11 ವರ್ಷಕ್ಕೆ ಡಿಗ್ರಿ ಮುಗಿಸಿದ ಬಾಲಕ

ಬ್ರಸೆಲ್ಸ್: 11 ವರ್ಷಕ್ಕೆ ಫಿಸಿಕ್ಸ್ ನಲ್ಲಿ ಡಿಗ್ರಿ ಮುಗಿಸುವ ಮೂಲಕವಾಗಿ ಬೆಲ್ಜಿಯಮ್ ಬಾಲಕನೋರ್ವ ಸುದ್ದಿಯಾಗಿದ್ದಾನೆ.  ಇದನ್ನೂ ಓದಿ:  ಗಂಡು ಮಗುವಿನ ತಂದೆಯಾದ ಹರ್ಭಜನ್ ಸಿಂಗ್

 20 ವರ್ಷಕ್ಕೆ ಮುಗಿಸಬೇಕಾದ ಡಿಗ್ರಿಯನ್ನು ಲೌರೆಂಟ್ ಸಿಮೋನ್ಸ್ ಕೇವಲ 11 ವರ್ಷಕ್ಕೆ ಪೂರ್ಣಗೊಳಿಸಿ ದಾಖಲೆ ಬರೆದಿದ್ದಾನೆ. ಅತೀ ಸಣ್ಣ ವಯಸ್ಸಿನಲ್ಲೇ ಈ ಬಾಲಕ ಮಾಡಿದ ಸಾಧನೆಗೆ ಎಲ್ಲರ ಹುಬ್ಬೇರುವಂತೆ ಮಾಡಿದೆ.

 

ಬೆಲ್ಜಿಯಂನ ಒಸ್ಟೆಂಡ್‍ನ ನಿವಾಸಿಯಾದ ಸಿಮೋನ್ಸ್ 11 ವರ್ಷಕ್ಕೆ ವಿಶ್ವವಿದ್ಯಾಲಯವೊಂದರಲ್ಲಿ ಡಿಗ್ರೀ ಸರ್ಟಿಫಿಕೇಟ್ ಪಡೆಯುವ ಮೂಲಕವಾಗಿ ಜಗತ್ತಿನ 2ನೇ ಅತೀ ಪುಟ್ಟ ಪದವೀಧರ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ಸಿಮೋನ್ಸ್ ಆಂಟ್ವರ್ಪ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾದಗಲ್ಲಿ ಪದವಿ ಪ್ರಾಣ ಪತ್ರ ಪಡೆದಿದ್ದಾನೆ. ಸಾಮಾನ್ಯವಾಗಿ ಎಲ್ಲರೂ ಮೂರು ವರ್ಷ ಡಿಗ್ರೀ ಮುಗಿಸುತ್ತಾರೆ. ಆದರೆ, ಸಿಮೋನ್ಸ್ ಮಾತ್ರ ಕೇವಲ ಒಂದೇ ವರ್ಷದಲ್ಲಿ ಪದವಿ ಪೂರ್ಣಗೊಳಿಸಿ ಸಾಧನೆ ಮಾಡಿದ್ದಾನೆ.

 

ಬಾಲಕ ಶೇ. 85 ಅಂಕ ಗಳಿಸಿದ್ದಾನೆ. ಈ ಬಾಲಕ ಸಣ್ಣ ವಯಸ್ಸಿನಲ್ಲೇ ಪದವಿಯನ್ನು ಪಡೆದ 2ನೇ ಅತೀ ಚಿಕ್ಕ ಪುಟ್ಟ್ ಬಾಲಕನಾಗಿದ್ದಾನೆ. ಈ ಹಿಂದೆ 1994ರಲ್ಲಿ ಮೈಕಲ್ ಕೀರ್ನಿ ಎಂಬವ 10ವರ್ಷದವನಿದ್ದಾಗಲೇ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗದಲ್ಲಿ ಪದವಿ ಸಂಪಾದಿಸಿದ್ದ. ಈ ದಾಖಲೆಯನ್ನು ಸಿಮೋನ್ಸ್ ಮರಿಯಬಹುದಿತ್ತು. ಆದರೆ 2019ರಲ್ಲಿ ನೆದರ್‍ಲೆಂಡ್‍ನ ಐಂಡ್‍ಹೋವನ್ ವಿಶ್ವವಿದ್ಯಾಲಯವು ಸಿಮೋನ್ಸ್‍ಗೆ 10 ವರ್ಷ ವಯಸ್ಸಾಗದ ಹೊರತ ಡಿಗ್ರಿ ಓದಲು ಅವಕಾಶ ಇಲ್ಲ ಎಂದು ಹೇಳಿತ್ತು. ಬಾಲಕನ ಈ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

The post 11 ವರ್ಷಕ್ಕೆ ಡಿಗ್ರಿ ಮುಗಿಸಿದ ಬಾಲಕ appeared first on Public TV.

Source: publictv.in

Source link