ಜನ ಮಾತಾಡೋ ಟೈಂ ಬರುತ್ತೆ.. ಆಗ ಅವ್ರು ಸೈಲೆಂಟ್ ಆಗ್ತಾರೆ -ಸುಮಲತಾ

ಜನ ಮಾತಾಡೋ ಟೈಂ ಬರುತ್ತೆ.. ಆಗ ಅವ್ರು ಸೈಲೆಂಟ್ ಆಗ್ತಾರೆ -ಸುಮಲತಾ

ಬೆಂಗಳೂರು: ವಿವಾದವನ್ನು ಶುರು ಮಾಡಿದ್ದೆ ಅವರು.. ಈಗ ಅವರೇ ಅಂತ್ಯ ಮಾಡ್ತಿದ್ದೀನಿ ಅಂದರೇ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಲತಾ ಅವರು, ಇದು ಅವರಾಗಿ ಅವರೇ ಮಾಡಿಕೊಂಡಿದ್ದಾರೆ. ನಾನು ಯಾವತ್ತೂ ವಿಷಯ ಡೈವರ್ಟ್ ಮಾಡಲು ಪ್ರಯತ್ನಿಸಿಲ್ಲ, ನಾನು ವೈಯಕ್ತಿಕ ಟೀಕೆ ಮಾಡಲಿಲ್ಲ. ನನ್ನ ಹೋರಾಟವೇ ಬೇರೆ, ನನ್ನ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ. ನಾನು ದಿಶಾ ಸಭೆಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡಿದ್ದೆ. ಆಗ ನಾನು ಯಾರ ಹೆಸರನ್ನೂ ಉಲ್ಲೇಖ ಮಾಡಿಲ್ಲ. ಇವರೇ ವೈಯುಕ್ತಿಕವಾಗಿ ಟೀಕೆ ಟಿಪ್ಪಣಿ ಮಾಡಿದ್ದರು ಎಂದರು.

blank

ಕ್ಷಮೆ ಕೇಳಬೇಕು ಎಂಬ ಜೆಡಿಎಸ್ ಶಾಸಕ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಂಸದರು, ಅವರು ಈಗಲೂ ಡಿಕ್ಟೇಟರ್ ಆಗಿ ಅವರು ಹೇಳಿದ್ದೆ ನಡೆಯಬೇಕು ಎಂದು ಕೊಂಡಿದ್ದಾರೆ. ಅವರ ಹೇಳಿಕೆಗಳಿಂದ ಜೆಡಿಎಸ್ ಪಕ್ಷಕ್ಕೆ ರಾಜ್ಯಾದಾದ್ಯಂತ ಎಷ್ಟು ಡ್ಯಾಮೇಜ್​ ಆಗಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಒಂದು ಜಿಲ್ಲೆಯ ಸಂಸದೆಯಾಗಿ ನನ್ನ ಕೆಲಸ ಏನು ಎಂಬುವುದು ಗೊತ್ತು ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ.

ಅವರೇ ಕ್ಷಮೆ ಕೇಳ ಬೇಕು ಎಂದು ಅವರೇ ಹೋರಾಟ ಮಾಡುತ್ತಿರಬೇಕು ಎಂಬ ಕನ್ಫ್ಯೂಷನ್ ಆಗುತ್ತಿದೆ. ಅವರು ಮಾತನಾಡುತ್ತಲೇ ಇರಬೇಕು. ಅವರು ಹೀಗೆ ಮಾತನಾಡುತ್ತಾ ಇರಬೇಕು.. ಜನ ಮಾತಡೋ ಟೈಮ್ ಬರುತ್ತೆ ಆಗ ಇವರು ಸುಮನ್ನೆ ಇರಬೇಕಾಗುತ್ತದೆ. ಜನರಿಗೆ ಅವರ ನಿಜ ಮುಖವಾಡ ಗೊತ್ತಾಗುತ್ತದೆ. ಹಂತ ಹಂತವಾಗಿ ಅವರ ಆಸಲಿ ರೂಪ ಗೊತ್ತಾಗುತ್ತಿದೆ. ಆದ್ದರಿಂದ ಆಗೋದೆಲ್ಲ ಒಳ್ಳೆಯದಕ್ಕೆ ಆಗಿದೆ. ಈಗಾಗಲೇ ಅಕ್ರಮ ಗಣಿಗಾರಿಕೆ ಬಗ್ಗೆ ಕ್ರಮ ಕೈಗೊಳ್ಳಲು ಸಿಎಂ ಅವರಿಗೆ ಪತ್ರವನ್ನು ನೀಡಿದ್ದೇನೆ. ಕೆಆರ್​ಎಸ್ ಮತ್ತು ಬೇಬಿ ಬೆಟ್ಟಕ್ಕೂ ಭೇಟಿ ನೀಡುತ್ತೇನೆ. ಗಣಿ ಸಚಿವ ಭೇಟಿಗೂ ಇಂದು ಸಮಯವನ್ನು ಕೇಳಿದ್ದೇನೆ. ಶೀಘ್ರವೇ ಸಿಎಂ ಅವರನ್ನು ಮತ್ತೊಮ್ಮೆ ಭೇಟಿ ಮಾಡುತ್ತೇನೆ ಎಂದರು.

ಇದನ್ನೂ ಓದಿ: ‘ಈ ವಿಚಾರ ಇಲ್ಲಿಗೆ ಬಿಡ್ತೀವಿ.. ಸುಮಲತಾ ಮೇಡಂ KRSಗೆ ಪೂಜೆ‌ ಸಲ್ಲಿಸಿ ಕ್ಷಮೆ ಕೇಳಬೇಕು’

ಇದನ್ನೂ ಓದಿ: ‘ಅಣ್ಣ ತಮ್ಮಂದಿರೆ, ಅಕ್ಕ ತಂಗಿಯರೇ..ಹೋರಾಟ ಮಾಡಬೇಕಾದ ವಿಚಾರ ಬಹಳಷ್ಟಿವೆ’ -ಹೆಚ್​​ಡಿಕೆ ಸಲಹೆ

The post ಜನ ಮಾತಾಡೋ ಟೈಂ ಬರುತ್ತೆ.. ಆಗ ಅವ್ರು ಸೈಲೆಂಟ್ ಆಗ್ತಾರೆ -ಸುಮಲತಾ appeared first on News First Kannada.

Source: newsfirstlive.com

Source link