ಧೋನಿ ಭಾಯ್ ಆಡಲ್ಲ ಅಂದ್ರೆ ನಾನೂ ಆಡಲ್ಲ ಎಂದ ರೈನಾ

ಧೋನಿ ಭಾಯ್ ಆಡಲ್ಲ ಅಂದ್ರೆ ನಾನೂ ಆಡಲ್ಲ ಎಂದ ರೈನಾ

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂ.ಎಸ್​.ಧೋನಿ ವಿದಾಯ ಘೋಷಣೆ ಮಾಡ್ತಿದ್ದಂತೆ ಸುರೇಶ್​ ರೈನಾ ಕೂಡ ವಿದಾಯ ಹೇಳಿದ್ರು. ಇದ್ರ ಬೆನ್ನಲ್ಲೇ ಸಿಎಸ್​​ಕೆ ತಂಡದ ನಾಯಕ ಧೋನಿ ಈ ವರ್ಷದ ಐಪಿಎಲ್​ ಮುಕ್ತಾಯಗೊಳ್ಳುತ್ತಿದ್ದಂತೆ ಐಪಿಎಲ್​ಗೂ ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ, ಇದಕ್ಕೆ ಪ್ರತಿಯಾಗಿ ರೈನಾ ಕೂಡಾ ಐಪಿಎಲ್​ನಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ.

2008ರಿಂದಲೂ ನಾನು ಸಿಎಸ್​ಕೆ ಪರ ಆಡುತ್ತಿದ್ದು, ಧೋನಿ ಭಾಯ್​ ಮುಂದಿನ ಆವೃತ್ತಿ ಆಡದಿದ್ದರೆ ನಾನು ಕೂಡ ಆಡಲ್ಲ. ಆದರೆ ಈ ಸಲ ಸಿಎಸ್​​ಕೆ ಟ್ರೋಫಿ ಗೆದ್ರೆ ಮುಂದಿನ ವರ್ಷವೂ ಆಡುವಂತೆ ಮನವಿ ಮಾಡುವೆ ಎಂದಿದ್ದಾರೆ.

The post ಧೋನಿ ಭಾಯ್ ಆಡಲ್ಲ ಅಂದ್ರೆ ನಾನೂ ಆಡಲ್ಲ ಎಂದ ರೈನಾ appeared first on News First Kannada.

Source: newsfirstlive.com

Source link