ಕೊರೊನಾ ಸಾಂಕ್ರಾಮಿಕ ಕಡಿಮೆಯಾಗ್ತಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ -WHO ಮುಖ್ಯ ವಿಜ್ಞಾನಿ ಸೌಮ್ಯ

ಕೊರೊನಾ ಸಾಂಕ್ರಾಮಿಕ ಕಡಿಮೆಯಾಗ್ತಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ -WHO ಮುಖ್ಯ ವಿಜ್ಞಾನಿ ಸೌಮ್ಯ

ಡೆಲ್ಟಾ ರೂಪಾಂತರಿ ಹರಡಿದಂತೆಲ್ಲಾ ವಿಶ್ವದ ಬಹುತೇಕ ಪ್ರದೇಶಗಳಲ್ಲಿ ಕೊರೊನಾ ಹೆಚ್ಚಾಗುತ್ತಲೇ ಇದೆ. ಸಾಂಕ್ರಾಮಿಕ ಕಡಿಮೆಯಾಗುತ್ತಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ ಅಂತ ವಿಶ್ವ ಆರೋಗ್ಯ ಸಂಸ್ಥೆಯ(WHO) ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಸೌಮ್ಯ, ಕೆಲವು ದೇಶಗಳಲ್ಲಿ ಲಸಿಕೆ ವಿತರಣೆಯಿಂದ ಗಂಭೀರ ಸೋಂಕು ಪ್ರಕರಣಗಳು ಹಾಗೂ ಜನರು ಆಸ್ಪತ್ರೆಗೆ ದಾಖಲಾಗುವುದು ಕಡಿಮೆಯಾಗಿದೆ. ಆದ್ರೆ ಜಗತ್ತಿನ ಬಹುತೇಕ ಕಡೆ ಆಮ್ಲಜನಕ ಕೊರತೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗಿದೆ, ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದಿದ್ದಾರೆ.

blank

ಕಳೆದ 24 ಗಂಟೆಗಳಲ್ಲಿ ವಿಶ್ವದಾದ್ಯಂತ 5,00,000 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 9,300 ಸೋಂಕಿತರು ಸಾವನ್ನಪ್ಪಿದ್ದಾರೆ. ಇದನ್ನ ನೋಡಿದಾಗ ಸಾಂಕ್ರಾಮಿಕ ಕಡಿಮೆಯಾಗುತ್ತಿಲ್ಲ ಅನ್ನೋದು ತಿಳಿಯುತ್ತದೆ. ಐದರಿಂದ ಆರು WHO ಪ್ರಾಂತ್ಯಗಳಲ್ಲಿ ಕೇಸ್​ಗಳು ಏರಿಕೆಯಾಗ್ತಿವೆ. ಆಫ್ರಿಕಾದಲ್ಲಿ ಸಾವಿನ ಪ್ರಮಾಣ 2 ವಾರಗಳಲ್ಲಿ ಶೇಕಡ 30ರಿಂದ ಶೇ. 40ಕ್ಕೆ ಏರಿದೆ. ವೇಗವಾಗಿ ಹರಡುತ್ತಿರುವ ಡೆಲ್ಟಾ ತಳಿ, ವಿಶ್ವದಾದ್ಯಂತ ವ್ಯಾಕ್ಸಿನೇಷನ್ ನಿಧಾನಗತಿಯಲ್ಲಿ ಆಗುತ್ತಿರುವುದು ಹಾಗೂ ಮಾಸ್ಕ್​ ಧಾರಣೆ, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನ ಸಡಿಲಿಕೆ ಮಾಡಿರುವುದೇ ಈ ಏರಿಕೆಗೆ ಪ್ರಮುಖ ಕಾರಣ ಎಂದು ಸೌಮ್ಯ ತಿಳಿಸಿದ್ದಾರೆ.

 

ಅಂದ್ಹಾಗೆ ಲಾಕ್​ಡೌನ್ ಸಡಿಲಿಕೆ ಮಾಡುವಾಗ ಎಚ್ಚರಿಕೆ ವಹಿಸುವಂತೆ WHO ಇತ್ತೀಚೆಗೆ ಸರ್ಕಾರಗಳಿಗೆ ಸೂಚಿಸಿದೆ. ಇಂಗ್ಲೆಂಡ್​​ನಲ್ಲಿ ಜುಲೈ 19 ರಿಂದ ನಿರ್ಬಂಧಗಳನ್ನ ತೆರವು ಮಾಡಲಿದ್ದು, ಮಾಸ್ಕ್​ ಧರಿಸೋದು ಜನರ ವೈಯಕ್ತಿಕ ಆಯ್ಕೆಗೆ ಬಿಟ್ಟಿದ್ದು ಎಂದು ಹೇಳಲಾಗಿದೆ. ಇನ್ನು ಅಮೆರಿಕಾ ಹಾಗೂ ಯೂರೋಪ್​ನಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾದ ನಂತರ ನಿರ್ಬಂಧಗಳನ್ನ ಸಡಿಲಿಕೆ ಮಾಡಲಾಗಿದೆ.

The post ಕೊರೊನಾ ಸಾಂಕ್ರಾಮಿಕ ಕಡಿಮೆಯಾಗ್ತಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ -WHO ಮುಖ್ಯ ವಿಜ್ಞಾನಿ ಸೌಮ್ಯ appeared first on News First Kannada.

Source: newsfirstlive.com

Source link