ಕುಡಿದು ಡ್ರೈವ್ ಮಾಡಿ ಆ್ಯಕ್ಸಿಡೆಂಟ್; ಗುದ್ದಿದ ಸ್ಪೀಡ್​ಗೆ ಕಾರ್​​ನ ಚಕ್ರವೇ ಕಟ್

ಕುಡಿದು ಡ್ರೈವ್ ಮಾಡಿ ಆ್ಯಕ್ಸಿಡೆಂಟ್; ಗುದ್ದಿದ ಸ್ಪೀಡ್​ಗೆ ಕಾರ್​​ನ ಚಕ್ರವೇ ಕಟ್

ಬೆಂಗಳೂರು: ಬೆಂಗಳೂರಿನಲ್ಲಿ ವ್ಯಕ್ತಿಯೋರ್ವ ಮದ್ಯಪಾನ ಮಾಡಿ ಅತೀ ವೇಗವಾಗಿ ಕಾರ್ ಚಾಲನೆ ಮಾಡಿದ ಪರಿಣಾಮ ಲ್ಯಾವೆಲ್ಲಿ ರಸ್ತೆಯಲ್ಲಿ ಕಾರ್​​ ಕಂಬಕ್ಕೆ ಡಿಕ್ಕಿಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರ್​​ನ ಒಂದು ಚಕ್ರವೇ ಕಿತ್ತುಬಂದಿದೆ.

ಕಾರ್​ ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಬ್ಬನ್ ಪಾರ್ಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಡಿಕ್ಕಿಹೊಡೆದ ರಭಸಕ್ಕೆ ವಿದ್ಯುತ್ ಕಂಬವೂ ಮುರಿದಿದೆ ಎನ್ನಲಾಗಿದೆ.

blank

 

The post ಕುಡಿದು ಡ್ರೈವ್ ಮಾಡಿ ಆ್ಯಕ್ಸಿಡೆಂಟ್; ಗುದ್ದಿದ ಸ್ಪೀಡ್​ಗೆ ಕಾರ್​​ನ ಚಕ್ರವೇ ಕಟ್ appeared first on News First Kannada.

Source: newsfirstlive.com

Source link