ಸುಮಲತಾ-ಹೆಚ್​ಡಿಕೆ ವಾಕ್​​ಸಮರ; ನಾಳೆ ಅಂಬರೀಶ್​ ಅಭಿಮಾನಿಗಳಿಂದ ಶಾಂತಿಯುತ ಪ್ರತಿಭಟನೆ

ಸುಮಲತಾ-ಹೆಚ್​ಡಿಕೆ ವಾಕ್​​ಸಮರ; ನಾಳೆ ಅಂಬರೀಶ್​ ಅಭಿಮಾನಿಗಳಿಂದ ಶಾಂತಿಯುತ ಪ್ರತಿಭಟನೆ

ಬೆಂಗಳೂರು: ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ನಡುವಿನ ವಾಕ್​ಸಮರ ತಾರಕಕ್ಕೇರಿರೋ ಹಿನ್ನೆಲೆ, ಅಂಬರೀಶ್ ಅವರ ಅಭಿಮಾನಿಗಳು ನಾಳೆ ಪ್ರತಿಭಟನೆಗೆ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ನಾಳೆ ಬೆಳಿಗ್ಗೆ 11.30ರ ಸುಮಾರಿಗೆ ಕಂಠೀರವ ಸ್ಟುಡಿಯೋದ ಸಮಾಧಿ ಬಳಿ ಅಭಿಮಾನಿಗಳು ಸೇರಲಿದ್ದು. ಶಾಂತಿಯುತ ಪ್ರತಿಭಟನೆ ಮಾಡಿ ಕುಮಾರಸ್ವಾಮಿಯವರಿಗೆ ಕೆಲ ಪ್ರಶ್ನೆ ಕೇಳೋಕೆ ನಿರ್ಧರಿಸಿದ್ದಾರಂತೆ. ಕೊರೊನಾ ಹಿನ್ನಲೆ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಪ್ರತಿಭಟನೆಗೆ ಅವಕಾಶ ಸಿಗದ ಹಿನ್ನೆಲೆ ಕಂಠೀರವ ಸ್ಟೂಡಿಯೋದಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

The post ಸುಮಲತಾ-ಹೆಚ್​ಡಿಕೆ ವಾಕ್​​ಸಮರ; ನಾಳೆ ಅಂಬರೀಶ್​ ಅಭಿಮಾನಿಗಳಿಂದ ಶಾಂತಿಯುತ ಪ್ರತಿಭಟನೆ appeared first on News First Kannada.

Source: newsfirstlive.com

Source link