ಗುರಾಯಿಸಿದ ರೌಡಿ ಶೀಟರ್​ಗೆ ಕಪಾಳ ಮೋಕ್ಷ ಮಾಡಿದ ಇನ್​ಸ್ಪೆಕ್ಟರ್

ಗುರಾಯಿಸಿದ ರೌಡಿ ಶೀಟರ್​ಗೆ ಕಪಾಳ ಮೋಕ್ಷ ಮಾಡಿದ ಇನ್​ಸ್ಪೆಕ್ಟರ್

ಬೆಂಗಳೂರು: ಬೆಂಗಳೂರು ಕಮೀಷನರ್ ಕಮಲ್ ಪಂತ್ ಆದೇಶದ ಮೇರೆಗೆ ನಗರದ ಪೊಲೀಸರು ರೌಡಿ ಪರೇಡ್ ನಡೆಸಿದರು. ಸುಮಾರು 2 ಸಾವಿರಕ್ಕೂ ಹೆಚ್ಚು ರೌಡಿಗಳ ಮನೆ ಮತ್ತು ಜೈಲುಗಳ ಮೇಲೆ ಒಟ್ಟಿಗೆ ದಾಳಿ ನಡೆಸಿದ್ದ ಪೊಲೀಸರ ವಿಶೇಷ ಕಾರ್ಯಾಚರಣೆಯಲ್ಲಿ 1,500ಕ್ಕೂ ಹೆಚ್ಚು ರೌಡಿಗಳು ಸಿಕ್ಕಿಬಿದ್ದಿದ್ದರು. ಈ ವೇಳೆ ಚಾಕು, ಲಾಂಗು, ಮಚ್ಚು, ಮೊಬೈಲ್, ಗಾಂಜಾ ಇತ್ಯಾದಿ ಪೊಲೀಸರಿಗೆ ಸಿಕ್ಕಿತ್ತು.

ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದ ಹಲವರ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ನಗರದಾದ್ಯಂತ ಪೊಲೀಸರು ಆಯಾ ಪೊಲೀಸ್ ಠಾಣೆಯಲ್ಲಿ ಲೋಕಲ್ ರೌಡಿಗಳ ವಿಚಾರಣೆ ನಡೆಸುತ್ತಿದ್ದಾರೆ. ಹೀಗೆ ಡಿಜೆ ಹಳ್ಳಿ ಗ್ರೌಂಡ್​ನಲ್ಲಿ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ರೌಡಿ ಪರೇಡ್ ನಡೆಸಲಾಗುತ್ತಿತ್ತು.

ಇನ್ನು, ಡಿಸಿಪಿ ಶರಣಪ್ಪ ಎಲ್ಲಾ ರೌಡಿ ಶೀಟರ್​ಗಳನ್ನ ಪ್ರಶ್ನೆ ಕೇಳುತ್ತಿದ್ದರು. ಈ ವೇಳೆ ಭಾರತೀನಗರ ವ್ಯಾಪ್ತಿಯ ರೌಡಿ ಶೀಟರ್ ಮಹಮ್ಮದ್ ಸಫಾನ್ ಪೊಲೀಸರಿಗೆ ಉತ್ತರಿಸದೇ ಗುರಾಯಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಇನ್ಸ್​ಪೆಕ್ಟರ್ ಆನಂದ್ ನಾಯ್ಕ್ ಡಿಸಿಪಿ ಸಮ್ಮುಖದಲ್ಲೇ ಕಪಾಳ ಮೋಕ್ಷ ಮಾಡಿದ್ದಾರೆ.

The post ಗುರಾಯಿಸಿದ ರೌಡಿ ಶೀಟರ್​ಗೆ ಕಪಾಳ ಮೋಕ್ಷ ಮಾಡಿದ ಇನ್​ಸ್ಪೆಕ್ಟರ್ appeared first on News First Kannada.

Source: newsfirstlive.com

Source link