ಮದುವೆ ನಿರಾಕರಿಸಿದ್ದಕ್ಕೆ ಅಣ್ಣನಿಂದ ತಂಗಿಯ ಕೊಲೆ

ರಾಯಚೂರು: ನಿಶ್ಚಿತಾರ್ಥವಾಗಿದ್ದ ಹುಡುಗ ಕಪ್ಪು ಎಂಬ ಕಾರಣ ಹೇಳಿ ಮದುವೆ ನಿರಾಕರಿಸಿದ್ದಕ್ಕೆ ತಂಗಿಯನ್ನೇ ಅಣ್ಣ ಕೊಚ್ಚಿಕೊಲೆ ಮಾಡಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.

ಚಂದ್ರಕಲಾ (22) ಕೊಲೆಯಾದ ಯುವತಿ. ಜುಲೈ 13 ರಂದು ಮದುವೆಗೆ ದಿನಾಂಕ ನಿಗದಿಯಾಗಿತ್ತು. ಮನೆಯವರು ಮದುವೆಗೆ ಲಗ್ನ ಪತ್ರಿಕೆ ಸಹ ಹಂಚಿಕೆ ಮಾಡಿದ್ದರು. ಬಳಿಕ ಚಂದ್ರಕಲಾ ಏಕಾಏಕಿ ಮದುವೆಯಾಗುವ ಹುಡುಗ ಕಪ್ಪು ಎಂದು ಕಾರಣ ಹೇಳಿ ಮದುವೆಯನ್ನು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಅಣ್ಣ ಶ್ಯಾಮಸುಂದರ ತಂಗಿಯನ್ನು ಕೊಲೆ ಮಾಡಿದ್ದಾನೆ.  ಇದನ್ನೂ ಓದಿ: ರಾಯಚೂರಿನಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ – ಜೋಡಿ ಎತ್ತುಗಳಿಗೆ ಫುಲ್ ಡಿಮ್ಯಾಂಡ್

ಚಂದ್ರಕಲಾ ಮದುವೆ ಬೇಡ ಎಂದು ಮನೆಯವರಿಗೆ ತಿಳಿಸುತ್ತಿದ್ದಂತೆ ಮನೆಯಲ್ಲಿದ್ದ ಕೊಡಲಿಯಿಂದ ಕೊಚ್ಚಿ ಶ್ಯಾಮಸುಂದರ ಕೊಲೆಗೈದಿದ್ದಾನೆ. ಆರೋಪಿ ಶ್ಯಾಮಸುಂದರನನ್ನು ಗಬ್ಬೂರು ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಮದುವೆ ನಿರಾಕರಿಸಿದ್ದಕ್ಕೆ ಅಣ್ಣನಿಂದ ತಂಗಿಯ ಕೊಲೆ appeared first on Public TV.

Source: publictv.in

Source link