ಫುಡ್​ಕಿಟ್​ ವಿತರಣೆ ವೇಳೆ ನೂಕುನುಗ್ಗಲು.. ಪೊಲೀಸರಿಂದ ಲಾಠಿ ಚಾರ್ಜ್​

ಫುಡ್​ಕಿಟ್​ ವಿತರಣೆ ವೇಳೆ ನೂಕುನುಗ್ಗಲು.. ಪೊಲೀಸರಿಂದ ಲಾಠಿ ಚಾರ್ಜ್​

ರಾಯಚೂರು: ಆಹಾರ ಕಿಟ್​ ಪಡೆಯಲು ಬಂದಿದ್ದ ಕಟ್ಟಡ ಕಾರ್ಮಿಕರ ಮೇಲೆ ಲಾಠಿ ಚಾರ್ಜ್​ ನಡೆದಿರುವ ಘಟನೆ ರಾಯಚೂರಿನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಮುಂದೆ ನಡೆದಿದೆ. ಕಾರ್ಮಿಕ ಇಲಾಖೆ ವತಿಯಿಂದ ಇಂದು 3:30ಕ್ಕೆ ಆಹಾರ ಕಿಟ್​ ವಿತರಿಸುವುದಾಗಿ ಕಾರ್ಮಿಕ ಇಲಾಖೆ ಹೇಳಿತ್ತು. ಅದೇ ಪ್ರಕಾರ ಕಿಟ್ ಪಡೆಯಲು ಬೆಳಿಗ್ಗೆ 4 ಗಂಟೆಯಿಂದಲೇ ಕಾರ್ಮಿಕರು ಸರತಿಯಲ್ಲಿ ನಿಂತು ಕಾಯುತ್ತಿದ್ದರು. ಸರಿಯಾದ ಮಾಹಿತಿ ನೀಡದ ಹಿನ್ನೆಲೆ ಸಾವಿರಾರು ಕಾರ್ಮಿಕರು ಒಮ್ಮೆಲೇ ಆಗಮಿಸಿದ ಪರಿಣಾಮ ಕಿಟ್​ ವಿತರಣೆಯಲ್ಲಿ ನೂಕುನುಗ್ಗಲು ಉಂಟಾಗಿದೆ.. ಕಾರ್ಮಿಕರನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲವಾಗಿದ್ದು ಲಾಠಿ ಚಾರ್ಜ್​ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

blank

The post ಫುಡ್​ಕಿಟ್​ ವಿತರಣೆ ವೇಳೆ ನೂಕುನುಗ್ಗಲು.. ಪೊಲೀಸರಿಂದ ಲಾಠಿ ಚಾರ್ಜ್​ appeared first on News First Kannada.

Source: newsfirstlive.com

Source link