ವಾರದ ಕತೆಯಲ್ಲಿ ಸ್ಪರ್ಧಿಗಳಿಗೆ ಇವತ್ತೂ ಇದ್ಯಾ ಕಿಚ್ಚನ ಕ್ಲಾಸ್​..? ತಗೊಂಡ್ರೆ ಯಾರಿಗೆ?

ವಾರದ ಕತೆಯಲ್ಲಿ ಸ್ಪರ್ಧಿಗಳಿಗೆ ಇವತ್ತೂ ಇದ್ಯಾ ಕಿಚ್ಚನ ಕ್ಲಾಸ್​..? ತಗೊಂಡ್ರೆ ಯಾರಿಗೆ?

ಇವತ್ತು ವಾರದ ಕತೆ ಕಿಚ್ಚನ ಜೋತೆ ಇದೆ. ಕಳೆದ ವಾರ ತುಂಬಾ ಇಂಟ್ರಸ್ಟಿಂಗ್​ ಘಟಣೆಗಳು ನಡ್ದಿವೆ. ಕೆಲವರು ತಪ್ಪು ಮಾಡಿದ್ರೇ, ಇನ್ನೂ ಕೆಲವರು ತಪ್ಪನ್ನೇ ದೊಡ್ಡದು ಮಾಡಿದ್ದಾರೆ. ಕೆಲವರು ತಪ್ಪು ಮಾಡಿರುವುದು ಮನವರಿಕೆ ಆಗಿಲ್ಲ. ಹೀಗಾಗಿ ಕಿಚ್ಚ ಸುದೀಪ್ ಅವರ ಪಂಚಾಯ್ತಿ ಸಾಕಷ್ಟು ಕೂತಹಲ ಮೂಡಿಸಿದೆ.

ಈ ವಾರ ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರೂ ಹೈಟೆಂಪರ್​ ಆಗಿದ್ರು. ಮೊದಲಿಗೆ ಶುರುವಾಗಿದ್ದೆ ಪ್ರಿಯಾಂಕ ತಿಮ್ಮೇಶ್​ ಮತ್ತು ಚಂದ್ರಚೂಡ್​ ಅವರ ಮನಸ್ತಾಪ. ಒಂದು ರೀತಿ ಅವರ ವೈಮನಸ್ಸಿನ ಕಿಡಿ ವಾರ ಕಳೆದ್ರು ಇನ್ನೂ ಕಡಿಮೆ ಆಗಿಲ್ಲ. ಅಷ್ಟೇಲ್ಲ ಈ ಕುರಿತು ಇನ್ನೂ ಎಷ್ಟು ದಿನ ಹಗೆ ಸಾಧಿಸುತ್ತೀರಿ ಎಂದು ಶಮಂತ್​ ಕೇಳಿದ ಪ್ರಶ್ನೆಗೆ ಪ್ರಿಯಾಂಕ ಮನೆಯಿಂದ ಹೊರ ಹೋಗುವವರೆಗೂ ಅಂದ್ರೆ ನಾನು ಜೀವನವಿಡಿ ಬಿಡಲ್ಲ ಅಂತಾ ಚಂದ್ರಚೂಡ್​ ಹೇಳ್ತಾರೆ.

blank

ಇನ್ನೂ ಬಿಗ್​ ಮನೆಯ ಕುಚುಗಳು ಎಂದೇ ಫೇಮಸ್​ ಆಗಿರುವ ಚಕ್ರವರ್ತಿ ಚಂದ್ರಚೂಡ್​ ಮತ್ತು ಪ್ರಶಾಂತ್​ ಪದೇ ಪದೇ ಟ್ರೀಗರ್​ ಆಗ್ತಿದ್ದಾರೆ. ಹೋಗ್ಲಿ ತಮಗೋಸ್ಕರಾ ಜಗಳ ಮಾಡ್ಕೋತಾರಾ ಅದು ಇಲ್ಲ. ಬೇರೆಯವರು ಪರ ವಹಿಸಲು ಹೋಗಿ ಕಿತ್ತಾಡ್ತಿದ್ದಾರೆ. ಅದು ಮನೆಯ ವಿಷಯಕ್ಕೆ ಶುರುವಾಗಿ ಪರ್ಸನಲ್​ ವಿಷಯಕ್ಕೆ ಹೋಗಿ ಎಂಡ್​ ಆಗ್ತಿದೆ.

