‘ಭಜರಂಗಿ’ ಮಾತಿನ ಭಜನೆಯಲ್ಲಿ ಕರುನಾಡ ಚಕ್ರವರ್ತಿ.. ರಿಲೀಸ್ ಯಾವಾಗ..?

‘ಭಜರಂಗಿ’ ಮಾತಿನ ಭಜನೆಯಲ್ಲಿ ಕರುನಾಡ ಚಕ್ರವರ್ತಿ.. ರಿಲೀಸ್ ಯಾವಾಗ..?

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಎ.ಹರ್ಷ ಕಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಭಜರಂಗಿ-2. ಲಾಕ್ ಡೌನ್ ಆಗದೆ ಇದ್ದಿದ್ರೇ ಇಷ್ಟೊತ್ತಿಗಾಗಲೇ ಎರಡನೇ ಭಜರಂಗಿ ಸಿನಿಮಾ ಪ್ರೇಕ್ಷಕರ ಮನೆ-ಮನ ತಲುಪಿ ಆಗಿರುತ್ತಿತ್ತು. ಆದ್ರೆ ಲಾಕ್ ಡೌನ್ ಆದ ಕಾರಣ ಭಜರಂಗಿ ಎಡಿಟಿಂಗ್ ಟೇಬಲ್​​ನಲ್ಲೇ ಬೆಚ್ಚಗೆ ಕುಳಿತು ಬಿಟ್ಟಿತ್ತು. ಆದರೆ ಈಗ ಎರಡನೇ ಭಜರಂಗಿಗೆ ಹೊಸ ಎನರ್ಜಿ ಬಂದಿದೆ. ಇದಕ್ಕೆ ಕಾರಣ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್.

blank

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಭಜರಂಗಿ-2 ಸಿನಿಮಾ ಪಾತ್ರಕ್ಕಾಗಿ ಡಬ್ಬಿಂಗ್ ಶುರುಮಾಡಿದ್ದಾರೆ. ಬೆಂಗಳೂರಿನ ಚಾಮರಾಜ ಪೇಟೆಯ ವಿಜಯ ಸ್ಟುಡಿಯೋದಲ್ಲಿ ಸದ್ದಿಲ್ಲದೆ ಭಜರಂಗಿ ಟು ಚಿತ್ರದ ಡಬ್ಬಿಂಗ್ ಕಾರ್ಯಗಳು ನೆರವೇರುತ್ತಿದೆ.

blank

ಭಜರಂಗಿ-2 ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಮ್ಯಾಜಿಕಲ್​ ಕಂಪೋಸರ್​​ ಅರ್ಜುನ್ ಜನ್ಯ ಸಾರಥ್ಯದಲ್ಲಿ ಡಿಟಿಎಸ್, ರಿರೆಕಾರ್ಡಿಂಗ್ ಕಂಪ್ಲೀಟ್ ಆಗಿದೆ. ಹಾಗಾದ್ರೆ ಯಾವಾಗ ಎರಡನೇ ಭಜರಂಗಿಯ ದರ್ಶನ ಅನ್ನೋ ಪ್ರಶ್ನೆಗೆ ಉತ್ತರ ಆಗಸ್ಟ್ ತಿಂಗಳು.

blank

ಶೇ.100 ರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕರೆ ಆಗಸ್ಟ್ ತಿಂಗಳನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಹನುಮ ಭಕ್ತ ನಿರ್ದೇಶಕ ಎ.ಹರ್ಷ ಮಾಹಿತಿ ಕೊಟ್ಟಿದ್ದಾರೆ. ಶಿವಣ್ಣ, ಭಾವನ, ಶೃತಿ, ಲೋಕಿ ಮುಂತಾದ ಪ್ರತಿಭವಂತ ಕಲಾವಿದರುಳ್ಳ ಭಜರಂಗಿ-2 ಟೀಸರ್​​ ಈಗಾಗಲೇ ನೋಡುಗರನ್ನ ಇಂಪ್ರೆಸ್​ ಮಾಡಿದೆ. ಇನೇನಿದ್ರು ಸಿನಿಮಾ ರಿಲೀಸ್ ಆಗಬೇಕು ಜನಮನ ನೋಡಿ ಮೆಚ್ಚಿಕೊಳ್ಳೊದೊಂದೇ ಬಾಕಿ.

blank

The post ‘ಭಜರಂಗಿ’ ಮಾತಿನ ಭಜನೆಯಲ್ಲಿ ಕರುನಾಡ ಚಕ್ರವರ್ತಿ.. ರಿಲೀಸ್ ಯಾವಾಗ..? appeared first on News First Kannada.

Source: newsfirstlive.com

Source link