ಹರ್ಲೀನ್​ ಬೊಂಬಾಟ್​ ಕ್ಯಾಚ್​​ಗೆ ಕಿಚ್ಚ ಸುದೀಪ್ ಫಿದಾ!

ಹರ್ಲೀನ್​ ಬೊಂಬಾಟ್​ ಕ್ಯಾಚ್​​ಗೆ ಕಿಚ್ಚ ಸುದೀಪ್ ಫಿದಾ!

ಟೀಮ್​​ ಇಂಡಿಯಾ ಆಟಗಾರ್ತಿ ಹರ್ಲೀನ್​ ಡಿಯೋಲ್​ ಹಿಡಿದ ಫೆಂಟಾಸ್ಟಿಕ್​ ಕ್ಯಾಚ್​​ಗೆ ಕ್ರಿಕೆಟ್​​ ಲೋಕವೇ ದಂಗಾಗಿದೆ. ಇಂಗ್ಲೆಂಡ್​ ವನಿತೆಯರ ವಿರುದ್ಧ ಟೀಮ್​ ಇಂಡಿಯಾ ಸೋತರೂ, ಹರ್ಲೀನ್​ ಕ್ಯಾಚ್​ ಮಾತ್ರ​ ಎಲ್ಲರನ್ನ ನಿಬ್ಬೆರಗಾಗಿಸಿದೆ.

19ನೇ ಓವರ್​​ನಲ್ಲಿ ಶಿಖಾ ಪಾಂಡೆ ಎಸೆದ ಚೆಂಡನ್ನ ಕ್ರೀಸ್​​ನಲ್ಲಿದ್ದ ಆ್ಯಮಿ ಜೋನ್ಸ್​ ಸಿಕ್ಸರ್​​​​​ ಬೀಸಿದ್ರು. ಆದರೆ ಈ ವೇಳೆ ಅಲ್ಲಿದ್ದ ಹರ್ಲೀನ್,​​ ಹಾರಿ ಚೆಂಡನ್ನ ಹಿಡಿದುಕೊಂಡ್ರು. ಕ್ಯಾಚ್​ ಹಿಡಿದ ವೇಳೆ ಅವರು ತನ್ನ ಹಿಡಿತವನ್ನ ಕಳೆದುಕೊಂಡ್ರು. ಆಗ ಚೆಂಡನ್ನ ಕೈಯಿಂದ ಮೇಲಕ್ಕೆ ಎಸೆದರು. ಇನ್ನು ಚೆಂಡನ್ನ ಮೇಲಕ್ಕೆ ಎಸೆದು ಬೌಂಡರಿ ಗೆರೆ ಪ್ರವೇಶಿಸಿದ್ದ ಹರ್ಲೀನ್, ಬೌಂಡರಿ ಲೈನ್​ನಿಂದಲೇ ಚಿರತೆಯಂತೆ ಹಾರಿ ಅದನ್ನ ಕ್ಯಾಚ್​ ಆಗಿ ಪರಿವರ್ತಿಸಿದ್ರು. ಆ ಮೂಲಕ ಜೋನ್ಸ್​ ಔಟ್ ಆಗಲು ಕಾರಣರಾದ್ರು.

 

ಹರ್ಲೀನ್​ ಅವರ ಕ್ಯಾಚ್ ನೋಡಿದ ಕ್ರಿಕೆಟ್​ ಲೋಕದ ಅಭಿಮಾನಿಗಳು ಫಿದಾ ಆಗಿದ್ದು, ನಟ ಕಿಚ್ಚ ಸುದೀಪ್, ಖ್ಯಾತ ಉದ್ಯಮಿ ಹಾಗೂ ಮಹೀಂದ್ರಾ ಗುಂಪಿನ ಅಧ್ಯಕ್ಷ ಆನಂದ್ ಮಹೀಂದ್ರಾ, ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಹಲವಾರು ಮಂದಿ ಮೆಚ್ಚಗೆ ಸೂಚಿಸಿ ಪ್ರತಿಕ್ರಿಯೆ ನೀಡಿದ್ದಾರೆ.

 

The post ಹರ್ಲೀನ್​ ಬೊಂಬಾಟ್​ ಕ್ಯಾಚ್​​ಗೆ ಕಿಚ್ಚ ಸುದೀಪ್ ಫಿದಾ! appeared first on News First Kannada.

Source: newsfirstlive.com

Source link