ರಾಜೀನಾಮೆ ನೀಡೋ ವಿಚಾರ ಮುಗಿದ ಅಧ್ಯಾಯ‌ -ರಮೇಶ್ ಜಾರಕಿಹೊಳಿ

ರಾಜೀನಾಮೆ ನೀಡೋ ವಿಚಾರ ಮುಗಿದ ಅಧ್ಯಾಯ‌ -ರಮೇಶ್ ಜಾರಕಿಹೊಳಿ

ಬೆಳಗಾವಿ: ಕಳೆದ ಕೆಲ ದಿನಗಳ ಹಿಂದೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ 8-10 ದಿನಗಳಲ್ಲಿ ಸ್ಪಷ್ಟಪಡಿಸುವುದಾಗಿ ಹೇಳಿದ್ದ ಮಾಜಿ ಸಚಿವ ರಮೇಶ್​​ ಜಾರಕಿಹೊಳಿ ಅವರು, ಸದ್ಯ ರಾಜೀನಾಮೆ ನೀಡುವ ವಿಚಾರ ಮುಗಿದ ಅಧ್ಯಾಯ‌ ಎಂದಿದ್ದಾರೆ.

ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್​ ಜಾರಕಿಹೊಳಿ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ‌ ವಿಚಾರ ಮುಗಿದ ಅಧ್ಯಾಯ‌. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮಾಡಿದ್ದು ನಿಜ. ಹಿತೈಷಿಗಳು, ಸ್ವಾಮೀಜಿಗಳು ರಾಜೀನಾಮೆ ನೀಡದಂತೆ ಸಲಹೆ ನೀಡಿದ್ದಾರೆ. ಹಿರಿಯರ ಸಲಹೆ ಹಿನ್ನೆಲೆ ರಾಜೀನಾಮೆ ವಿಚಾರ ಕೈಬಿಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

blankಇದೇ ವೇಳೆ ಕೆಆರ್​ಎಸ್ ಡ್ಯಾಂ ಬಿರುಕಿನ ಬಗ್ಗೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ಟಾಕ್​​​ವಾರ್​ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾರು ಏನು ಮಾತನಾಡಿದ್ದಾರೆ ಜಾಸ್ತಿ ಮಾಹಿತಿ ಇಲ್ಲ. ಎಂ.ಡಿ ಅವರು ಡ್ಯಾಂನಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ಎಂ.ಡಿ ಹೇಳುವುದು ಫೈನಲ್. ಆದರೆ ಸುಮಲತಾ ಯಾಕೆ ಹೀಗೆ ಹೇಳಿದ್ರು ಅಂತ ನನಗೆ ಗೊತ್ತಿಲ್ಲ ಎಂದರು.

ಸಹೋದರ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸುವ ಬಗ್ಗೆಯೂ ಸ್ಪಷ್ಟನೆ ನೀಡಿದ ಅವರು, ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬೆಂಗಳೂರು, ಮುಂಬೈ ಹೋಗಿದೆ. ಸುದ್ದಿಗೋಷ್ಠಿ ಮಾಡುವ ಸಂದರ್ಭ ಬಂದಿಲ್ಲ. ಬಾಲಚಂದ್ರ ಜಾರಕಿಹೊಳಿ ಜೊತೆಗೆ ಈ ಬಗ್ಗೆ ಮಾತನಾಡುತ್ತೇನೆ. ನಾನು ಒಬ್ಬೊಂಟಿಯಾಗುವ ಪ್ರಶ್ನೆ ಇಲ್ಲ. ನಾನೇ ಮಿತ್ರ ಮಂಡಳಿ ಸದಸ್ಯರನ್ನು ಭೇಟಿಯಾಗಿಲ್ಲ ಎಂದರು.

The post ರಾಜೀನಾಮೆ ನೀಡೋ ವಿಚಾರ ಮುಗಿದ ಅಧ್ಯಾಯ‌ -ರಮೇಶ್ ಜಾರಕಿಹೊಳಿ appeared first on News First Kannada.

Source: newsfirstlive.com

Source link