ಡೈರೆಕ್ಷನ್ ಮಾಡೋ ಕನಸಿನಲ್ಲಿ ಗೋಲ್ಡನ್ ಸ್ಟಾರ್.. ಯಾವುದು ಆ ಸಿನಿಮಾ..?

ಡೈರೆಕ್ಷನ್ ಮಾಡೋ ಕನಸಿನಲ್ಲಿ ಗೋಲ್ಡನ್ ಸ್ಟಾರ್.. ಯಾವುದು ಆ ಸಿನಿಮಾ..?

ಸ್ಯಾಂಡಲ್​ವುಡ್​​ನ ಗೋಲ್ಡನ್ ಸ್ಟಾರ್ ಹೊಸದೊಂದು ಸ್ವೀಟ್ ಸಮಾಚಾರವನ್ನ ಚಿತ್ರಪ್ರೇಮಿಗಳಿಗೆ ನೀಡಿದ್ದಾರೆ. ನಿರೂಪಕನಾಗಿ, ಹಾಸ್ಯ ನಟನಾಗಿ, ಪೋಷಕ ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ಗೋಲ್ಡನ್ ಸ್ಟಾರ್ ಗಣೇಶ್​​​. ಸೂಪರ್ ಹಿಟ್ ಸಿನಿಮಾಗಳ ಮೂಲಕ ಬಾಕ್ಸಾಫೀಸ್​​ನಲ್ಲಿ ಢಮಾಲ್ ಡಿಮೀಲ್ ಮಾಡಿದ್ದವರು ಗೋಲ್ಡನ್ ಸ್ಟಾರ್ ಗಣೇಶ್​​.

blank

ನಟನೆಯಲ್ಲಿ ಅಭಿನಯ ಅಧಿಪತಿ ಎಂದು ಬಿರುದು ಗಳಿಸಿರುವ ಗಣೇಶ್​ ಅವರಿಗೆ ಮತ್ತೊಮ್ಮೆ ಡೈರೆಕ್ಷನ್ ಚೇರ್ ಮೇಲೆ ಕೂರೋ ಕನಸಿದೆಯಂತೆ. ಈ ಮಾತನ್ನ ಗಣೇಶ್ ಆಡಲು ಕಾರಣ ದೂದ್​ ಪೇಡ ಖ್ಯಾತಿಯ ದಿಗಂತ್​ ಹಾಗೂ ದಿಗಂತ್ ಅಭಿನಯದ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದ ಲಿರಿಕಲ್ ಸಾಂಗ್​.

blank

ಅರೇ ಗಣೇಶ್ ಡೈರೆಕ್ಷನ್​​​​ಗೂ ದಿಗಂತ್ ಅವರ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾಕ್ಕೂ ಎತ್ತಣಿಂದೆತ್ತಣ ಸಂಬಂಧ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ ಓದಿ.. ಗೋಲ್ಡನ್ ಸ್ಟಾರ್ ಗಣೇಶ್ ಬರೋಬ್ಬರಿ ಒಂದೂವರೆ ವರ್ಷದ ನಂತರ ಮಾಧ್ಯಮಗಳ ಮುಂದೆ ಕಂಗೊಳಿಸಿದ್ರು. ಗಣಿ ಅವರ ಗೆಳೆಯ ದಿಗ್ಗಿ ನಟನೆಯ ಸಿನಿಮಾಕ್ಕಾಗಿ ಗಣೇಶ್ ಮಾಧ್ಯಮಗಳ ಕ್ಯಾಮೆರಾ ಮುಂದೆ ಬಂದಿದ್ದರು. ದಿಗಂತ್ ನಟನೆಯ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದ ಲಿರಿಕಲ್ ಹಾಡೊಂದನ್ನ ಬಿಡುಗಡೆ ಮಾಡಿದ್ರು ಗಣೇಶ್​​. ಈ ಸಂದರ್ಭದಲ್ಲಿ ಚಿತ್ರಪ್ರೇಮಿಗಳೇ ತಂಡದ ಜೊತೆ ಮಾತನಾಡುವಾಗ ಡೈರೆಕ್ಷನ್ ಕನಸಿನ ಮಾತನ್ನ ಹೊರ ಬಿಟ್ಟರು.

blank

ಕೆಲ ವರ್ಷಗಳ ಹಿಂದೆ ತಮ್ಮದೆ ಬ್ಯಾನರ್​ನಲ್ಲಿ ಕೂಲ್ ಅನ್ನೋ ಸಿನಿಮಾವನ್ನ ಮೊದಲ ಬಾರಿಗೆ ನಿರ್ದೇಶನ ಮಾಡಿದ್ರು. ಈಗ ಲಾಕ್ ಡೌನ್ ಟೈಮ್​​ನಲ್ಲಿ ಸಿನಿಮಾಗಳ ಕಥೆಗಳನ್ನ ಹೆಚ್ಚೆಚ್ಚು ಕೇಳಿರುವ ಗಣಪ ಮತ್ತೊಮ್ಮೆ ಡೈರೆಕ್ಟರ್ ಚೇರ್​​ ಮೇಲೆ ಕೂರೋ ಕನಸನ್ನ ಕಂಡಿದ್ದಾರೆ. ಆದ್ರೆ ಅದ್ಯಾವಾಗ ಅನ್ನೊದು ಸ್ವತಃ ಗಣೇಶ್ ಅವರಿಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ತ್ರಿಬಲ್ ರೈಡಿಂಗ್, ಗಾಳಿಪಟ ಹಾಗೂ ಸಖತ್ ಸಿನಿಮಾಗಳ ಮೂಲಕ ಪ್ರೇಕ್ಷಕರ ರಂಜಿಸಲು ಬರಲಿದ್ದಾರೆ ಗಣೇಶ್​​.

The post ಡೈರೆಕ್ಷನ್ ಮಾಡೋ ಕನಸಿನಲ್ಲಿ ಗೋಲ್ಡನ್ ಸ್ಟಾರ್.. ಯಾವುದು ಆ ಸಿನಿಮಾ..? appeared first on News First Kannada.

Source: newsfirstlive.com

Source link