‘ಈ ವಿಚಾರ ಇಲ್ಲಿಗೆ ಬಿಡ್ತೀವಿ.. ಸುಮಲತಾ ಮೇಡಂ KRSಗೆ ಪೂಜೆ‌ ಸಲ್ಲಿಸಿ ಕ್ಷಮೆ ಕೇಳಬೇಕು’

‘ಈ ವಿಚಾರ ಇಲ್ಲಿಗೆ ಬಿಡ್ತೀವಿ.. ಸುಮಲತಾ ಮೇಡಂ KRSಗೆ ಪೂಜೆ‌ ಸಲ್ಲಿಸಿ ಕ್ಷಮೆ ಕೇಳಬೇಕು’

ಮಂಡ್ಯ: ನಾವು ಈ ವಿಚಾರವನ್ನ ಇಲ್ಲಿಗೆ ಕೈ ಬಿಡ್ತೀವಿ. ಆದರೆ ಸುಮಲತಾ ಮೇಡಂ ಕೆಆರ್‌ಎಸ್‌ಗೆ ಬಂದು ಪೂಜೆ‌ ಸಲ್ಲಿಸಿ ತಪ್ಪಾಯ್ತು ಅಂತ ಕ್ಷಮೆ ಕೇಳಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ.. KRS ವಿಚಾರ ಬಿಟ್ಟು ಈಗ ಅಧಿಕಾರಿಗಳ ಟ್ರಾನ್ಸ್​​ಫರ್ ವಿಚಾರಕ್ಕೆ ಹೋಗಿದ್ದಾರೆ. ಏನು ಮುಚ್ಚಿಕೊಳ್ಳಲು ಈ ಹೋರಾಟ ಮಾಡ್ತಿದ್ದಾರೆ? ಎಲ್ಲರೂ ಗಾಬರಿಯಾದಂತೆ ಕಾಣುತ್ತಿದೆ, ಭಾವನಾತ್ಮಕವಾಗಿ ಮಾತನಾಡಲು ಹೋಗಿ ಯಡವಟ್ಟು ಮಾಡಿಕೊಳ್ತಿದ್ದಾರೆ. ಟೆಕ್ನಿಕಲ್ ಟೀಂ KRS ಸುರಕ್ಷಿತ ಎಂದಿದ್ದಾರೆ. ಈಗಲಾದರೂ ಜನರ ಕ್ಷಮೆ ಕೇಳಿ ಈ ಎಪಿಸೋಡ್ ಮುಗ್ಸಿ ಎಂದು ಒತ್ತಾಯಿಸಿದರು.

blank

ಅಳೋದು, ಕರೆಯೋದಕ್ಕೆ ಒಂದ್ಸಲ ಬೆಲೆ
ಅಳೋದು, ಕರೆಯೋದಕ್ಕೆ ಮಂಡ್ಯ ಜನ ಒಂದ್ಸಲ ಬೆಲೆ ಕೊಟ್ಟಿದ್ದಾರೆ. ಮತ್ತೆ ಮತ್ತೆ ಅದನ್ನೇ ಮಾಡಿದ್ರೆ ಜನ ವ್ಯಂಗ್ಯ ಮಾಡ್ತಾರೆ. ನನ್ನ ಸಹೋದರ ಎಂದು ಕರೆದಿದ್ರು, ಸಹೋದರಿ ಬಗ್ಗೆ ವ್ಯಂಗ್ಯ ಕೇಳೋದು ನನಗೆ ಇಷ್ಟ. ನಾನು MLA, ನಾನು ಭಸ್ಮವಾಗಲಿ, ಆಗ್ಲಿ ಮಣ್ಣಾಗೋಗಲಿ ಎಂದು ನನಗೆ ಹೇಳಿದ್ರಲ್ಲ. ಈ ಮಾತುಗಳು ಯಾರ ಗಮನಕ್ಕೂ ಬಂದಿಲ್ವಾ? ಇಂತಹ ಮಾತುಗಳು ಸರಿನಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನಾನು ಮನಸ್ಸು ಮಾಡಿದ್ರೆ ಈಗಲೂ MLA, MP ಆಗ್ತೀನಿ -ರಾಕ್​​ಲೈನ್

