ಭಾರತ-ಶ್ರೀಲಂಕಾ ಸರಣಿಗೆ ಕೊರೊನಾ ಕಾಟ -ಜುಲೈ 18ಕ್ಕೆ ಸರಣಿ ಆರಂಭ

ಕೊಲಂಬೋ: ಭಾರತ ಹಾಗೂ ಶ್ರೀಲಂಕಾ ನಡುವಿನ ನಿಗದಿತ ಓವರ್‍ ಗಳ ಕ್ರಿಕೆಟ್ ಸರಣಿಗೆ ಕೊರೊನಾ ಕಾಟ ಕೊಟ್ಟಿದೆ. ಜುಲೈ 13 ರಂದು ಪ್ರಾರಂಭವಾಗಬೇಕಾಗಿದ್ದ ಸರಣಿ ಜುಲೈ 18ಕ್ಕೆ ಮುಂದೂಡಲ್ಪಟ್ಟಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೇ ಶಾ ಸ್ಪಷ್ಟಪಡಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸದ ಬಳಿಕ ತವರಿಗೆ ಮರಳಿದ ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್, ಜಿಂಬಾಬ್ವೆಯ ಗ್ರ್ಯಾಂಟ್ ಫ್ಲವರ್ ಮತ್ತು ಅಂಕಿಸಂಖ್ಯೆ ವಿಶ್ಲೇಷಕ ಜಿ.ಟಿ ನಿರೋಶನ್ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಭಾರತ ಹಾಗೂ ಲಂಕಾ ಸರಣಿಯನ್ನು 5 ದಿನಗಳ ಕಾಲ ಮುಂದೂಡಲ್ಪಟ್ಟು ಜುಲೈ 18ರಿಂದ ಸರಣಿ ಆರಂಭಕ್ಕೆ ಮರು ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: 2 ವರ್ಷಗಳ ಬಳಿಕ ಶ್ರೀಲಂಕಾ ಪ್ರವಾಸದಲ್ಲಿ ಕಾಣಿಸಿಕೊಳ್ಳಲಿದೆ ಭಾರತದ ಸ್ಟಾರ್ ಸ್ಪಿನ್ ಜೋಡಿ

ಈ ಹಿಂದೆ ಜುಲೈ 13ರಿಂದ ಆರಂಭವಾಗಿ ಜುಲೈ 25ಕ್ಕೆ ಸರಣಿ ಅಂತ್ಯವಾಗುತ್ತಿತ್ತು. ಅದರೆ ಇದೀಗ ಸರಣಿ ಜುಲೈ 18ರಿಂದ ಸರಣಿ ಆರಂಭವಾಗಲಿದ್ದು, 3 ಪಂದ್ಯಗಳ ಏಕದಿನ ಸರಣಿ ಜುಲೈ 18,20 ಮತ್ತು 23ರಂದು ಕೊಲಂಬೋದ ಆರ್ ಪೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಆ ಬಳಿಕ ಜುಲೈ 27ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ ಎಂದು ವರದಿಯಾಗಿದೆ.

The post ಭಾರತ-ಶ್ರೀಲಂಕಾ ಸರಣಿಗೆ ಕೊರೊನಾ ಕಾಟ -ಜುಲೈ 18ಕ್ಕೆ ಸರಣಿ ಆರಂಭ appeared first on Public TV.

Source: publictv.in

Source link