ಸಂಸತ್ ಮುಂದೆ ಜು.22 ರಿಂದ 200 ರೈತರು ಪ್ರತಿಭಟನೆ ನಡೆಸ್ತೇವೆ- ರಾಕೇಶ್ ಟಿಕಾಯತ್

ಸಂಸತ್ ಮುಂದೆ ಜು.22 ರಿಂದ 200 ರೈತರು ಪ್ರತಿಭಟನೆ ನಡೆಸ್ತೇವೆ- ರಾಕೇಶ್ ಟಿಕಾಯತ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಸತ್ ಬಳಿ ಪ್ರತಿಭಟನೆ ಮಾಡಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರಾಧ್ಯಕ್ಷ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ. ಇದೇ ಜುಲೈ 22ರಿಂದ ಸುಮಾರು 200 ಮಂದಿ ರೈತರು ಸಂಸತ್ ಮುಂದೆ ಹೊಸ ಕೃಷಿ ಕಾಯ್ದೆಗಳ ರದ್ದತಿಗಾಗಿ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ರಾಕೇಶ್ ಟಿಕಾಯತ್, ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ನಡೆಸಲು ನಾವು ಸಿದ್ದರಿದ್ದೇವೆ ಎಂದು ಕೃಷಿ ಸಚಿವರು ಹೇಳಿದ್ದಾರೆ. ನಮ್ಮ ಬೇಡಿಕೆಗಳ ಈಡೇರಿಸುವುದಾದಲ್ಲಿ ಸರ್ಕಾರದೊಂದಿಗೆ ಮಾತುಕತೆಗೆ ರೈತರು ಸಿದ್ಧ. ಆದರೆ, ಮಾತುಕತೆ ಮಾತ್ರ ಷರತ್ತು ರಹಿತವಾಗಿರಬೇಕು ಎಂದು ಸ್ಪಷ್ಟಪಡಿಸಿದರು.

blank

ಜನವರಿ 26ನೇ ತಾರೀಕು ಗಣರಾಜ್ಯೋತ್ಸವ ದಿನಾಚರಣೆಯಂದು ಸಂಭವಿಸಿದ ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಹೀಗೆ ಮಾಡಿದ್ರೆ ನಾವ್ಯಾರು ಈ ವಿಚಾರವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗುವುದಿಲ್ಲ. ಯಾವುದೇ ತಾರತಮ್ಯವಿಲ್ಲದೇ ವಿಚಾರಣೆ ನಡೆಸಲಿ ನೋಡೋಣ. ಇಲ್ಲಂದ್ರೆ ನಮ್ಮ ಹೋರಾಟ ನಾವು ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.

ಹೋರಾಟ ಮುಂದುವರಿಯಲಿದೆ

ಇನ್ನು, ಪ್ರತಿಬಾರಿಯೂ ಮಾತುಕತೆಗೆ ಹೋದರೆ ಬೇಕಾದರೆ ಕಾಯ್ದೆಗೆ ತಿದ್ದುಪಡಿ ತರುತ್ತೇವೆಯೇ ಹೊರತು ರದ್ದು ಮಾಡಲ್ಲ ಎನ್ನುತ್ತಾರೆ. ಸರ್ಕಾರದ ಆದೇಶಗಳನ್ನು ಪಾಲಿಸಬೇಕು ಎಂದು ನಾವು ಯಾವುದೇ ಪ್ರತಿಭಟನೆ ನಡೆಸುತ್ತಿಲ್ಲ. ಬದಲಿಗೆ ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಈಗಲೂ ಸರ್ಕಾರ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮಾತುಕತೆ ನಡೆಸಬಹುದು ಎಂದು ಪುನರುಚ್ಚರಿಸಿದರು.

The post ಸಂಸತ್ ಮುಂದೆ ಜು.22 ರಿಂದ 200 ರೈತರು ಪ್ರತಿಭಟನೆ ನಡೆಸ್ತೇವೆ- ರಾಕೇಶ್ ಟಿಕಾಯತ್ appeared first on News First Kannada.

Source: newsfirstlive.com

Source link