹೇಳಿದ್ದಾರೆ.

ಅಂಬರೀಶ್ ಸ್ಮಾರಕ ನಿರ್ಮಾಣದ ವಿಚಾರವಾಗಿ ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ವಾಕ್ಸಮರ ನಡೆದಿದೆ. ಅಂಬರೀಷ್​ ಸ್ಮಾರಕ ನಿರ್ಮಿಸಿದ್ದು ಕುಮಾರಸ್ವಾಮಿ ಅಲ್ಲ, ಬಿ.ಎಸ್​ ಯಡಿಯೂರಪ್ಪ ಅಂತ ನಿನ್ನೆ ಸುಮಲತಾ ಹೇಳಿಕೆ ನೀಡಿದ್ದರು. ಈ ಬಗ್ಗೆ ಇಂದು ಕಲಬುರಗಿಯಲ್ಲಿ ಮಾತನಾಡಿದ ಯಡಿಯೂರಪ್ಪ, ನಾನು ಆಗ ನನ್ನ ಕರ್ತವ್ಯ ಮಾಡಿದ್ದೇನೆ ನನಗೆ ಸಮಾಧಾನ, ತೃಪ್ತಿ ಇದೆ.‌‌‌‌‌‌‌ ಈಗ ಅವರು ಪರಸ್ಪರ ಕಚ್ಚಾಟ, ಬಡಿದಾಟ ಮಾಡುವ ಅವಶ್ಯಕತೆ ಇಲ್ಲ ಎಂದರು.

ಎಲ್ಲರೂ ಅಣ್ಣತಮ್ಮರಂತೆ ಬದುಕೋದನ್ನ ಕಲಿಯಬೇಕಿದೆ. ಈ ವಿವಾದ ನಿಲ್ಲಿಸಬೇಕು. ನಾವೆಲ್ಲ ಒಟ್ಟಾಗಿ ರಾಜ್ಯದ ಅಭಿವೃದ್ಧಿ ಕೆಲಸ ಮಾಡಬೇಕು. ಮಂಡ್ಯ ಕೂಡ ರಾಜ್ಯದ ಒಂದು ಭಾಗ, ಅಲ್ಲಿಯ ಅಭಿವೃದ್ಧಿ ಬಗ್ಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಬಿಎಸ್​ವೈ ಹೇಳಿದರು.

ಕಲಬುರಗಿ ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಆಗಮಿಸಿದ್ದೇನೆ. ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಸದ್ಯ ಕಾಬಿನೇಟ್ ಸಭೆ ನಡೆಸೋದಿಲ್ಲ. ಮುಂದೆ ಅದರ ಬಗ್ಗೆ ನೋಡೋಣ ಎಂದರು

 

 

The post ಹೆಚ್​​ಡಿಕೆ v/s ಸುಮಲತಾ: ಎಲ್ಲರೂ ಅಣ್ಣತಮ್ಮರಂತೆ ಬದುಕೋದನ್ನ ಕಲಿಯಬೇಕು -ಸಿಎಂ appeared first on News First Kannada.

Source: newsfirstlive.com

Source link