ಅಮಾವಾಸ್ಯೆಯಂದು 154 ಅನಾಥ ಆತ್ಮಗಳಿಗೆ ಪಿಂಡಪ್ರಧಾನ ಮಾಡಿದ ಸಾಮಾಜಿಕ ಕಾರ್ಯಕರ್ತ‌

ಅಮಾವಾಸ್ಯೆಯಂದು 154 ಅನಾಥ ಆತ್ಮಗಳಿಗೆ ಪಿಂಡಪ್ರಧಾನ ಮಾಡಿದ ಸಾಮಾಜಿಕ ಕಾರ್ಯಕರ್ತ‌

ಉಡುಪಿ: ಕೊರೊನಾ, ಅಪಘಾತ ಹಾಗೂ ವಿವಿಧ ಕಾಯಿಲೆಗಳಿಂದ ಮೃತಪಟ್ಟಿರುವ 154 ಅನಾಥ ಆತ್ಮಗಳಿಗೆ ಪಿಂಡ ಪ್ರಧಾನ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ಜಿಲ್ಲೆಯಲ್ಲಿ ನಡೆಯಿತು.

ಕಾನೂನು ಪ್ರಕ್ರಿಯೆ ಮೂಲಕ ಈ‌ ಹಿಂದೆ‌ ಅಂತ್ಯ ಸಂಸ್ಕಾರ ನಡೆದಿತ್ತು. ಆದರೆ ಸತ್ತವರ ಆತ್ಮಗಳಿಗೆ ಪಿಂಡ ಪ್ರಧಾನ ನಡೆದಿರಲಿಲ್ಲ. ಹೀಗಾಗಿ ಅನಾಥ ಶವಗಳಿಗೆ ಸದ್ಗತಿ ನೀಡುತ್ತಾ ಬಂದಿರುವ ಸಾಮಾಜಿಕ ಕಾರ್ಯಕರ್ತ‌ ನಿತ್ಯಾನಂದ ಒಳಕಾಡು ಈ‌ ದಿನ ಅಮಾವಾಸ್ಯೆ ಹಿನ್ನಲೆಯಲ್ಲಿ 154 ಅನಾಥ ಆತ್ಮಗಳಿಗೆ ಸದ್ಗತಿ ಪ್ರಾಪ್ತಿಗಾಗಿ ಉಡುಪಿಯ ಪೆರಂಪಳ್ಳಿ ಗ್ರಾಮದಲ್ಲಿರುವ ಶೀಂಬ್ರಾ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಯಾಗ ಸಭಾಂಗಣದಲ್ಲಿ ಕರಂಬಳ್ಳಿ ನಾಗರಾಜ್ ಐತಾಳ್ ಸಾರಥ್ಯದ ಪುರೋಹಿತರ ಮೂಲಕ, ತಿಲಹೋಮ, ನಾರಾಯಣ ಬಲಿ ಮೊದಲಾದ ಧಾರ್ಮಿಕ ಪ್ರಕ್ರಿಯೆಗಳು ನಡೆಸಿದ್ರು.

ಈ‌ ಧಾರ್ಮಿಕ ಕಾರ್ಯದಲ್ಲಿ ಪಿಂಡಗಳನ್ನು ಸುವರ್ಣ ನದಿಯ ಕೃಷ್ಣಾಂಗರಕ ಸ್ನಾನಘಟ್ಟದಲ್ಲಿ ಹರಿದುಬಿಡಲಾಯಿತು. ಈ ಕಾರ್ಯದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಪಾಲ್ಗೊಂಡಿದ್ರು.

The post ಅಮಾವಾಸ್ಯೆಯಂದು 154 ಅನಾಥ ಆತ್ಮಗಳಿಗೆ ಪಿಂಡಪ್ರಧಾನ ಮಾಡಿದ ಸಾಮಾಜಿಕ ಕಾರ್ಯಕರ್ತ‌ appeared first on News First Kannada.

Source: newsfirstlive.com

Source link