ಕೊರೊನಾ ಎಫೆಕ್ಟ್; ಭಾರತ- ಶ್ರೀಲಂಕಾ ಕ್ರಿಕೆಟ್ ಸರಣಿ 5 ದಿನ ಮುಂದೂಡಿದ ಬಿಸಿಸಿಐ

ಕೊರೊನಾ ಎಫೆಕ್ಟ್; ಭಾರತ- ಶ್ರೀಲಂಕಾ ಕ್ರಿಕೆಟ್ ಸರಣಿ 5 ದಿನ ಮುಂದೂಡಿದ ಬಿಸಿಸಿಐ

ಜುಲೈ 13ರಿಂದ ಪ್ರಾರಂಭವಾಗಬೇಕಿದ್ದ ಭಾರತ-ಶ್ರೀಲಂಕಾ ಸರಣಿಗೆ ಸರಣಿಯನ್ನ ಜುಲೈ18ಕ್ಕೆ ಮುಂದೂಡಲಾಗಿದೆ. ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್​ ಹಾಗೂ ಡೇಟಾ ವಿಶ್ಲೇಷಕರಿಗೂ ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ, ಶ್ರೀಲಂಕಾ ಕ್ರಿಕೆಟ್​ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಈ ಮೊದಲು ಜುಲೈ 13ರಿಂದ ಜುಲೈ 25ರ ತನಕ ಏಕದಿನ ಮತ್ತು ಟಿ20 ಸರಣಿ ನಡೆಸಲು ತೀರ್ಮಾನಿಸಲಾಗಿತ್ತು. ಆದ್ರೀಗ ಬಿಡುಗಡೆಯಾದ ಪರಿಷ್ಕೃತ ಪಟ್ಟಿಯಲ್ಲಿ, ಅಂದುಕೊಂಡ ದಿನಾಂಕಕ್ಕಿಂತ ಐದು ದಿನ ಮುಂದಕ್ಕೆ ಹೋಗಿದೆ. ಹೊಸದಾಗಿ ಬಿಡುಗಡೆಯಾದ ವೇಳಾಪಟ್ಟಿ ಪ್ರಕಾರ, ಜುಲೈ 18ರಿಂದ ಏಕದಿನ ಮತ್ತು ಟಿ20 ಸರಣಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​​ ಶಾ ಹೇಳಿದ್ದಾರೆ.

ಪರಿಷ್ಕೃತ ವೇಳಾಪಟ್ಟಿ

ಏಕದಿನ ಸರಣಿ

  • ಮೊದಲ ಏಕದಿನ – ಜುಲೈ 18
  • ಎರಡನೇ ಏಕದಿನ – ಜುಲೈ 20
  • ಮೂರನೇ ಏಕದಿನ – ಜುಲೈ 23

ಟಿ20 ಸರಣಿ

  • ಮೊದಲ ಟಿ20 – ಜುಲೈ 25
  • ಎರಡನೇ ಟಿ20 – ಜುಲೈ 27
  • ಮೂರನೇ ಟಿ20 – ಜುಲೈ 29

The post ಕೊರೊನಾ ಎಫೆಕ್ಟ್; ಭಾರತ- ಶ್ರೀಲಂಕಾ ಕ್ರಿಕೆಟ್ ಸರಣಿ 5 ದಿನ ಮುಂದೂಡಿದ ಬಿಸಿಸಿಐ appeared first on News First Kannada.

Source: newsfirstlive.com

Source link