ಮೊಗ್ಗಿನ ಮನಸು ಖ್ಯಾತಿಯ ಶಶಾಂಕ್ ಹೊಸ ಚಿತ್ರ; ಟೈಟಲ್​​ನಿಂದ ಗಮನ ಸೆಳೆದ ‘ಲವ್ 360’

ಮೊಗ್ಗಿನ ಮನಸು ಖ್ಯಾತಿಯ ಶಶಾಂಕ್ ಹೊಸ ಚಿತ್ರ; ಟೈಟಲ್​​ನಿಂದ ಗಮನ ಸೆಳೆದ ‘ಲವ್ 360’

ಫ್ರೆಷ್​​ ಲವ್ ಸ್ಟೋರಿಯನ್ನ ಕನ್ನಡ ಸಿನಿ ಪ್ರೇಕ್ಷಕರಿಗೆ ನೀಡೋದ್ರಲ್ಲಿ ಮೊಗ್ಗಿನ ಮನಸು ಖ್ಯಾತಿಯ ಶಶಾಂಕ್ ಸಿದ್ಧಹಸ್ತರು. ತಾಯಿಗೆ ತಕ್ಕ ಮಗ ಸಿನಿಮಾದ ನಂತರ ಶಶಾಂಕ್ ಸಂಪೂರ್ಣ ಹೊಸಬರ ಚಿತ್ರಕ್ಕೆ ಮುಂದಾಗಿದ್ದಾರೆ. ಆ ಚಿತ್ರದ ಹೆಸರು ಮತ್ತು ಕಲ್ಪನೆ ವಿಭಿನ್ನವಾಗಿದೆ.
‘ಮೊಗ್ಗಿನ ಮನಸು’ ಖ್ಯಾತಿಯ ನಿರ್ದೇಶಕ ಶಶಾಂಕ್ ಅವರ ಹೆಸರನ್ನ ಸಿನಿಮಾರಂಗದ ಬೇರೆ ಬೇರೆ ವಿಭಾಗಗಳಲ್ಲಿ ಕೇಳ್ತಿದ್ವಿ. ಆದ್ರೆ ಯಾವಾಗ ಶಶಾಂಕ್ ಡೈರೆಕ್ಷನ್ ಅನ್ನೋದೇ ಕನ್ಫರ್ಮ್​ ಆಗ್ತಿರಲಿಲ್ಲ. ಈಗ ಶಶಾಂಕ್ ದಿಗ್ಧರ್ಶನ ಯಾವಾಗ ಮತ್ತು ಯಾರಿಗೆ ಅನ್ನೋದು ಅಧಿಕೃತವಾಗಿದೆ. ಶಶಾಂಕ್ ಸಂಪೂರ್ಣ ಹೊಸಬರ ತಂಡ ಕಟ್ಕೊಂಡು ಲವ್ 360 ಎನ್ನುತ್ತಿದ್ದಾರೆ.

blank

 

ಯಾವಾಗ ಮತ್ತೆ ಶಶಾಂಕ್ ಡೈರೆಕ್ಷನ್ ಅನ್ನೋ ಗುಟ್ಟನ್ನ ಸ್ವತಃ ಶಶಾಂಕ್ ಅವರೇ ರಟ್ಟು ಮಾಡಿದ್ದಾರೆ. ಮತ್ತೊಮ್ಮೆ ಹೊಸಬರ ಹೊಸ ಲವ್ ಸ್ಟೋರಿಯನ್ನ ತೆರೆಯ ಮೇಲೆ ತಂದು ಗೆಲ್ಲುವ ತವಕದಲ್ಲಿದ್ದಾರೆ. 12 ವರ್ಷದ ಹಿಂದೆ ಹೊಸ ಹೊಸ ಪ್ರತಿಭೆಗಳಾಗಿದ್ದ ಯಶ್, ರಾಧಿಕಾ ಪಂಡಿತ್, ಶುಭಪುಂಜಾರನ್ನ ‘ಮೊಗ್ಗಿನ ಮನಸು’ ಸಿನಿಮಾದಲ್ಲಿ ಬೆರೆಸಿ ಗೆದ್ದಿದ್ದರು ಶಶಾಂಕ್​. ಈಗ ಮತ್ತೆ ಹೊಸಬರ ಹೊಸ ಪ್ರೇಮ ಕಾವ್ಯಕ್ಕೆ ಸಜ್ಜಾಗಿದ್ದಾರೆ ಆ ಹೊಸ ಚಿತ್ರಕ್ಕೆ ಲವ್ 360 ಎಂದು ನಾಮಕರಣ ಮಾಡಿದ್ದಾರೆ.

 

“ಶಶಾಂಕ್ ಸಿನೆಮಾಸ್” ಸಂಸ್ಥೆಯಡಿ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗಲಿರುವ ಈ ಲವ್ 360 ಚಿತ್ರದ ಮೂಲಕ ಪ್ರವೀಣ್ ಎಂಬ ಹೊಸ ನಾಯಕನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ವೈದ್ಯಕೀಯ ಪದವೀಧರರಾಗಿರೋ ಪ್ರವೀಣ್, ಶಶಾಂಕ್ ಕಲ್ಪನೆಯ ಹೊಸ ಹೀರೋ. ಇದೊಂದು ರೊಮ್ಯಾಟಿಕ್ ಪ್ರೇಮಕಾವ್ಯವಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಶೇಷತೆಗಳಿಂದ ಸೌಂಡ್ ಮಾಡಲಿದೆ.

blank

The post ಮೊಗ್ಗಿನ ಮನಸು ಖ್ಯಾತಿಯ ಶಶಾಂಕ್ ಹೊಸ ಚಿತ್ರ; ಟೈಟಲ್​​ನಿಂದ ಗಮನ ಸೆಳೆದ ‘ಲವ್ 360’ appeared first on News First Kannada.

Source: newsfirstlive.com

Source link