‘ಶ್ರೀಮನ್ನಾರಾಯಣ’ ಲಾಸ್ ಅಂದವರಿಗೆ ರಿಷಬ್ ಕ್ಲಾಸ್

‘ಶ್ರೀಮನ್ನಾರಾಯಣ’ ಲಾಸ್ ಅಂದವರಿಗೆ ರಿಷಬ್ ಕ್ಲಾಸ್

ಒಬ್ಬರ ಬಗ್ಗೆ ಮಾತನಾಡೋದು ಸುಲಭ. ಆದ್ರೆ ಅವರಂತೆ ನಾವಾಗೋದು ಬಲು ಕಷ್ಟ. ಪ್ರತ್ಯಕ್ಷವಾಗಿ ಕಂಡರು ಪ್ರಾಮಾಣಿಸಿ ನೋಡು ಅನ್ನೋ ಒಂದು ಚಿನ್ನದಂಥ ಮಾತಿದೆ. ಈ ಮಾತು ಸರ್ವ ಕಾಲಕ್ಕೂ ಜೊತೆ ಜೊತೆಗಿರೋ ನೀತಿ ಪಾಠವಾಗಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಾಪಕರನ್ನ ಲಾಸ್ ಮಾಡಿದ್ರು ಅನ್ನೋ ಆರೋಪಕ್ಕೆ ವಿರೋಧವಾಗಿ ರಿಷಬ್ ಶೆಟ್ಟಿ ಬ್ಯಾಟ್ ಬೀಸಿದ್ದಾರೆ.

ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಎಂದು ಸಿನಿ ರಂಗದಲ್ಲಿ ಬೆಳೆದು ಬಂದ ಸ್ನೇಹಿತರು ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ. ಒಟ್ಟೊಟ್ಟಿಗೆ ಸಿನಿ ಲೋಕದಲ್ಲಿ ಸೋಲು ಗೆಲುವುಗಳನ್ನ ಕಂಡಿದ್ದಾರೆ. ಅದೆಂಥದ್ದೇ ಸಂದರ್ಭ ಬಂದ್ರು ಒಟ್ಟಿಗೆ ‘‘ನಡಿ ಮಚ್ಚ , ನಿನಗೆ ನಾನು, ನನಗೆ ನೀನು’’ ಎಂದು ತಮ್ಮ ಸಿನಿ ಕನಸಿನ ದಾರಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಕಷ್ಟಕ್ಕೆ ಆಗದೇ ಇದ್ದವ್ನು ಸ್ನೇಹಿತರಾ ಹೇಳಿ? ರಕ್ಷಿತ್ ಶೆಟ್ಟಿಯವರ ಮೇಲೆ ಬಂದಿರೋ ಸತ್ವ-ತತ್ವ ಇಲ್ಲದ ಆರೋಪಕ್ಕೆ ರಿಷಬ್ ಶೆಟ್ಟಿ ಬೇಸರ ವ್ಯಕ್ತ ಡಿಸಿದ್ದಾರೆ. ಜೊತೆಗೆ ತನ್ನ ಸ್ನೇಹಿತ ಅಂದರೇನು ಅನ್ನೋದನ್ನ ಜಗತ್ತಿಗೆ ಸಾರಿ ಸಾರಿ ಹೇಳಿದ್ದಾರೆ.

blank

ರಕ್ಷಿತ್ ಶೆಟ್ಟಿ, ಮೂರೂ ಹೊತ್ತು ಸಿನಿಮಾ ಸಿನಿಮಾ ಅಂತ ಜಪಿಸೋ ಸಿನಿ ಕನಸುಗಳ ತಿಂಡಿಪೋತ. ಏನಾದ್ರು ಡಿಫರೆಂಟ್ ಆಗಿ ಮಾಡಬೇಕು, ಕನ್ನಡ ಸಿನಿಲೋಕವನ್ನ ಇಡೀ ಸಿನಿ ಜಗತ್ತು ನೋಡಬೇಕು ಅನ್ನೋ ಛಲವಿರೋರು. ಇವತ್ತು ರಕ್ಷಿತ್ ಶೆಟ್ಟಿ ಸ್ಟಾರ್ ನಟ. ಆದ್ರೆ ಒಂದು ಕಾಲಕ್ಕೆ ಸಿಂಪಲ್ ಹುಡ್ಗ. ಒಂದು ಹೊತ್ತಿನ ಕೂಳಿಗೂ ಅಲೆದಾಡಿದ್ದ ನಿರುದ್ಯೋಗಿ ಇಂಜಿನಿಯರ್. ಬಟ್ ಇವತ್ತು ಕೋಟ್ಯಾಧೀಶ.. ಜೊತೆಗೆ ಸಿನಿಮಾ ಕನಸುಗಳ ಕೋಶ. ಕನ್ನಡದಲ್ಲೂ ಸಿನಿಮಾ ರೈಟರ್ಸ್​ಗಳಿಗೆ ಕಾರ್ಪೋರೆಟ್ ಸ್ಟಿಸ್ಟಮ್ ಲೆವಲ್​​​​​​​​​​​​​​​​​ಗೆ ಸಂಬಳ ಕೊಟ್ಟು ಕಾಪಾಡ್ತಿರೋ ಮನಸಿನ ಮೇಲೆ ಹೀಗೇಕೆ ಆರೋಪ ಬಂತು ಗೊತ್ತಿಲ್ಲ. ರಕ್ಷಿತ್ ಶೆಟ್ಟಿ ಹೊರಗಿನ ಜನರ ಕಷ್ಟಕ್ಕೆ ಆಗದೇ ಇದ್ದಿರಬಹುದು. ಆದ್ರೆ ಯಾರಿಗೂ ಅನ್ಯಾಯವಂತೂ ಮಾಡಿಲ್ಲ.

