ಲಾಕ್​​​​​ಡೌನ್‌ ಸಡಿಲಿಕೆ ಆಗ್ತಿದ್ದಂತೆ ಅಂಜನಾದ್ರಿ ಬೆಟ್ಟಕ್ಕೆ ಹರಿದುಬಂದ ಭಕ್ತ ಸಾಗರ

ಲಾಕ್​​​​​ಡೌನ್‌ ಸಡಿಲಿಕೆ ಆಗ್ತಿದ್ದಂತೆ ಅಂಜನಾದ್ರಿ ಬೆಟ್ಟಕ್ಕೆ ಹರಿದುಬಂದ ಭಕ್ತ ಸಾಗರ

ಕೊಪ್ಪಳ: ರಾಜ್ಯದಲ್ಲಿ ಲಾಕ್​ಡೌನ್​ ಸಡಿಲಿಕೆಯಾಗಿ ನಿರ್ಬಂಧಗಳು ತೆರವಾಗುತ್ತಿದಂತೆ ಕೊಪ್ಪಳದ ಆನೆಗೊಂದಿಯ ಅಂಜನಾದ್ರಿ ಬೆಟ್ಟಕ್ಕೆ ಭಕ್ತರ ದಂಡು ಹರಿದುಬಂದಿದೆ.

blankಕೊರೊನಾ ಲಾಕ್​ಡೌನ್ ಹಿನ್ನೆಲೆ ಭಕ್ತರಿಗೆ ಹನುಮನ ದರ್ಶನಕ್ಕೆ ನಿಷೇಧ ವಿಧಿಸಲಾಗಿತ್ತು. ಲಾಕ್​​ಡೌನ್​​ ನಿಯಮಗಳಲ್ಲಿ ಸಡಿಲಿಕೆಯಾದ ನಂತರ ಮೊದಲ ಶನಿವಾರವಾದ ಇಂದು ಭಾರೀ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಬೆಳಗ್ಗೆಯಿಂದ ಸಾವಿರಾರು ಭಕ್ತರು ಹನುಮನ ದರ್ಶನ ಪಡೆದುಕೊಂಡಿದ್ದಾರೆ.

blankಮಹಾರಾಷ್ಟ್ರ ಸೇರಿದಂತೆ ಅಕ್ಕಪಕ್ಕ ಜಿಲ್ಲೆಗಳಿಂದ ಆಗಮಿಸಿರುವ ಜನರು ದೇವರ ದರ್ಶನಕ್ಕೆ ಮುಗಿಬಿದ್ದಿರುವ ದೃಶ್ಯಗಳು ಕಂಡು ಬಂದಿತ್ತು. ಹನುಮನ ದರ್ಶನ ಪಡೆದ ಭಕ್ತರು, ಆ ಬಳಿಕ ಆನೆಗೊಂದಿ, ಹಂಪಿ, ತುಂಗಾಭದ್ರ ಪ್ರವಾಸಿ ಸ್ಥಳಗಳಿಗೆ ತೆರಳುತ್ತಿದ್ದಾರೆ.

blank

The post ಲಾಕ್​​​​​ಡೌನ್‌ ಸಡಿಲಿಕೆ ಆಗ್ತಿದ್ದಂತೆ ಅಂಜನಾದ್ರಿ ಬೆಟ್ಟಕ್ಕೆ ಹರಿದುಬಂದ ಭಕ್ತ ಸಾಗರ appeared first on News First Kannada.

Source: newsfirstlive.com

Source link