ನೀವು ಹಿಟ್ಲರ್ ಅಲ್ಲ
ನಿಮಗೆ ನೀವೇ ಸೂಪರ್ ಪವರ್ ಎಂದು ಭಾವಿಸಬೇಡಿ. ಅಂಬರೀಶ್‌ ಅವರನ್ನ, ನನ್ನನ್ನ ಮಂಡ್ಯದ ಜನ ಸೋಲಿಸಿದ್ದಾರೆ. ಆವೇಶಕ್ಕೊಳಗಾದಾಗ ಇಂತಹ ಮಾತುಗಳು ನಮ್ಮ ನಾಯಕರಿಂದ ಬಂದಿದೆ. ಬನ್ನಿ KRSಗೆ ಒಮ್ಮೆ ಪರಿಶೀಲನೆ ಮಾಡಿ, ತಜ್ಞರೇ ಡ್ಯಾಂ ಸುರಕ್ಷಿತ ಎಂಬ ವರದಿ ಕೊಟ್ಟಿದ್ದಾರೆ. ಡ್ಯಾಂ ಪರಿಶೀಲಿಸಿ ಜನರ ಕ್ಷಮೆ ಕೇಳಿ. ನಿಮಗೆ ನೀವೇ ಹಿಟ್ಲರ್ ಸರ್ಕಾರ ಎಂದುಕೊಂಡಿದ್ದೀರಾ?

ನಟೋರಿಯಸ್ ಎನ್ನದೇ ಇನ್ನೇನು ಹೇಳಬೇಕು?
ಒಂದು ಗಣಿಗಾರಿಕೆ ನಿಲ್ಲಿಸಿ ನೋಡಿ, ಜನ ಬೀದಿಗೆ ಬರುತ್ತಾರೆ. ಈಗಲೇ ಜಲ್ಲಿ, ಕಲ್ಲು ಸಿಗುತ್ತಿಲ್ಲ ಕಾಮಗಾರಿಗಳಿಗೆ. ಅಕ್ರಮ ಇದ್ದರೆ ಸರ್ಕಾರ ಮಟ್ಟದಲ್ಲಿ ತೀರ್ಮಾನ ಮಾಡಿ ಕ್ರಮಕೈಗೊಳ್ಳಲಿ. KRS ಬಿರುಕು ಬಿಟ್ಟಿದೆ ಎಂದು ರಾಜ್ಯದಲ್ಲಿ ಅಶಾಂತಿ ಮೂಡಿಸಿದ ನಿಮ್ಮನ್ನ ನಟೋರಿಯಸ್ ಎನ್ನದೇ ಇನ್ನೇನು ಹೇಳಬೇಕು? ಸಾಮಾನ್ಯ ಜನ ಈ ಹೇಳಿಕೆ ನೀಡಿದ್ರೆ ಇಷ್ಟೋತ್ತಿಗೆ ಕೇಸ್ ಹಾಕಿರೋರು. ಇವರ ವಿರುದ್ಧ ಕ್ರಮ ಯಾಕಿಲ್ಲ? ನಾನು ಇವರನ್ನ ಬಂಧಿಸಿ ಎನ್ನಲ್ಲ, ಯಾಕಂದ್ರೆ ನನ್ನನ್ನ ಸಹೋದರ ಎಂದಿದ್ದಾರೆ. ಬಿರುಕು ಬಿಟ್ಟಿದೆ ಅಂತ ಸುಳ್ಳು ಹೇಳಿರೋದು ದೇಶದ್ರೋಹದ ಕೆಲಸ. ರಾಜ್ಯಪಾಲರು ಯಾಕೆ ಸುಮ್ಮನಿದ್ದಾರೋ ಗೊತ್ತಿಲ್ಲ ಎಂದು ಗುಡುಗಿದರು.

ಇದನ್ನೂ ಓದಿ: ‘ಅಣ್ಣ ತಮ್ಮಂದಿರೆ, ಅಕ್ಕ ತಂಗಿಯರೇ..ಹೋರಾಟ ಮಾಡಬೇಕಾದ ವಿಚಾರ ಬಹಳಷ್ಟಿವೆ’ -ಹೆಚ್​​ಡಿಕೆ ಸಲಹೆ

The post ‘ಈ ವಿಚಾರ ಇಲ್ಲಿಗೆ ಬಿಡ್ತೀವಿ.. ಸುಮಲತಾ ಮೇಡಂ KRSಗೆ ಪೂಜೆ‌ ಸಲ್ಲಿಸಿ ಕ್ಷಮೆ ಕೇಳಬೇಕು’ appeared first on News First Kannada.

Source: newsfirstlive.com

Source link