ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ಎಸ್ಕೇಪ್ ಆಗಲು ಹೋಗಿ ಸಿಕ್ಕಿಬಿದ್ದ

ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ಎಸ್ಕೇಪ್ ಆಗಲು ಹೋಗಿ ಸಿಕ್ಕಿಬಿದ್ದ

ಬೆಂಗಳೂರು: ಪತ್ನಿಯ ಶೀಲದ ಮೇಲೆ ಸಂದೇಹ ಪಟ್ಟು ಕೊಲೆ‌ ಮಾಡೋಕೆ ಮುಂದಾಗಿ ನಾಪತ್ತೆಯಾಗಿದ್ದ ಪತಿಯನ್ನು ಪೊಲೀಸರು 24 ಗಂಟೆಯಲ್ಲೇ ಹೆಡೆಮುರಿ ಕಟ್ಟಿದ್ದಾರೆ.

ಅಸ್ಸಾಂ ಮೂಲದ ಅನ್ವರ್​ ಬೇಗಂ ಪತಿ ಭುಜ್ರತ್​ ಅಲಿ ತನ್ನ ಶೀಲದ ಮೇಲೆ ಶಂಕಿಸುತ್ತಿದ್ದಾನೆಂದು ಮನೆ ಬಿಟ್ಟು ಬಂದು ನಗರದ ಮಾರತ್​ಹಳ್ಳಿಯ ಬ್ರಿಡ್ಜ್​ನ ಕೆಳಗೆ ವಾಸಿಸುತ್ತಿದ್ದಳು. ವಿಷಯ ತಿಳಿದ ಪತಿ ಭುಜ್ರತ್​ ಅಲಿ ಸ್ಥಳಕ್ಕಾಗಮಿಸಿ ಪತ್ನಿಯನ್ನು ಕೊಲ್ಲಲು ಯತ್ನಿಸಿದ್ದಾನೆ. ಚಾಕುವಿನಿಂದ ಮುಖ ಕುಯ್ದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಈ ವೇಳೆ ಪತ್ನಿ ಮೂರ್ಛೆ ತಪ್ಪಿ ಬಿದ್ದಿದ್ದು, ಸತ್ತು ಹೋಗಿದ್ದಾಳೆಂದು ನಂಬಿ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಬೆಳಗ್ಗೆ ಪೊಲೀಸರಿಗೆ ಘಟನೆಯ ಕುರಿತು ಮಾಹಿತಿ ದೊರಕಿದ್ದು ಇನ್ಸ್​ಪೆಕ್ಟರ್​ ಎಸ್.ಎಲ್. ಆರ್ ರೆಡ್ಡಿ ಹಾಗೂ ಎಸ್ಐ ಸುನೀಲ್‌ ಮತ್ತು ಮಂಜುನಾಥ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಬೆನ್ನು ಹತ್ತಿದ ಪೊಲೀಸರಿಗೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿರಲಿಲ್ಲ.

 

blank

ಕೊನೆಗೆ ಅಲ್ಲೇ ಹತ್ತಿರದ ಸೆಕ್ಯೂರಿಟಿ ಗಾರ್ಡ್​​ನನ್ನ ಪೊಲೀಸರು ವಿಚಾರಿಸಿದಾಗ ಆರೋಪಿ ಬಗ್ಗೆ ಒಂದಿಷ್ಟು ಮಾಹಿತಿ ಸಿಕ್ಕಿದೆ. ಆರೋಪಿ ಕೆ. ಆರ್​. ಪುರಂಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದಾನೆಂದು ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೆ​ ತಿಳಿಸಿದ್ದಾರೆ. ಕೊನೆಗೂ ತನಿಖೆಯ ಬೆನ್ನೇರಿ ಹೊರಟ ಪೊಲೀಸರು ಕೆಆರ್​. ಪುರಂ ರೈಲ್ವೇ ಸ್ಟೇಷನ್​​ನಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ.

The post ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ಎಸ್ಕೇಪ್ ಆಗಲು ಹೋಗಿ ಸಿಕ್ಕಿಬಿದ್ದ appeared first on News First Kannada.

Source: newsfirstlive.com

Source link