ವಿಭಿನ್ನ ಪ್ರತಿಭಟನೆ ಮಾಡಲು ಮುಂದಾದ ಕೈ ನಾಯಕರು; ಮುರಿದೇಹೋಯ್ತು ಎತ್ತಿನಗಾಡಿ

ವಿಭಿನ್ನ ಪ್ರತಿಭಟನೆ ಮಾಡಲು ಮುಂದಾದ ಕೈ ನಾಯಕರು; ಮುರಿದೇಹೋಯ್ತು ಎತ್ತಿನಗಾಡಿ

ಮುಂಬೈ: ತೈಲ ಮತ್ತು ಅಡುಗೆ ಅನಿಲ ದರ ಏರಿಕೆ ಖಂಡಿಸಿ ಎತ್ತಿನಗಾಡಿ ಮೇಲೆ ನಿಂತು ಪ್ರತಿಭಟಿಸುತ್ತಿದ್ದ ಮಹಾರಾಷ್ಟ್ರ ಕಾಂಗ್ರೆಸ್ಸಿಗರಿಗೆ  ಇರುಸು ಮುರುಸುಂಟಾದ ಪ್ರಸಂಗವೊಂದು ನಡೆದಿದೆ. ಇಂದು ಮುಂಬೈನಲ್ಲಿ ಮಹಾರಾಷ್ಟ್ರ ಕಾಂಗ್ರೆಸ್​ ನಾಯಕ ಜಾಗ್​​ತಪ್​​ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಎತ್ತಿನಗಾಡಿ ಮುರಿದು ಬಿದ್ದಿದೆ. ಇದರ ಪರಿಣಾಮ ಎತ್ತಿನಗಾಡಿ ಮೇಲಿದ್ದ ಜಾಗ್​​ತಪ್​ ಸೇರಿದಂತೆ ಎಲ್ಲಾ ಕಾಂಗ್ರೆಸ್​ ನಾಯಕರು ಕುಸಿದು ಬಿದ್ದಿದ್ದಾರೆ.

ಇನ್ನು, ಪ್ರತಿಭಟನೆ ವೇಳೆ ಮುರಿದ ಎತ್ತಿನಗಾಡಿಯಿಂದ ಕುಸಿದು ಬಿದ್ದ ಕಾಂಗ್ರೆಸ್​ ನಾಯಕರ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಕಾಂಗ್ರೆಸ್ಸಿಗರು ಮಾಡಿದ ವಿನೂತನ ಪ್ರತಿಭಟನೆಗಿಂತಲೂ ಇವರ ಎತ್ತಿನಗಾಡಿ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಕಾಂಗ್ರೆಸ್​ ಮೂರು ದಿನಗಳಿಂದ ಪೆಟ್ರೋಲ್​​ ಡೀಸೆಲ್​​ ಬೆಲೆಯೇರಿಕೆ ವಿರುದ್ಧ ಇಡೀ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಇದರ ಭಾಗವಾಗಿಯೇ ಎರಡು ದಿನಗಳ ಹಿಂದೆ 7ನೇ ತಾರೀಕಿನಿಂದು ದೇಶದ ವಿವಿಧೆಡೆ ಸಾಂಕೇತಿಕ ಪ್ರತಿಭಟನೆಗಳು ಶುರುವಾದವು. ಈ ಪ್ರತಿಭಟನೆಗಳು ಜು.17ರ ತನಕ ನಡೆಯಲಿವೆ ಎನ್ನಲಾಗಿದೆ.

ಇಂದು ಮುಂಬೈ ಕಾಂಗ್ರೆಸ್​ ಕಾರ್ಯಕರ್ತರು ಎತ್ತಿನಗಾಡಿಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ತಲೆಯ ಮೇಲೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜನ ವಿರೋಧಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಮಾಡಿವೆ. ಇದರಿಂದ ಜನರ ಮೇಲೆ ಆರ್ಥಿಕ ಪರಿಣಾಮ ಬೀರುತ್ತದೆ. ಈ ಕೂಡಲೇ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ

The post ವಿಭಿನ್ನ ಪ್ರತಿಭಟನೆ ಮಾಡಲು ಮುಂದಾದ ಕೈ ನಾಯಕರು; ಮುರಿದೇಹೋಯ್ತು ಎತ್ತಿನಗಾಡಿ appeared first on News First Kannada.

Source: newsfirstlive.com

Source link