ಹೆಲ್ಮೆಟ್​​ ಇಲ್ಲದೇ ರಾಯಲ್ ಎನ್‌ಫೀಲ್ಡ್ ಬೈಕ್​​ ಚಲಾಯಿಸಿದ ಶಾಸಕ ರೇಣುಕಾಚಾರ್ಯ

ಹೆಲ್ಮೆಟ್​​ ಇಲ್ಲದೇ ರಾಯಲ್ ಎನ್‌ಫೀಲ್ಡ್ ಬೈಕ್​​ ಚಲಾಯಿಸಿದ ಶಾಸಕ ರೇಣುಕಾಚಾರ್ಯ

ದಾವಣಗೆರೆ: ಹೊನ್ನಾಳಿ ಶಾಸಕ ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಅವರು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ಕೊರೊನಾ ವೈರಸ್​ನಿಂದ ಕ್ಷೇತ್ರದ ಜನ ಸಂಕಷ್ಟಕ್ಕೆ ಸಿಲುಕಿದಾಗ ತಮ್ಮ ಕೈಲಾದ ಸೇವೆಯನ್ನು ಮಾಡುವುದರ ಮೂಲಕ ಸುದ್ದಿಯಾಗಿದ್ದರು. ಇದೀಗ, ಹೆಲ್ಮೆಟ್​​ ಇಲ್ಲದೆಯೇ ರಾಯಲ್​​ ಎನ್‌ಫೀಲ್ಡ್ ಬೈಕ್​​ ಚಲಾಯಿಸುವ ಮೂಲಕ ಶಾಸಕ ಎಂಪಿ ರೇಣುಕಾಚಾರ್ಯರು ಮತ್ತೆ ಮುನ್ನಲೆಗೆ ಬಂದಿದ್ದಾರೆ.

ಹೌದು, ಎಂಪಿ ರೇಣುಕಾಚಾರ್ಯರು ತನ್ನ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಬ್ಬರ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ರಾಯಲ್​​ ಎನ್‌ಫೀಲ್ಡ್ ಬೈಕ್​​ ಚಲಾಯಿಸಿದ್ದಾರೆ. ಈಗ ಹೆಲ್ಮೆಟ್​​ ಹಾಕದೆ ರೇಣುಕಾಚಾರ್ಯರು ಬೈಕ್​​ ಚಲಾಯಿಸಿರುವ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಇನ್ನು, ಹೆಲ್ಮೆಟ್​ ಹಾಕದೆ ರೇಣುಕಾಚಾರ್ಯರು ಸಂಚಾರ ನಿಯಮ ಉಲ್ಲಂಘಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ರೇಣುಕಾಚಾರ್ಯರು ಮಾತ್ರ ಈ ನಾಲ್ಕು ಲಕ್ಷ ಮೌಲ್ಯದ ರಾಯಲ್​​ ಎನ್‌ಫೀಲ್ಡ್ ಬೈಕ್​​ ಓಡಿಸಿ ಫುಲ್​ ಖುಷಿಯಾಗಿದ್ದಾರೆ ಎನ್ನಲಾಗುತ್ತಿದೆ.

The post ಹೆಲ್ಮೆಟ್​​ ಇಲ್ಲದೇ ರಾಯಲ್ ಎನ್‌ಫೀಲ್ಡ್ ಬೈಕ್​​ ಚಲಾಯಿಸಿದ ಶಾಸಕ ರೇಣುಕಾಚಾರ್ಯ appeared first on News First Kannada.

Source: newsfirstlive.com

Source link