ಕ್ರೈಂ ಕಂಟ್ರೋಲ್​ಗೆ ‘ಪೊಲೀಸ್​ ಆ್ಯಪ್’​; ಪ್ರತಿ ಬಾಡಿಗೆದಾರನ ಮಾಹಿತಿಯೂ ಇದರಲ್ಲಿ ಇರ್ಲೇಬೇಕು

ಕ್ರೈಂ ಕಂಟ್ರೋಲ್​ಗೆ ‘ಪೊಲೀಸ್​ ಆ್ಯಪ್’​; ಪ್ರತಿ ಬಾಡಿಗೆದಾರನ ಮಾಹಿತಿಯೂ ಇದರಲ್ಲಿ ಇರ್ಲೇಬೇಕು

ಬೆಂಗಳೂರು: ನೀವು ಬಾಡಿಗೆಗೆ ಮನೆ ಕೊಟ್ಟಿದ್ದಿರಾ? ಅಥವಾ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದೀರಾ.. ಹಾಗಾದರೆ ಈ ಸ್ಟೋರಿಯನ್ನ ಮಿಸ್​ ಮಾಡದೇ ನೋಡಿ. ರಾಜ್ಯದಲ್ಲಿ ಲಾಕ್​ಡೌನ್​ ಸಡಿಲವಾದಂತೆ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತಾನೇ ಇವೆ.. ಈ ಹಿನ್ನೆಲೆ ಕ್ರೈಂ ಕಂಟ್ರೋಲ್​ ಮಾಡೋಕೆ ಬೆಂಗಳೂರು ಪೊಲೀಸರು ವಿನೂತನವಾದ ಐಡಿಯಾವೊಂದನ್ನ ಮಾಡಿದ್ದಾರೆ.

ಬಹುತೇಕ ಅಪರಾಧ ಕೃತ್ಯಗಳಲ್ಲಿ ಹೊರ ರಾಜ್ಯದವರೇ ಭಾಗಿಯಾಗುತ್ತಿದ್ದಾರೆ. ಹೊರ ರಾಜ್ಯದಿಂದ ಬಂದು ಇಲ್ಲಿ ಬಾಡಿಗೆ ಇದ್ದುಕೊಂಡು ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ ಎನ್ನಲಾಗಿದೆ. ಇದನ್ನ ಸಂಪೂರ್ಣವಾಗಿ ನಿಯಂತ್ರಣದಲ್ಲಿಡಲು ಬೆಂಗಳೂರು ಪೊಲೀಸರು ಕೆಲವು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದ್ದಾರೆ.

ಹೌದು ತಂತ್ರಜ್ಞಾನ ಬಳಸಿಕೊಂಡು ಅಪರಾಧ ನಿಯಂತ್ರಣಕ್ಕೆ ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ ‘ಪೊಲೀಸ್​ ಌಪ್’ ಹೆಸರಿನ ಌಪ್ ಒಂದನ್ನು ಪರಿಚಯಿಸುತ್ತಿದ್ದು ಇದರಲ್ಲಿ ಬಾಡಿಗೆದಾರರ ವಿವರವನ್ನು ಅವರ ಆಧಾರ್​ ನಂಬರ್​ ಸಹಿತ ನಮೂದಿಸುವುದು ಕಡ್ಡಾಯ ಎಂದು ಹೇಳಲಾಗ್ತಿದೆ.

ಬಾಡಿಗೆ ಮನೆ ಮಾಲೀಕರು ತಮ್ಮ ಮನೆಯನ್ನು ಬಾಡಿಗೆ ನೀಡುವಾಗ ಬಾಡಿಗೆ ಪಡೆದವರ ಮಾಹಿತಿಯನ್ನು ಕಡ್ಡಾಯವಾಗಿ ಈ ಌಪ್​ನಲ್ಲಿ ನಮೂದಿಸಬೇಕು ಇಲ್ಲವಾದಲ್ಲಿ ಮುಂದೆ ಬಾಡಿಗೆದಾರರಿಂದಾಗುವ ಎಲ್ಲ ಅನಾಹುತಗಳಿಗೆ ಮಾಲೀಕರೇ ಹೊಣೆಯೆಂದು ಎಚ್ಚರಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಌಪ್​ ರಾಜಧಾನಿ ಜನರಿಗೆ ಲಭ್ಯವಾಗಲಿದ್ದು ಇನ್ನಾದರೂ ಅಪರಾಧ ಪ್ರಕರಣಗಳು ಕಡಿಮೆ ಆಗ್ತಾವಾ ಎಂದು ಕಾಯ್ದು ನೋಡಬೇಕಷ್ಟೇ..

The post ಕ್ರೈಂ ಕಂಟ್ರೋಲ್​ಗೆ ‘ಪೊಲೀಸ್​ ಆ್ಯಪ್’​; ಪ್ರತಿ ಬಾಡಿಗೆದಾರನ ಮಾಹಿತಿಯೂ ಇದರಲ್ಲಿ ಇರ್ಲೇಬೇಕು appeared first on News First Kannada.

Source: newsfirstlive.com

Source link