ಇತ್ತ ದಿವ್ಯಾ ಸುರೇಶ್​ ಮತ್ತು ಪ್ರಿಯಾಂಕಾ ಹಾಗೂ ಶಮಂತ್​ ಸಾಕಷ್ಟು ವಿಷಯಗಳಿಗೆ ಕಿತ್ತಾಡಿ, ಹಾಗೋಹೀಗೊ ಒಂದಾದ್ರು. ಆದ್ರೇ ಶಮಂತ್​ ಬೇಕಂತಲೇ ಬಾತ್​ ರೂಂನಲ್ಲಿ ಇದ್ದು, ಬಜರ್​ ಆದ ತಕ್ಷಣ ಏಪ್ರಾನ್​ ಹಾಕಿಕೊಳ್ಳಲು ಬರುತ್ತಾರೆ. ಆದ್ರೇ ಇದಕ್ಕೆ ಕ್ಯಾಪ್ಟನ್​ ಆಗಿದ್ದ ದಿವ್ಯಾ ಉರುಡುಗು ಅಬ್ಜಕ್ಷನ್​ ಮಾಡ್ತಾರೆ. ಅದಕ್ಕೆ ಶಮಂತ್​ ಕೋಪ ಮಾಡ್ಕೊಂಡು ದಿವ್ಯಾ ಅರವಿಂದ್​ಗೆ ಫೇವರ್​ ಮಾಡ್ತಾರೆ ಅಂತಾ ಹೇಳ್ತಾರೆ.

blank

ಇನ್ನೂ ನೋಟ್​ ಮುದ್ರಿಸುವ ಟಾಸ್ಕ್​​ನಲ್ಲಿ ಏಪ್ರಾನ್​ ವಿಷಯಕ್ಕೆ ಪ್ರಶಾಂತ್​ ಹಾಗೂ ಮಂಜು ಅವರು ಕಿತ್ತಾಡಿದ್ರು. ಇದಕ್ಕೆ ಕ್ಯಾಪ್ಟನ್​ ದಿವ್ಯಾ ಉರುಡುಗ ತಾವು ಕಂಡ ದೃಶ್ಯದ ಆಧಾರದ ಮೇಲೆ ಮಂಜು ಅವರ ಪರವಾಗಿ ಜಡ್ಜ್​ಮೆಂಟ್​ ನೀಡಿದ್ದರು. ಇದ್ರಿಂದ ಕೋಪಗೊಂಡಿದ್ದ ಪ್ರಶಾಂತ್​ ನ್ಯಾಯ ಸಮ್ಮತವಾದ ಡಿಸಿಸನ್​ ದಿವ್ಯಾ ತೆಗೆದುಕೊಂಡಿಲ್ಲ. ಮೋಸ ಮಾಡಿದ್ದಾಳೆ ಅಂತಾ ಆರೋಪ ಮಾಡ್ತಾರೆ. ಇತ್ತ ನಿನ್ನೆ ನಡೆದ ಎಪಿಸೋಡ್​ನಲ್ಲಿ ಪ್ರಶಾಂತ್​ಗೆ ಇದೇ ವಿಷಯಕ್ಕೆ ಅರವಿಂದ ಟಾಂಗ್​ ನೀಡ್ತಾರೆ. ಇದ್ರಿಂದ ಇಬ್ಬರ ನಡುವಿನ ಕಾಳಗ ವಿಕೋಪಕ್ಕೆ ಹೊಗಿತ್ತು.

ಒಟ್ನಲ್ಲಿ ಇಂದು ನಡೆಯಲಿರುವ ವಾರದ ಕತೆ ಕಿಚ್ಚನ ಜೋತೆಯಲ್ಲಿ ಸುದೀಪ್​ ಯಾರಿಗೆ ಕ್ಲಾಸ್​ ತೆಗೆದುಕೊಳ್ಳಬೇಕು..? ಯಾವ ವಿಚಾರಗಳ ಬಗ್ಗೆ ಪಂಚಾಯ್ತಿ ಮಾಡ್ಬೇಕು..? ಯಾರೂ ಈ ವಾರ ಔಟ್​ ಆಗಬೇಕು..? ಈ ಕುರಿತು ನಿಮ್ಮ ಅಭಿಪ್ರಾಯ ಏನು ಎಂಬುವುದನ್ನು ಕಮೆಂಟ್​ ಮಾಡಿ.

blank

The post ವಾರದ ಕತೆಯಲ್ಲಿ ಸ್ಪರ್ಧಿಗಳಿಗೆ ಇವತ್ತೂ ಇದ್ಯಾ ಕಿಚ್ಚನ ಕ್ಲಾಸ್​..? ತಗೊಂಡ್ರೆ ಯಾರಿಗೆ? appeared first on News First Kannada.

Source: newsfirstlive.com

Source link