‘ನಾನು ಎಲ್ಲರ ಕಣ್ಣಿಗೆ ಕೆಟ್ಟವನಾಗಿ ಕಾಣ್ತಿದ್ದೀನಿ’.. ಪ್ರಶಾಂತ್ ಸಂಬರಗಿ ಕಣ್ಣೀರಿಗೆ ಕಾರಣವೇನು..?

‘ನಾನು ಎಲ್ಲರ ಕಣ್ಣಿಗೆ ಕೆಟ್ಟವನಾಗಿ ಕಾಣ್ತಿದ್ದೀನಿ’.. ಪ್ರಶಾಂತ್ ಸಂಬರಗಿ ಕಣ್ಣೀರಿಗೆ ಕಾರಣವೇನು..?

ಯಾಕೋ ಪ್ರಶಾಂತ್​ ಸಂಬರಗಿ ಅವರ ಗ್ರಹಗತಿಗಳು ಈ ಇಡೀ ವಾರ ಸರಿಯಿದ್ದಂತೆ ಕಾಣಲಿಲ್ಲ. ಅವರು ಏನೇ ಮಾಡಿದ್ರು, ಎಲ್ಲವೂ ಅವರ ವಿರುದ್ಧವಾಗಿಯೇ ನಿಲ್ಲುತ್ತಿತ್ತು. ಬರೀ ಕಿರುಚಾಟ, ಅಳುವಿನಲ್ಲಿಯೇ ದಿನ ಕಳೆದ್ರು. ಅರವಿಂದ್​ ಹಾಗೂ ಪ್ರಶಾಂತ್​ ಅವರ ನಡುವೆ ನಡೆದ ಕಾಳದ ನಂತರ ಅರವಿಂದ್​ ಹೋಗಿ ಪ್ರಶಾಂತ್​ ಅವರನ್ನು ಮಾತನಾಡಿಸುತ್ತಾರೆ. ಈಗ ಸಮಾಧಾನ ಆಗಿದ್ದೀರಾ ಎಂದು ಕೇಳುತ್ತಾರೆ.

ಇದಕ್ಕೆ ಪ್ರಶಾಂತ್​, ನಾನು ಸಮಾಧಾನವಾಗಿಯೇ ಇದ್ದೀನಿ. ನಿಮ್ಮ ಒಳ್ಳೆಯದಕ್ಕೇ ಹೇಳಿದೆ. ನಾನು ರಘುಗೆ ಗೊತ್ತಾಗಿಲ್ಲ ಅಂತಾ ಫೇರ್​ ಆಗಿ ಇರಲಿ ಅಂತಾ ಹೇಳಿದೆ. ಮಷಿನ್​ ಕೆಟ್ಟಿದ್ದು ನಿಂಗೆ ಗೊತ್ತಿತ್ತು ಅಲ್ವಾ. ಅದಕ್ಕೆ ರಘು ಜೊತೆ ಶೇರ್​ ಮಾಡು ಅಂತಾ ಹೇಳಿದೆ. ಅವನಿಗೆ ಗೊತ್ತಿರಲಿಲ್ಲ. ನಾನು ಇಬ್ಬರಿಗೂ ಒಳ್ಳೆಯದಾಗಲಿ ಅಂತಾ ಹೇಳಿದೆ ಅಷ್ಟೇ.

blank

ಅರವಿಂದ್: ಆ ವಿಷಯವನ್ನು ರಘು ನಾನು ಅಲ್ಲೇ ಮಾತನಾಡಿ, ಬಗೆಹರಿಸಿಕೊಂಡಿದ್ದೆವು. ಆದ್ರೆ ನೀವು ಆ ವಿಷಯದ ಬಗ್ಗೆ ಪದೇ ಪದೇ ಮಾತಾಡಿದ್ದು ನಂಗೆ ಇಷ್ಟಾ ಆಗ್ಲಿಲ್ಲ. ಅದಕ್ಕೇ ಕೋಪ ಬಂತು. ನಾವಿಬ್ಬರೂ ಚೆನ್ನಾಗಿರುವಾಗ ನೀವು ಮಾತಾಡಿದ್ದು ನಂಗೆ ಸರಿ ಅಂತಾ ಅನ್ನಿಸಲಿಲ್ಲ.

