ಭಾರೀ ಮಳೆ ಮುನ್ಸೂಚನೆ; ಕಾಸರಗೋಡು ಸೇರಿ ಕೇರಳದ 4 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​​ ಘೋಷಣೆ

ಭಾರೀ ಮಳೆ ಮುನ್ಸೂಚನೆ; ಕಾಸರಗೋಡು ಸೇರಿ ಕೇರಳದ 4 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​​ ಘೋಷಣೆ

ಕೇರಳ: ಎರ್ನಾಕುಲಂ, ಇಡುಕಿ, ತ್ರಿಶೂರ್ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್​ ಅಲರ್ಟ್​​ ಘೋಷಣೆ ಮಾಡಿದ್ದು, ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಉಳಿದಂತೆ ಮಲಪ್ಪುರಂ, ಕನ್ನೂರು, ಪಾಲಕ್ಕಾಡ್​​ ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್, ತಿರುವನಂತಪುರಂ, ಕೊಲ್ಲಂ, ಆಲಪ್ಪುಳ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್​​ ಘೋಷಣೆ ಮಾಡಲಾಗಿದೆ.

blank

14 ಝೀಕಾ ವೈರಸ್​ ಪಾಸಿಟಿವ್ ದೃಢ
ಕೊರೊನಾ ಸೋಂಕಿನ ತೀವ್ರತೆ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲೇ ಕೇರಳದಲ್ಲಿ ಝೀಕಾ ವೈರಸ್​​ ಭೀತಿ ಹೆಚ್ಚಾಗಿದೆ. ಈ ನಡುವೆ ರಾಜ್ಯದಲ್ಲಿ 14 ಝೀಕಾ ವೈರಸ್​ ಪ್ರಕರಣಗಳು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.

ನಮ್ಮ ಇಲಾಖೆ ವೈರಸ್​ ಬಗ್ಗೆ ಈಗಾಗಲೇ ಎಚ್ಚರಿಕೆ ವಹಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಕಾರ್ಯ ಮಾಡಲಾಗುತ್ತಿದೆ. ಇದುವರೆಗೂ ರಾಜ್ಯದಲ್ಲಿ 14 ಝೀಕಾ ಪಾಸಿಟಿವ್ ಪ್ರಕರಣಗಳು ದೃಢವಾಗಿದೆ. ಇನ್ನು ಕೊರೊನಾ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಕೇರಳದಲ್ಲಿ ಆಕ್ಸಿಜನ್​ ಸಿಗದೆ ಇದುವರೆಗೂ ಯಾರೂ ಸಾವನ್ನಪ್ಪಿಲ್ಲ ಎಂದು ವೀಣಾ ಜಾರ್ಜ್​ ತಿಳಿಸಿದ್ದಾರೆ.

The post ಭಾರೀ ಮಳೆ ಮುನ್ಸೂಚನೆ; ಕಾಸರಗೋಡು ಸೇರಿ ಕೇರಳದ 4 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​​ ಘೋಷಣೆ appeared first on News First Kannada.

Source: newsfirstlive.com

Source link