‘ಮೂರೇ ಮೂರು ಪೆಗ್ಗಿಗೆ’ ಸಾಂಗ್​ಗೆ ಕುಣಿದು ಕುಪ್ಪಳಿಸಿದ ಶಾಸಕ ರೇಣುಕಾಚಾರ್ಯ

‘ಮೂರೇ ಮೂರು ಪೆಗ್ಗಿಗೆ’ ಸಾಂಗ್​ಗೆ ಕುಣಿದು ಕುಪ್ಪಳಿಸಿದ ಶಾಸಕ ರೇಣುಕಾಚಾರ್ಯ

ದಾವಣಗೆರೆ: ಮಾರಕ ಕೊರೊನಾ ವೈರಸ್​ನಿಂದ ಸಂಕಷ್ಟಕ್ಕೀಡಾದ ಕ್ಷೇತ್ರದ ಜನರಿಗೆ ತನ್ನ ಕೈಲಾದ ಸಹಾಯ ಮಾಡುತ್ತಾ ಮಾನವೀಯತೆ ಮೆರೆಯುತ್ತಿರುವ ಹೊನ್ನಾಳಿ ಶಾಸಕ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮತ್ತ್ತೊಮ್ಮೆ ಸುದ್ದಿಯಾಗಿದ್ದಾರೆ. ಕೋವಿಡ್-19 ಕೇರ್ ಸೆಂಟರ್​ನಲ್ಲಿ ಸೋಂಕಿತ ಯುವತಿಯ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ರೇಣುಕಾಚಾರ್ಯರು ಇತರ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.

ಹೌದು, ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್-19 ಕೇರ್ ಸೆಂಟರ್​​​ನಲ್ಲಿ ನರ್ಮದಾ ಎಂಬ ಯುವತಿಯ ಹುಟ್ಟುಹಬ್ಬವನ್ನ ರೇಣುಕಾಚಾರ್ಯ ಅದ್ದೂರಿಯಾಗಿ ಆಚರಿಸಿದ್ದಾರೆ. ಜೊತೆಗೆ ಕೇಕ್ ಕತ್ತರಿಸಿ ಬರ್ತ್​ಡೇ ಸೆಲಬ್ರೇಟ್ ಮಾಡಿದ ಯುವತಿಯೊಂದಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಮೂರೇ ಮೂರು ಪೆಗ್ಗಿಗೆ ಸಾಂಗ್​ಗೆ ಕುಣಿದು ಕುಪ್ಪಳಿಸಿದ್ದಾರೆ.

ಇನ್ನು, ಈ ಮುನ್ನ ಶಾಸಕ ರೇಣುಕಾಚಾರ್ಯರು ಬಿಜೆಪಿ ಕಾರ್ಯಕರ್ತರೊಬ್ಬರ ರಾಯಲ್ ಎನ್​ಫೀಲ್ಡ್​ ಬೈಕ್ ಓಡಿಸಿ ಖುಷಿಪಟ್ಟಿದ್ದರು. ಇವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೀಗ ರೋಗಿಯ ಬರ್ತ್​ ಡೇ ಆಚರಣೆ ವೇಳೆ ಸ್ಟೆಪ್ ಹಾಕಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

The post ‘ಮೂರೇ ಮೂರು ಪೆಗ್ಗಿಗೆ’ ಸಾಂಗ್​ಗೆ ಕುಣಿದು ಕುಪ್ಪಳಿಸಿದ ಶಾಸಕ ರೇಣುಕಾಚಾರ್ಯ appeared first on News First Kannada.

Source: newsfirstlive.com

Source link