ಮಾಜಿ ರಾಷ್ಟ್ರಪತಿಗಳು, ಪ್ರಧಾನಿಗಳಿಗೂ ಚಿಕಿತ್ಸೆ ನೀಡಿದ್ದ ಆಯುರ್ವೇದ ದೈತ್ಯ ವಾರಿಯೆರ್ ನಿಧನ

ಮಾಜಿ ರಾಷ್ಟ್ರಪತಿಗಳು, ಪ್ರಧಾನಿಗಳಿಗೂ ಚಿಕಿತ್ಸೆ ನೀಡಿದ್ದ ಆಯುರ್ವೇದ ದೈತ್ಯ ವಾರಿಯೆರ್ ನಿಧನ

ಆಯುರ್ವೇದ ಚಿಕಿತ್ಸೆಯಲ್ಲಿ ದೊಡ್ಡಮಟ್ಟದ ಹೆಸರು ಮಾಡಿದ್ದ, ಜಗತ್ತಿನಾದ್ಯಂತ ಸಾವಿರಾರು ರೋಗಿಗಳನ್ನು ಆಯುರ್ವೇದದಿಂದಲೇ ಗುಣಪಡಿಸಿದ್ದ ಕೇರಳದ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲಾದ ಟ್ರಸ್ಟಿ ಶತಾಯುಷಿ ಡಾ. ಪಿ.ಕೆ. ವಾರಿಯೆರ್(100) ಇಂದು ಸಾವನ್ನಪ್ಪಿದ್ದಾರೆ.

ಪಿ.ಕೆ. ವಾರಿಯೆರ್ ಅವರು ಮಾಜಿ ರಾಷ್ಟ್ರಪತಿಗಳು ಹಾಗೂ ಮಾಜಿ ಪ್ರಧಾನಿಗಳಿಗೂ ಸಹ ಆಯುರ್ವೇದ ಚಿಕಿತ್ಸೆ ನೀಡಿದ್ದರು ಎನ್ನಲಾಗಿದೆ. ವಾರಿಯೆರ್ ಅವರ ಸಾವಿಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸ್ಪೀಕರ್ ಎಂ. ಬಿ. ರಮೇಶ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಾರಿಯೆರ್ ಅವರು ಸ್ವಾತಂತ್ರ್ಯ ಹೋರಾಟದಲ್ಲೂ ಸಹ ತಮ್ಮನ್ನು ತೊಡಗಿಸಿಕೊಂಡಿದ್ದರು.. ನಂತರ ರಾಜಕಾರಣವನ್ನ ನಿರಾಕರಿಸಿ ಕೊಟ್ಟಕ್ಕಲ್ ಆರ್ಯವೈದ್ಯ ಶಾಲಾಗೆ ಸೇರಿಕೊಂಡು ಆಯುರ್ವೇದದ ಕಲಿಕೆ ಆರಂಭಿಸಿದ್ದರು.

The post ಮಾಜಿ ರಾಷ್ಟ್ರಪತಿಗಳು, ಪ್ರಧಾನಿಗಳಿಗೂ ಚಿಕಿತ್ಸೆ ನೀಡಿದ್ದ ಆಯುರ್ವೇದ ದೈತ್ಯ ವಾರಿಯೆರ್ ನಿಧನ appeared first on News First Kannada.

Source: newsfirstlive.com

Source link