ಕೊರೊನಾ ಮೂರನೇ ಅಲೆ ಕಠಿಣ ಸಂಧರ್ಭ ಸೃಷ್ಟಿ ಮಾಡುವ ಆತಂಕವಿದೆ: ಬಿಎಸ್‍ವೈ

ಕಲಬುರಗಿ: ಕೊರೊನಾ ಎರಡನೇ ಅಲೆಗಿಂತ ಮೂರನೇ ಅಲೆ ಕಠಿಣ ಸಂಧರ್ಭ ಸೃಷ್ಟಿಮಾಡುವ ಆತಂಕವಿದೆ ಎಂದು ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಪಂಡಿತ ರಂಗಮಂದಿರದಲ್ಲಿ ರೈತರಿಗೆ ಸಾಲ ವಿತರಣೆ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಸದ್ಯ ಕೊರೊನಾ ಎರಡನೇ ಅಲೆಯನ್ನು ನಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಆದರೆ ತಜ್ಞರು ನೀಡಿರುವ ವರದಿ ಪ್ರಕಾರ ಮೂರನೇ ಅಲೆ ಸಹ ಇದೀಗ ಎದುರಾಗುವ ಆತಂಕವಿದೆ. ಈಗಾಗಲೇ ತಜ್ಞರು ಸಹ ಇದರ ಬಗ್ಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಕೇಂದ್ರ ಸಚಿವೆ ಕರಂದ್ಲಾಜೆಯನ್ನು ಹಾಡಿ ಹೊಗಳಿದ ಬಿಎಸ್‍ವೈ

ಮೂರನೇ ಅಲೆ ಆತಂಕ ಹಿನ್ನಲೆ ಜನ ಜಾಗೃತರಾಗಿರಬೇಕು. ಯಾವುದೇ ಕಾರಣಕ್ಕೂ ಕೊರೊನಾ ನಿಯಮಗಳನ್ನು ಮರೆಯಬಾರದು. ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ಮಾಸ್ಕ್‌ಗಳನ್ನು ಸಹ ಹಾಕುವುದನ್ನು ಜನ ಮರೆಯಬಾರದು ಅಂತಾ ಸಿಎಂ ಬಿಎಸ್‍ವೈ ಮನವಿ ಮಾಡಿದ್ದಾರೆ. ಇದನ್ನೂ ಓದಿ:  ಜಮೀನು ವಿವಾದ- ಹಾಡ ಹಗಲೇ ವ್ಯಕ್ತಿಯ ಕೊಲೆ

ಕೊರೊನಾ ಎರಡನೇ ಅಲೆಯಲ್ಲಿ ಶ್ರಮಿಕ ವರ್ಗದವರಿಗೆ ಪರಿಹಾರದ ಪ್ಯಾಕೇಜ್‍ನ್ನು ನಾವು ಈಗಾಗಲೇ ನೀಡಿದ್ದೆವೆ. ಮೂರನೇ ಅಲೆ ತಡೆಯಲು ಜನರ ಸಹಕಾರ ನಮಗೆ ಮುಖ್ಯವಾಗಿದೆ. ಹೀಗಾಗಿ ಜನ ಸಹ ಎಚ್ಚರಿಕೆಯಿಂದ ಇರಬೇಕು ಅಂತಾ ರಾಜ್ಯದ ಜನರ ಬಳಿ ಸಿಎಂ ಮನವಿ ಮಾಡಿದ್ದಾರೆ.

The post ಕೊರೊನಾ ಮೂರನೇ ಅಲೆ ಕಠಿಣ ಸಂಧರ್ಭ ಸೃಷ್ಟಿ ಮಾಡುವ ಆತಂಕವಿದೆ: ಬಿಎಸ್‍ವೈ appeared first on Public TV.

Source: publictv.in

Source link