ಇಂದಿನಿಂದ ಉಡುಪಿ ಕೃಷ್ಣನ ದರ್ಶನಕ್ಕೆ ಅವಕಾಶ.. ತೀರ್ಥ-ಪ್ರಸಾದ ಸೇವೆ ಇಲ್ಲ

ಇಂದಿನಿಂದ ಉಡುಪಿ ಕೃಷ್ಣನ ದರ್ಶನಕ್ಕೆ ಅವಕಾಶ.. ತೀರ್ಥ-ಪ್ರಸಾದ ಸೇವೆ ಇಲ್ಲ

ಉಡುಪಿ: ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇಳಿಕೆಯಾದ ಹಿನ್ನೆಲೆ ಲಾಕ್​ಡೌನ್​ನಲ್ಲಿ ಮತ್ತೊಂದು ಹಂತದ ಸಡಿಲಿಕೆಗಳನ್ನು ಮಾಡಲಾಗಿದ್ದು ದೇವಸ್ಥಾನಗಳನ್ನ ತೆರೆಯಲು ಅವಕಾಶ ‌ನೀಡಲಾಗಿದೆ. ಈ ಹಿನ್ನೆಲೆ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಇಂದಿನಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸರ್ಕಾರ ದೇವಸ್ಥಾನಗಳನ್ನ ತೆರೆಯಲು ಅವಕಾಶ ನೀಡಿದ್ದರೂ ದೇವರ ದರ್ಶನವನ್ನ ಮಠದ ಆಡಳಿತ ಮಂಡಳಿ ಒಂದು ವಾರ ಮುಂದೂಡಿತ್ತು. ಪರ್ಯಾಯ ಶ್ರೀಗಳ‌ ಆದೇಶದಂತೆ ಇದೀಗ ಇಂದಿನಿಂದ ಕೃಷ್ಣನ‌ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಧ್ಯಾಹ್ನ  2 ಗಂಟೆಯಿಂದ ಸಂಜೆ 6ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಾಸ್ಕ್ ಹಾಗೂ ಸಾಮಾಜಿಕ‌ ಅಂತರವನ್ನ ಕಡ್ಡಾಯ ಮಾಡಲಾಗಿದೆ. ಅಲ್ಲದೇ ಕೃಷ್ಣನ ದರ್ಶನ ಪಡೆಯಲು ಮಾತ್ರ ಅವಕಾಶವಿದೆ ಎಂದು ಪರ್ಯಾಯ ಶ್ರೀಗಳು ಸೂಚಿಸಿದ್ದಾರೆ. ಭಕ್ತರಿಗೆ ಯಾವುದೇ ತೀರ್ಥ- ಪ್ರಸಾದ ಇರುವುದಿಲ್ಲ.

The post ಇಂದಿನಿಂದ ಉಡುಪಿ ಕೃಷ್ಣನ ದರ್ಶನಕ್ಕೆ ಅವಕಾಶ.. ತೀರ್ಥ-ಪ್ರಸಾದ ಸೇವೆ ಇಲ್ಲ appeared first on News First Kannada.

Source: newsfirstlive.com

Source link