ಪ್ರಶಾಂತ್​: ರಘುಗೆ ನಾನೇ ಹೇಳಿದ್ದು. ದಿವ್ಯಾ ಮತ್ತು ಅರವಿಂದ ಜೊತೆ ಮಾತನಾಡು ಅಂತ. ನಿಂಗೆ ಅನ್ಯಾಯ ಆಗಿದೆ ಅಂತಾ ಅವರಿಗೂ ಗೊತ್ತಾಗ್ಲಿ. ಹಾಗೆ ಹೇಳಿ ಮೊದಲು ಕಳಿಸಿದ್ದು ನಾನು. ಫ್ರೆಂಡ್​ಶಿಪ್​ನಲ್ಲಿ ​ಮಷಿನ್​ ಯೂಸ್​ ಮಾಡಿದ್ರೂ ಪರವಾಗಿಲ್ಲ. ಆದ್ರೆ ನಿಂಗೆ ಅರ್ಧ ಕೊಡಬಹುದಾಗಿತ್ತು, ಇಲ್ಲಾ ಮಷಿನ್​ ಶೇರ್​ ಮಾಡಬಹುದಿತ್ತು. ಹಾಗೇನಾದ್ರೂ ಮಾಡಿದ್ರೆ ನೀನು ಹೀರೋ ಆಗ್ತಿದ್ದೆ. ಹಾಗೇ ದಿವ್ಯಾ ಮಾಡಿದ್ದು ಸರಿ ಅಂತಾ ನಂಗೆ ಅನ್ಸಲಿಲ್ಲ ಅದಕ್ಕೆ ಹೇಳಿದೆ. ಆದ್ರೆ, ಅವಳು ರಾತ್ರಿ ಊಟಕ್ಕೆ ಕರೆದಳು, ಆಗ ನಾನು ಅವಳಿಗೆ ಸಾರಿ ಕೇಳಿದೆ. ಇಬ್ಬರೂ ಅಲ್ಲೇ ಶೇಕ್​ ಹ್ಯಾಂಡ್​ ಮಾಡಿದ್ವಿ. ನೀನು ಮತ್ತೆ ಆ ಬಗ್ಗೆ ಟಾಂಟ್​ ಮಾಡಿದ್ದು ಯಾಕೆ ಎಂದು ಕಣ್ಣೀರು ಹಾಕ್ತಾರೆ ಪ್ರಾಶಾಂತ್​.

ಅರವಿಂದ್: ಸರ್​.. ಇಲ್ಲಿ ನಾನು ಹೀರೋ ಆಗೋಕೆ ಬಂದಿಲ್ಲ. ಆಟ ಆಡೋಕೆ ಬಂದಿದ್ದೀನಿ. ನೀವು ಮತ್ತು ದಿವ್ಯಾ ಮಾತಾಡಿದ್ದು ನಂಗೆ ಗೊತ್ತಿರಲಿಲ್ಲ. ನೀವು ಅವಳಿಗೆ ಗುಡ್​ ಜಾಬ್​ ಅಂದಿದ್ದು ನಂಗೆ ಸರಿ ಅನ್ಸಲಿಲ್ಲ ಅದಕ್ಕೆ ಹೇಳಿದೆ. ನೀವು ಅಳಬೇಡಿ. ನನ್ನಿಂದ ಹರ್ಟ್​ ಆಗಿದ್ರೆ ಸಾರಿ.

ಪ್ರಶಾಂತ್​: ಹಂಗಲ್ಲಾ ಅರವಿಂದ್​, ನಾನು ಎಲ್ಲರ ಕಣ್ಣಿಗೆ ಕೆಟ್ಟವನಾಗಿ ಕಾಣ್ತಿದ್ದೀನಿ. ಟಾಸ್ಕ್​ ವಿಚಾರದಲ್ಲಿ ಆದ ಘಟಣೆಗಳನ್ನು ನಾನು ಅಲ್ಲಿಗೇ ಸ್ಟಾಪ್​ ಮಾಡಿದ್ದೀನಿ ಎಂದರು.

ಇದಕ್ಕೆ ಅರವಿಂದ್​ ಪ್ರತಿಕ್ರಿಯಿಸಿ, ಸರ್​ ನೀವು ಸಮಾಧಾನ ಮಾಡಿಕೊಳ್ಳಿ. ಅಳಬೇಡಿ. ನಿಮ್ಮನ್ನು ಯಾರೂ ಆ ರೀತಿ ನೋಡುತ್ತಿಲ್ಲ ಎಂದು ಸಂತೈಸುತ್ತಾರೆ.

The post ‘ನಾನು ಎಲ್ಲರ ಕಣ್ಣಿಗೆ ಕೆಟ್ಟವನಾಗಿ ಕಾಣ್ತಿದ್ದೀನಿ’.. ಪ್ರಶಾಂತ್ ಸಂಬರಗಿ ಕಣ್ಣೀರಿಗೆ ಕಾರಣವೇನು..? appeared first on News First Kannada.

Source: newsfirstlive.com

Source link