ಕಾಂಗ್ರೆಸ್​ಗೆ ವಾಪಸ್ಸಾಗ್ತಾರಾ ಎ. ಮಂಜು..?; ಬೆಂಬಲಿಗರಿಂದ ಡಿಕೆಎಸ್​ಗೆ ಒತ್ತಡ

ಕಾಂಗ್ರೆಸ್​ಗೆ ವಾಪಸ್ಸಾಗ್ತಾರಾ ಎ. ಮಂಜು..?; ಬೆಂಬಲಿಗರಿಂದ ಡಿಕೆಎಸ್​ಗೆ ಒತ್ತಡ

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದವರು ಅರಕಲಗೂಡು ಮಾಜಿ ಶಾಸಕ ಎ ಮಂಜು. 2019ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧಿಸಿ ಪರಾಜಿತಗೊಂಡ ಎ. ಮಂಜು ಈಗ ಬಿಜೆಪಿಗೆ ಗುಡ್​ ಬೈ ಹೇಳಿ ಕಾಂಗ್ರೆಸ್ ಕದ ತಟ್ಟಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಇಂದು ಸದಾಶಿವನಗರದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸಕ್ಕೆ ​​ಎ. ಮಂಜು ಬೆಂಬಲಿಗರು ಭೇಟಿ ನೀಡಿದ್ದರು. ಈ ವೇಳೆ ಹೇಗಾದರೂ ಸರಿ ಮತ್ತೆ ಎ. ಮಂಜುರನ್ನು ಕಾಂಗ್ರೆಸ್​ಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಬಿಜೆಪಿ ತೊರೆದಿರುವ ಎ. ಮಂಜು ತನ್ನ ಬೆಂಬಲಿಗರ ಮೂಲಕ ಕಾಂಗ್ರೆಸ್​ ಸೇರಲು ಡಿ.ಕೆ ಶಿವಕುಮಾರ್​ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.

blank

 

The post ಕಾಂಗ್ರೆಸ್​ಗೆ ವಾಪಸ್ಸಾಗ್ತಾರಾ ಎ. ಮಂಜು..?; ಬೆಂಬಲಿಗರಿಂದ ಡಿಕೆಎಸ್​ಗೆ ಒತ್ತಡ appeared first on News First Kannada.

Source: newsfirstlive.com

Source link