ಜೆಡಿಎಸ್​​ ಕಾರ್ಯಕರ್ತರಿಂದ ಪ್ರತಿಭಟನೆ.. ಮನೆ ಮುಂದೆ ಕುಂಬಳಕಾಯಿ ಒಡೆಸಿದ ರಾಕ್​​ಲೈನ್

ಜೆಡಿಎಸ್​​ ಕಾರ್ಯಕರ್ತರಿಂದ ಪ್ರತಿಭಟನೆ.. ಮನೆ ಮುಂದೆ ಕುಂಬಳಕಾಯಿ ಒಡೆಸಿದ ರಾಕ್​​ಲೈನ್

ಬೆಂಗಳೂರು: ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಅವರು ಇಂದು ತಮ್ಮ ಮನೆಗೆ ಕುಂಬಳಕಾಯಿ ಒಡೆಸಿ ದೃಷ್ಠಿ ತೆಗೆಸಿದ್ದು, ಮನೆಯ ಕೆಲಸಗಾರರು ಕುಂಬಳಕಾಯಿ ಒಡೆದು ದೃಷ್ಟಿ ತೆಗೆದಿದ್ದಾರೆ. ಜೆಡಿಎಸ್​ ಕಾರ್ಯಕರ್ತರು ಇಂದು ಬೆಳಗ್ಗೆ ರಾಕ್​​ಲೈನ್​ ವೆಂಕಟೇಶ್​ ನಿವಾಸ ಎದುರು ಪ್ರತಿಭಟನೆ ನಡೆಸಿದ್ದು, ಇದರ ಬೆನ್ನಲ್ಲೇ ಮನೆಗೆ ದೃಷ್ಟಿ ತೆಗೆಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

blank

ಇಂದು ಬೆಳಗ್ಗೆ ಜೆಡಿಎಸ್​ ಕಾರ್ಯಕರ್ತರು ರಾಕ್​ಲೈನ್​​ ವೆಂಕಟೇಶ್​ ನಿವಾಸ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಕೂಡಲೇ ಪ್ರತಿಭಟನಾಕಾರರನ್ನು ಸ್ಥಳದಿಂದ ಕರೆದುಕೊಂಡು ಹೋದ ಪೊಲೀಸರು, ಮಹಾಲಕ್ಷ್ಮಿ ಲೇಔಟ್​​ನಲ್ಲಿರುವ ಮನೆಯ ಎರಡು ರಸ್ತೆಗೆ ಬ್ಯಾರಿಕೇಡ್​ಗಳನ್ನ ಅಳವಡಿಸಿ 30 ಹೆಚ್ಚು ಪೊಲೀಸರನ್ನು ನಿಯೋಜಿಸುವ ಮೂಲಕ ರಕ್ಷಣೆ ನೀಡಿದ್ದರು.

ಇದನ್ನೂ ಓದಿ: ರಾಕ್​​ಲೈನ್​ ವೆಂಕಟೇಶ್​ ನಿವಾಸಕ್ಕೆ ಭದ್ರತೆ; ರಸ್ತೆಗೆ ಬ್ಯಾರಿಕೇಡ್​ ಹಾಕಿದ್ಕೆ ಜನ ಆಕ್ರೋಶ

ಇದನ್ನೂ ಓದಿ: ನಾನು ಮನಸ್ಸು ಮಾಡಿದ್ರೆ ಈಗಲೂ MLA, MP ಆಗ್ತೀನಿ -ರಾಕ್​​ಲೈನ್

ಇದನ್ನೂ ಓದಿ: ‘HDK ಮನಸ್ಸಿಗೆ ನೋವಾಗುವಂತೆ ಮಾತಾಡಿದ್ರೆ ಕ್ಷಮೆ ಕೇಳ್ತೀನಿ, ಆದ್ರೆ..’

The post ಜೆಡಿಎಸ್​​ ಕಾರ್ಯಕರ್ತರಿಂದ ಪ್ರತಿಭಟನೆ.. ಮನೆ ಮುಂದೆ ಕುಂಬಳಕಾಯಿ ಒಡೆಸಿದ ರಾಕ್​​ಲೈನ್ appeared first on News First Kannada.

Source: newsfirstlive.com

Source link