‘ಬಿಗ್​​ಮನೆ’ಯಲ್ಲಿ ಹೆಚ್ಚಾಯ್ತು ವೈಯಕ್ತಿಕ ದಾಳಿಗಳು.. ನಗು-ಅಳುವಿನಲ್ಲೇ ಕಳೆದೊಯ್ತು ಈ ವಾರ..!

‘ಬಿಗ್​​ಮನೆ’ಯಲ್ಲಿ ಹೆಚ್ಚಾಯ್ತು ವೈಯಕ್ತಿಕ ದಾಳಿಗಳು.. ನಗು-ಅಳುವಿನಲ್ಲೇ ಕಳೆದೊಯ್ತು ಈ ವಾರ..!

ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಆಟದ ದಾರಿ ತಪ್ಪುತ್ತಿದೆ ಎಂಬುವುದು ಫ್ಯಾನ್ಸ್​ಗಳ ಇಂಗಿತ. ವೈಯಕ್ತಿಕ ದಾಳಿಗಳು ಹೆಚ್ಚಾಗುತ್ತಿವೆ. ಬೇರೆಯವರ ಪರ ಮಾತನಾಡಲು ಹೋಗಿ ಮನಸ್ತಾಪ ಬುಗೆಲೆಳುತ್ತಿದೆ.

ಈಗ ಮತ್ತೆ ಪ್ರಶಾಂತ್​ ಮತ್ತು ಅರವಿಂದ್ ಕಿತ್ತಾಡಿದ್ದು, ಮಾತುಗಳು ತಾರಕಕ್ಕೆ ಏರಿ, ಒಂದು ಹಂತಕ್ಕೆ ಕೈಕೈ ಮಿಲಾಸುವುದಕ್ಕೆ ಬಂದು ತಲುಪಿತು. ಆದರೆ ಮನೆಯ ಉಳಿದ ಸದಸ್ಯರ ಮಧ್ಯಪ್ರವೇಶದಿಂದ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ.

blank

ನೋಟ್​ ಮುದ್ರಿಸುವ ಟಾಸ್ಕ್​​ನಲ್ಲಿ ಏಪ್ರಾನ್​ ವಿಷಯಕ್ಕೆ ಪ್ರಶಾಂತ್​ ಹಾಗೂ ಮಂಜು ಅವರು ಕಿತ್ತಾಡಿದ್ರು. ಇದಕ್ಕೆ ಕ್ಯಾಪ್ಟನ್​ ದಿವ್ಯಾ ಉರುಡುಗ ತಾವು ಕಂಡ ದೃಶ್ಯದ ಆಧಾರದ ಮೇಲೆ ಮಂಜು ಅವರ ಪರವಾಗಿ ಜಡ್ಜ್​ಮೆಂಟ್​ ನೀಡಿದ್ದರು. ಇದ್ರಿಂದ ಕೋಪಗೊಂಡಿದ್ದ ಪ್ರಶಾಂತ್​ ನ್ಯಾಯ ಸಮ್ಮತವಾದ ನಿರ್ಧಾರವನ್ನ​ ದಿವ್ಯಾ ತೆಗೆದುಕೊಂಡಿಲ್ಲ. ಮೋಸ ಮಾಡಿದ್ದಾಳೆ. ಹಾಗೇ ಮಂಜು ಕೂಡ ಮೋಸ ಮಾಡಿದ್ದಾನೆ ಎಂದು ಕಿರುಚಾಡಿ, ಅತ್ತು ತಮ್ಮ ಬೇಸರವನ್ನು ಹೊರ ಹಾಕಿದ್ದರು.

