ದಿವ್ಯಾ-ಪ್ರಶಾಂತ್ ಕಾಳಗ; ಅರವಿಂದ್​ ಎದುರು ಕಣ್ಣೀರಧಾರೆ ಹರಿಸಿದ ಉರುಡುಗ

ದಿವ್ಯಾ-ಪ್ರಶಾಂತ್ ಕಾಳಗ; ಅರವಿಂದ್​ ಎದುರು ಕಣ್ಣೀರಧಾರೆ ಹರಿಸಿದ ಉರುಡುಗ

ನೋಟ್​ ಮುದ್ರಿಸುವ ಟಾಸ್ಕ್​​ನಲ್ಲಿ ಏಫ್ರಾನ್​ ವಿಷಯಕ್ಕೆ ಪ್ರಶಾಂತ್​ ಹಾಗೂ ಮಂಜು ಅವರು ಕಿತ್ತಾಡಿದ್ರು. ಇದಕ್ಕೆ ಕ್ಯಾಪ್ಟನ್​ ದಿವ್ಯಾ ಉರುಡುಗ ತಾವು ಕಂಡ ದೃಶ್ಯದ ಆಧಾರದ ಮೇಲೆ ಮಂಜು ಅವರ ಪರವಾಗಿ ಜಡ್ಜ್​ಮೆಂಟ್​ ನೀಡಿದ್ದರು. ಇದ್ರಿಂದ ಕೋಪಗೊಂಡಿದ್ದ ಪ್ರಶಾಂತ್​ ನ್ಯಾಯ ಸಮ್ಮತವಾದ ಡಿಸಿಷನ್​ನ್ನು​ ದಿವ್ಯಾ ತೆಗೆದುಕೊಂಡಿಲ್ಲ.. ಮೋಸ ಮಾಡಿದ್ದಾಳೆ ಅಂತಾ ಆರೋಪ ಮಾಡಿದ್ರು.

ನಿನ್ನೆಯ ಬಿಗ್​ ಬಾಸ್​ ಎಪಿಸೋಡ್​ನಲ್ಲಿ ಪ್ರಶಾಂತ್​ಗೆ ಅರವಿಂದ್ ಟಾಂಗ್​ ನೀಡ್ತಾರೆ. ಇದ್ರಿಂದ ಇಬ್ಬರ ನಡುವಿನ ಕಾಳಗ ವಿಕೋಪಕ್ಕೆ ಹೋಗಿತ್ತು. ಈ ವಿಚಾರವಾಗಿ ದಿವ್ಯಾ ಉರುಡುಗ ಅರವಿಂದ್‌ ಜೊತೆ ಚರ್ಚಿಸಿ ಕಣ್ಣೀರಿಟ್ಟರು.

blank

ನಾನು ನೋಡಿದಾಗ ಮಂಜನ ಕುತ್ತಿಗೆಯಲ್ಲಿ ಏಫ್ರಾನ್ ಇತ್ತು. ಪ್ರಶಾಂತ್​ ಕೈಯಲ್ಲಿ ಹಿಡಿದಿದ್ರು. ನಾನು ಕಣ್ಣಾರೆ ನೋಡಿದ್ದೇನೆ. ರೂಲ್ಸ್​ ಪ್ರಕಾರ ಯಾರ ಕುತ್ತಿಗೆಯಲ್ಲಿ ಏಫ್ರಾನ್​ ಇರುತ್ತದೆಯೋ ಅವರಿಗೆ ಏಫ್ರಾನ್ ಅಂತಾ ಇದೆ. ಅದಕ್ಕೆ ನಾನು ಮಂಜನ ಪರವಾಗಿ ನಿರ್ಧಾರ ತೆಗೆದುಕೊಂಡೆ. ಇದ್ರಲ್ಲಿ ಫೇವರೆಟಿಸಮ್​ ಎಲ್ಲಿ ಮಾಡಿದ್ದೀನಿ..?, ಯಾರಿಗೆ ಮೋಸಾ ಮಾಡಿದ್ದೀನಿ..? ಎಂದು ದಿವ್ಯಾ ಕೇಳುತ್ತಾರೆ.
ಇದಕ್ಕೆ ಅರವಿಂದ್​, ನೀನು ಕರಕ್ಟ್​ ಆಗಿ ಇದ್ದಿಯಾ ಅಂದ್ಮೇಲೆ ಯಾರಿಗೂ ವಿವರಿಸುವ ಅವಶ್ಯಕತೆ ಇಲ್ಲ. ಬೇಜಾರ್​ ಮಾಡ್ಕೊಬೇಡ. ಎಲ್ಲರ ನೋಡೋ ದೃಷ್ಟಿ ಒಂದೇ ಇರಲ್ಲ.

blank

ಹಾಗಲ್ಲ.. ಮೊದಲು ಕಿರುಚಾಡಿ, ಕೂಗಾಡಿ ನಂತರ ಬಂದು ಸಾರಿ ಅಂದ್ರೆ ಆಯ್ತಾ..? ನಂಗೆ ಕೆಟ್ಟ ಕೋಪ ಬರುತ್ತೆ. ಈ ತರಹ ಇಷ್ಟ ಆಗಲ್ಲ. ನಂಗೆ ಏನಿದ್ರೂ ಅವರ ಮುಖಕ್ಕೆ ಹೇಳಬೇಕು. ಹೇಳುವವರೆಗೂ ಸಮಾಧಾನ ಇರಲ್ಲ. ನಂಗೆ ಹಂಗೆಲ್ಲ ಹೇಳೋಕೆ ಅವರ್ಯಾರು..? ನೀನು ಅವರು ವಾದ ಮಾಡ್ತಿರಬೇಕಾದ್ರೇನೆ ಸರಿಯಾಗಿ ಹೇಳ್ತಿದ್ದೆ. ಆದ್ರೆ ಅವರು ಕಿರುಚುತ್ತಿದ್ದುದನ್ನು ನೋಡಿ ಸುಮ್ನೆ ಬೇಡ ಅಂತಾ ಬಿಟ್ಟೆ ಎಂದು ಕಣ್ಣೀರಿಡುತ್ತಾರೆ.

ಹೌದು, ಅವರು ಆಡಿದ ರೀತಿ ನೋಡಿ ನಂಗೂ ಭಯಾ ಆಯ್ತು. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಅಂತಾ ಸುಮ್ನಾದೆ. ನೀನು ನೊಂದುಕೊಳ್ಳಬೇಡ. ತುಂಬಾ ಚನ್ನಾಗಿ ಕ್ಯಾಪ್ಟನ್​ಶಿಪ್​ ನಿಭಾಯಿಸಿದ್ದೀಯಾ. ಯೋಚನೆ ಮಾಡ್ಬೇಡ. ಈಗ ಅದೆಲ್ಲಾ ಮುಗಿದಿದೆ ಎಂದು ಅರವಿಂದ್ ದಿವ್ಯಾರನ್ನು ಸಂತೈಸಿದರು.

The post ದಿವ್ಯಾ-ಪ್ರಶಾಂತ್ ಕಾಳಗ; ಅರವಿಂದ್​ ಎದುರು ಕಣ್ಣೀರಧಾರೆ ಹರಿಸಿದ ಉರುಡುಗ appeared first on News First Kannada.

Source: newsfirstlive.com

Source link