ಕೊರೊನಾ ನಿಯಮ ಪಾಲಿಸದವರಿಂದ 3 ಮುಕ್ಕಾಲು ಕೋಟಿ ದಂಡ ಸಂಗ್ರಹ

ಕೊರೊನಾ ನಿಯಮ ಪಾಲಿಸದವರಿಂದ 3 ಮುಕ್ಕಾಲು ಕೋಟಿ ದಂಡ ಸಂಗ್ರಹ

ಬೆಂಗಳೂರು: ಪಶ್ಚಿಮ ವಿಭಾಗ ಪೊಲೀಸರು ಮಾಸ್ಕ್ ಇಲ್ಲದೇ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದವರಿಂದ ದಾಖಲೆ ಪ್ರಮಾಣದಲ್ಲಿ ದಂಡ ವಸೂಲಿ ಮಾಡಲಾಗಿದೆ.

2020, 4 ಜುಲೈನಿಂದ 2021 ಜುಲೈ 10ರವರೆಗೆ ನಡೆದ ಕಾರ್ಯಾಚರಣೆಯಲ್ಲಿ ಒಂದು ವರ್ಷದಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಒಟ್ಟು 4 ಕೋಟಿ ದಂಡ ವಸೂಲಿ ಮಾಡಿದ್ದಾರೆ. ಮೊದಲ ಅಲೆ ಪ್ರಾರಂಭದಿಂದ ಅಂದರೆ 2020 ಜುಲೈನಿಂದ 2021 ಏಪ್ರಿಲ್​ವರೆಗೂ ಒಟ್ಟು, 1 ಲಕ್ಷದ 20 ಸಾವಿರದ 21 ಕೇಸ್​ಗಳನ್ನು ಪತ್ತೆಹಚ್ಚಿ ಇದರಲ್ಲಿ ಮೊತ್ತ 3,46,26,250 ರೂಪಾಯಿ ದಂಡ ಸಂಗ್ರಹಿಸಲಾಗಿದೆ.

ಇನ್ನು ಎರಡನೇ ಅಲೆಯಲ್ಲಿ ಅಂದ್ರೆ 2ನೇ ಅಲೆ ಏಪ್ರಿಲ್ 2021 ರಿಂದ ಜುಲೈ 10ರವರೆಗೂ ಒಟ್ಟು ಕೇಸ್ 27,654 ಕೇಸ್​ಗಳನ್ನು ಪತ್ತೆ ಹಚ್ಚಿ ₹69,13,500 ರೂ ದಂಡ ವಿಧಿಸಲಾಗಿದೆ.

The post ಕೊರೊನಾ ನಿಯಮ ಪಾಲಿಸದವರಿಂದ 3 ಮುಕ್ಕಾಲು ಕೋಟಿ ದಂಡ ಸಂಗ್ರಹ appeared first on News First Kannada.

Source: newsfirstlive.com

Source link