ನಿನ್ನೆ ನಡೆದ ಎಪಿಸೋಡ್​ನಲ್ಲಿ ದೊಡ್ಡ ವಾಗ್ವಾದವೇ ಆಗಿದೆ. ಎಲ್ಲರೂ ಕಿಚನ್​ ಏರಿಯಾದಲ್ಲಿ ಇರುವ ಸಂದರ್ಭದಲ್ಲಿ ದಿವ್ಯಾ ಉರುಡುಗ ಅವರ ಕ್ಯಾಪ್ಟನ್​ಶಿಪ್​ ಅವಧಿ ಮುಗಿದಿದೆ ಎಂದು ಬಿಗ್​ ಬಾಸ್​ ಅನೌನ್ಸ್​ ಮಾಡ್ತಾರೆ. ಅದಕ್ಕೆ ದಿವ್ಯಾ ಅವರಿಗೆ ಪ್ರಶಾಂತ್​ ಗುಡ್​ ಜಾಬ್​ ಎಂದು ಹಗ್​ ಮಾಡ್ತಾರೆ. ಅಷ್ಟರಲ್ಲಿ ಇದನ್ನೆಲ್ಲ ನಂಬಬೇಡ, ಹಿಂದೊಂದು ಮುಂದೊಂದು ಮಾತಾಡ್ತಾರೆ ಎಂದು ಅರವಿಂದ್​​ ಪ್ರಶಾಂತ್​ಗೆ ಟಾಂಗ್​ ನೀಡ್ತಾರೆ.

blank

ಈ ಮಾತಿಗೆ ಕೆರಳಿದ ಪ್ರಶಾಂತ್​, ನಾನು ಯಾರಿಗೂ ಹಾಗೆ ಮಾತನಾಡಲ್ಲ. ಪಾಯಿಂಟ್​ ಇಟ್ಟುಕೊಂಡೇ ಮಾತ್ನಾಡ್ತಿನಿ. ಇದು ನನ್ನ ಮತ್ತು ದಿವ್ಯಾ ಅವರ ವಿಷಯ ನೀನು ಮಾತನ್ನಾಡಬೇಡ. ನಾನು ಅವರು ಈಗಾಗಲೇ ಮಾತ್ನಾಡಿ ಬಗೆಹರಿಸಿಕೊಂಡಿದ್ವಿ. ಅಲ್ಲಿ ದಿವ್ಯಾ ರಾಂಗ್​ ಡಿಸಿಸನ್​ ಕೊಟ್ಟಿದ್ರು ಅದಕ್ಕೆ ಹೇಳಿದೆ. ನೀನ್​ ಮಾತನಾಡಬೇಡ ಅಂತಾರೆ. ಇಷ್ಟಕ್ಕೆ ಸುಮ್ಮನ್ನಾಗದ ಅರವಿಂದ್, ಪ್ರಶಾಂತ್​ ಅವರನ್ನ ಟ್ರಿಗರ್​ ಮಾಡ್ತಾರೆ. ಮತ್ತಷ್ಟು ಕೆಂಡವಾದ ಪ್ರಶಾಂತ್​ ಕಿರುಚಾಡಿ ರಂಪಾಟ ಮಾಡ್ತಾರೆ. ಆದರೆ ಇಲ್ಲೊಂದು ಇಂಟರೆಸ್ಟಿಂಗ್ ವಿಷ್ಯ ಇದೆ. ಸೋಶಿಯಲ್​ ಮಿಡಿಯಾದಲ್ಲಿ ಅರವಿಂದ್ ಫ್ಯಾನ್ಸ್​ ಕೂಡ ಪ್ರಶಾಂತ್​ ಅವರ ಪರ ಬ್ಯಾಟ್​ ಬೀಸ್ತಿದ್ದಾರೆ. ಈ ಇಡೀ ವಾರ ಅಳು-ನಗುವಿನಲ್ಲಿ ಕಳೆದಿರುವ ಮನೆ. ಸಿಟ್ಟಲ್ಲಿ ತಮ್ಮನ್ನ ತಾವೇ ಸುಟ್ಟುಕೊಂಡಿದ್ದು ಸುಳ್ಳಲ್ಲ.

ಇದನ್ನೂ ಓದಿ: ವಾರದ ಕತೆಯಲ್ಲಿ ಸ್ಪರ್ಧಿಗಳಿಗೆ ಇವತ್ತೂ ಇದ್ಯಾ ಕಿಚ್ಚನ ಕ್ಲಾಸ್​..? ತಗೊಂಡ್ರೆ ಯಾರಿಗೆ?

The post ‘ಬಿಗ್​​ಮನೆ’ಯಲ್ಲಿ ಹೆಚ್ಚಾಯ್ತು ವೈಯಕ್ತಿಕ ದಾಳಿಗಳು.. ನಗು-ಅಳುವಿನಲ್ಲೇ ಕಳೆದೊಯ್ತು ಈ ವಾರ..! appeared first on News First Kannada.

Source: newsfirstlive.com

Source link