2 ಸಾವಿರಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ರೇಡ್.. ಪೊಲೀಸರಿಗೆ ಸಿಕ್ಕ ಆಯುಧಗಳಿವು..

2 ಸಾವಿರಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ರೇಡ್.. ಪೊಲೀಸರಿಗೆ ಸಿಕ್ಕ ಆಯುಧಗಳಿವು..

ಬೆಂಗಳೂರು:ಇಂದು ಸುಮಾರು 2 ಸಾವಿರಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದೇವೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕಮಿಷನರ್ ಕಮಲ್ ಪಂತ್, ಇವತ್ತು ಬೆಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಈ ಕಾರ್ಯಾಚರಣೆಯಲ್ಲಿ ಸುಮಾರು 1,548 ಮಂದಿ ರೌಡಿಗಳು ಸಿಕ್ಕಿಬಿದ್ದಿದ್ದಾರೆ ಎಂದರು.

ನಾವು ಇಂದು 2,144 ಮನೆಗಳ ಮೇಲೆ ದಾಳಿ ನಡೆಸಿದೆವು. ದಾಳಿ ನಡೆಸಿ ಎಲ್ಲಾ ರೌಡಿಗಳ ಮನೆಗಳಲ್ಲಿ ತಪಾಸಣೆ ಮಾಡಿದೆವು. ಈ ಕಾರ್ಯಾಚರಣೆ ನೇತೃತ್ವ ಹೆಚ್ಚುವರಿ ಆಯುಕ್ತ ಮುರುಗನ್ ವಹಿಸಿದ್ದರು. ಬೆಂಗಳೂರು ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಿ ತಪಾಸಣೆ ಮಾಡಲಾಯ್ತು ಎಂದು ತಿಳಿಸಿದರು.

blank

ಬೆಂಗಳೂರು ಸಿಟಿ ಮತ್ತು ಜೈಲ್​ ಮೇಲೆ ಒಟ್ಟಿಗೆ ರೇಡ್​​

ಇನ್ನು, ಬೆಂಗಳೂರು ಸಿಟಿ ಹಾಗೂ ಜೈಲಿನಲ್ಲಿ ಒಟ್ಟಿಗೆ ರೇಡ್ ಮಾಡಿದ್ದೇವೆ. ಜೈಲಿನಲ್ಲಿರುವ ರೌಡಿ ಆಸಾಮಿಗಳ ಮನೆ ಮೇಲೂ ರೇಡ್ ಮಾಡಿದ್ದೀವಿ. ದಾಳಿಯಲ್ಲಿ ಪೊಲೀಸ್ ಜೊತೆ ಡಾಗ್ ಸ್ಕ್ವಾಡ್, ನಾರ್ಕೋಟಿಕ್ ಸ್ಕ್ವಾಡ್, ಮೆಟಲ್ ಡಿಟೆಕ್ಟರ್ಸ್ ಕೂಡ ಇದ್ದರು. ನಗರದ ಎಲ್ಲಾ ಪೊಲೀಸ್ ಠಾಣೆಯಲ್ಲೂ ಎಲ್ಲಾ ಸ್ಥಳೀಯ ರೌಡಿಗಳನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದರು ಕಮಲ್ ಪಂತ್.

ಸಿಕ್ಕಿಬಿದ್ದ 1,548 ರೌಡಿಗಳು

2,144 ಮಂದಿ ರೌಡಿಗಳ ಮೇಲೆ ದಾಳಿ ಮಾಡಲಾಯ್ತು. ಇದರಲ್ಲಿ 1,548 ರೌಡಿಗಳು ಸಿಕ್ಕಿಬಿದ್ದರು. ಲಾಂಗ್ ಮಚ್ಚು ಸೇರಿದಂತೆ 91 ಆಯುಧಗಳು, ಜೈಲಿನಲ್ಲಿ 26 ಚಾಕು, 200 ಗ್ರಾಂ ಗಾಂಜಾ, ಮೊಬೈಲ್ ಮತ್ತು ಸಿಮ್ ಕಾರ್ಡ್ಸ್ ಸಿಕ್ಕಿವೆ. ಇದುವರೆಗೂ 409 ರೌಡಿಗಳ ಮೇಲೆ ಕೇಸ್ ಮಾಡಲಾಗಿದೆ ಎಂದು ಹೇಳಿದ್ರು.

blank

 

ಕಠಿಣ ಕಾನೂನು ಕ್ರಮ

ಲಾಂಗು ಮಚ್ಚು ಇಟ್ಟುಕೊಂಡಿದ್ದ 48 ಮಂದಿ ಬಂಧನವಾಗಿದ್ದಾರೆ. ಗಾಂಜಾ ಹೊಂದಿದ್ದ 84 ರೌಡಿಗಳನ್ನು ಅರೆಸ್ಟ್ ಮಾಡಿದ್ದೇವೆ. 561 ಮಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಉಳಿದ ಎಲ್ಲರ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ವಾರ್ನ್ ಮಾಡಿದರು.
ಪೊಲೀಸರ ವಿಶೇಷ ದಾಳಿಯಲ್ಲಿ ಜೆಸಿಬಿ ನಾರಾಯಣ, ಸೈಕಲ್ ರವಿ, ಪಾಯ್ಸನ್ ರಾಮ, ಅಶೋಕಿ, ಯುವರಾಜ್ ಅಲಿಯಾಸ್ ಪಾಸ, ಈಶ್ವರ್ ಅಲಿಯಾಸ್ ಸೇರಿದಂತೆ ಹಲವರು ಸಿಕ್ಕಿಬಿದ್ದಿದ್ದಾರೆ ಎಂದರು.

The post 2 ಸಾವಿರಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ರೇಡ್.. ಪೊಲೀಸರಿಗೆ ಸಿಕ್ಕ ಆಯುಧಗಳಿವು.. appeared first on News First Kannada.

Source: newsfirstlive.com

Source link