ಒಂದು ಸಿನಿಮಾದ ಸಕ್ಸಸ್ ಮತ್ತು ಫೇಲ್ಯೂರು. ಅನೇಕ ಸ್ನೇಹಗಳನ್ನ ಒಡೆದು ಜಡಿದು ಹಾಕುತ್ತೆ.. ಹೊಸ ಸ್ನೇಹ ಸಂಪಾದನೆಯನ್ನ ಕೊಡುತ್ತೆ. ಅವನೇ ಶ್ರೀಮನ್ನಾರಾಯಣ ಸಿನಿಮಾ ದೊಡ್ಡಕ್ಕೆ ಸೌಂಡ್ ಮಾಡಿತ್ತು ನಿಜ. ಆದ್ರೆ ಕೆಜಿಎಫ್ ಸಿನಿಮಾದಷ್ಟು ಹೊರ ರಾಜ್ಯಗಳಲ್ಲಿ ದಾಖಲೆಯ ಕಲೆಕ್ಷನ್ ಮಾಡ್ಲಿಲ್ಲ. ಜೊತೆಗೆ ನಿರ್ಮಾಪಕರಿಗೂ ಕೋಟಿ ಕೋಟಿ ಲಾಸ್ ಮಾಡೋಷ್ಟು ಅಟ್ಟರ್ ಫ್ಲಾಫ್ ಸಿನಿಮಾವೂ ಆಗ್ಲಿಲ್ಲ. ಸಿನಿಮಾ ರಿಲೀಸ್ ಆಗಿ ಹತ್ತಿರ ಹತ್ತಿರ ಎರಡು ವರ್ಷವಾದ್ಮೇಲೆ ಹೊಸದೊಂದು ಪುಗುಸಟ್ಟೆ ಪೇಕ್ ನ್ಯೂಸ್ ಬಾಂಬ್ ಹೊರ ಬಂದು ಟುಸ್ ಆಗಿದೆ.

blank

ರಕ್ಷಿತ್ ಶೆಟ್ಟಿ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬೇರೆಯಾಗಿದ್ದಾರೆ ಕಾರಣ ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಪುಷ್ಕರ್​​ಗೆ ಲಾಸ್ ಆಗಿದೆ ಅನ್ನೋ ಒಂದು ಗಾಂಧಿನಗರ ಸುದ್ದಿ ಇವತ್ತು ಚಾಲ್ತಿಗೆ ಬಂದಿದೆ. ಆದ್ರೆ ಈ ಬಗ್ಗೆ ಸ್ವತಃ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ರಕ್ಷಿತ್ ಅವರಿಂದ ನನಗೇನೂ ಲಾಸ್ ಆಗಿಲ್ಲ, ನಾನು ಬೇರೆ ಬೇರೆ ಸಿನಿಮಾಗಳನ್ನ ನಿರ್ಮಾಣ ಮಾಡ್ತಿರೋ ಕಾರಣ ಪರಮ್ವಾ ಸ್ಟುಡಿಯೋ ಜೊತೆ ಪಾರ್ಟ್ನರ್ ಆಗಿ ಕೆಲಸ ಮಾಡ್ತಿಲ್ಲ ಅಷ್ಟೇ ಎಂದಿದ್ದಾರೆ. ಒಟ್ಟಿನಲ್ಲಿ ಒಂದು ಗಾಳಿ ಸುದ್ದಿ ರಕ್ಷಿತ್ ಶೆಟ್ಟಿ ಅವರ ಮನಸಿಗೆ ಘಾಸಿಯನ್ನ ಉಂಟು ಮಾಡಿರೋದಂತು ನಿಜ. ಗಾಳಿ ಸುದ್ದಿಗೆ ತಲೆಕೆಡಿಸಿಕೊಳ್ಳಬೇಡಿ ರಕ್ಷಿತ್ ಶೆಟ್ಟಿ ಒಳ್ಳೆ ಸಿನಿಮಾಗಳಿಗೆ ಕನ್ನಡಿಗರು ಸದಾ ಆಶೀರ್ವಾದ ಮಾಡೇ ಮಾಡ್ತಾರೆ.

The post ‘ಶ್ರೀಮನ್ನಾರಾಯಣ’ ಲಾಸ್ ಅಂದವರಿಗೆ ರಿಷಬ್ ಕ್ಲಾಸ್ appeared first on News First Kannada.

Source: newsfirstlive.com

Source link