ಬಾಂಗ್ಲಾ ಬೆಂಕಿ ಅವಘಡದಲ್ಲಿ 52 ಮಂದಿ ಸಾವು; ಫ್ಯಾಕ್ಟರಿಯ ಮಾಲೀಕ.. 4 ಮಕ್ಕಳು ಅರೆಸ್ಟ್

ಬಾಂಗ್ಲಾ ಬೆಂಕಿ ಅವಘಡದಲ್ಲಿ 52 ಮಂದಿ ಸಾವು; ಫ್ಯಾಕ್ಟರಿಯ ಮಾಲೀಕ.. 4 ಮಕ್ಕಳು ಅರೆಸ್ಟ್

ನಿನ್ನೆಯಷ್ಟೇ ಬಾಂಗ್ಲಾದೇಶದ ಧಾಕಾ ಬಳಿ ಜ್ಯೂಸ್​ ಫ್ಯಾಕ್ಟರಿಯೊಂದರಲ್ಲಿ ಭಾರೀ ಅಗ್ನಿದುರಂತ ಸಂಭವಿಸಿ 52 ಮಂದಿ ಸಾವನ್ನಪ್ಪಿದ್ದರು. ಈ ಪೈಕಿ ಕೆಲವರು ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಕಟ್ಟಡದ 6 ನೇ ಫ್ಲೋರ್​ನಿಂದ ಕೆಳಗೆ ನೆಗೆದು ಪ್ರಾಣ ಕಳೆದುಕೊಂಡಿದ್ದರು.

ಇದೀಗ ಘಟನೆಗೆ ಸಂಬಂಧಿಸಿದಂತೆ ಫ್ಯಾಕ್ಟರಿಯ ಮಾಲೀಕ.. ಆತನ ನಾಲ್ವರು ಪುತ್ರರು ಸೇರಿದಂತೆ ಒಟ್ಟು 8 ಮಂದಿಯನ್ನ ಅರೆಸ್ಟ್ ಮಾಡಲಾಗಿದೆ. ಇನ್ನು ಫ್ಯಾಕ್ಟರಿಯಲ್ಲಿ ಅಪ್ರಾಪ್ತ ಬಾಲಕರನ್ನೂ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು ಎಂಬ ಆರೋಪ ಕೇಳಿಬಂದಿದ್ದು ವಿಶೇಷ ತನಿಖಾ ದಳವನ್ನೇ ರಚಿಸಲಾಗಿದೆ.

ಇನ್ನು ಫ್ಯಾಕ್ಟರಿಯಲ್ಲಿ ಬೆಂಕಿಹೊತ್ತಿಕೊಂಡ ಸಮಯದಲ್ಲಿ ಫ್ಯಾಕ್ಟರಿಯ ಬಾಗಿಲು ಕ್ಲೋಸ್ ಆಗಿತ್ತು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಪೊಲೀಸ್ ಮುಖ್ಯಸ್ಥರೊಬ್ಬರು ಘಟನೆಯನ್ನ ಉದ್ದೇಶಪೂರ್ವಕ ಕೊಲೆ ಎಂದು ಕರೆದಿದ್ದಾರೆ. ಬೆಂಕಿನಂದಿಸಲು ಸ್ಥಳ್ಕೆ ಬಂದಿದ್ದ ಸಿಬ್ಬಂದಿಯೂ ಸಹ ಫ್ಯಾಕ್ಟರಿಯ ಬೇಸ್​ಮೆಂಟ್​ನ ಬಾಗಿಲು ಕ್ಲೋಸ್ ಆಗಿತ್ತು.. ಬೇಸ್​ಮೆಂಟ್​ನಲ್ಲಿ ಅಪಾಯಕಾರಿ ರಾಸಾಯನಿಕಗಳು ಇದ್ದವು ಎಂದು ಹೇಳಿದ್ದಾರೆ.

ಘಟನೆ ರೂಪ್​ಗಂಜ್​ ನಲ್ಲಿ ನಡೆದಿದ್ದು ಸ್ಥಳೀಯ ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಘಟನೆಯಲ್ಲಿ ಕೆಲವು ನಾಪತ್ತೆಯಾಗಿದ್ದು ಈವರೆಗೂ ಪತ್ತೆಯಾಗಿಲ್ಲವಂತೆ.

The post ಬಾಂಗ್ಲಾ ಬೆಂಕಿ ಅವಘಡದಲ್ಲಿ 52 ಮಂದಿ ಸಾವು; ಫ್ಯಾಕ್ಟರಿಯ ಮಾಲೀಕ.. 4 ಮಕ್ಕಳು ಅರೆಸ್ಟ್ appeared first on News First Kannada.

Source: newsfirstlive.com

Source link