ಕೂಲಿ ಕಾರ್ಮಿಕರಿಗೆ ಆಸರೆಯಾದ ಒಡಿಶಾ ಸರ್ಕಾರ; ₹352 ಕೋಟಿ ‘ವಿಶೇಷ ಪ್ಯಾಕೇಜ್’ ಘೋಷಣೆ

ಕೂಲಿ ಕಾರ್ಮಿಕರಿಗೆ ಆಸರೆಯಾದ ಒಡಿಶಾ ಸರ್ಕಾರ; ₹352 ಕೋಟಿ ‘ವಿಶೇಷ ಪ್ಯಾಕೇಜ್’ ಘೋಷಣೆ

ನವದೆಹಲಿ: ಸಿಎಂ ನವಿನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರ್ಕಾರ ತನ್ನ ರಾಜ್ಯದ ಕಾರ್ಮಿಕರಿಗಾಗಿ ಕೋವಿಡ್-19 ವಿಶೇಷ ಪ್ಯಾಕೇಜ್ ಘೋಷಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗಾಗಿ 352 ಕೋಟಿ ರೂ. ಘೋಷಣೆ ಮಾಡಿದೆ.

ಈ ಸಂಬಂಧ ಮುಖ್ಯಮಂತ್ರಿಗಳ ಕಚೇಯಿಂದ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಒಟ್ಟು 32 ಲಕ್ಷ ಬಡ ಕೂಲಿ ಕಾರ್ಮಿಕರಿಗೆ ಈ ವಿಶೇಷ ಪ್ಯಾಕೇಜ್ ಅನ್ವಯಿಸಲಿದೆ. ಇದರಿಂದ ಕಾರ್ಮಿಕರು ತಮ್ಮ ದಿನಗೂಲಿಯೊಂದಿಗೆ ಹೆಚ್ಚುವರಿಯಾಗಿ 50 ರೂಪಾಯಿಗಳನ್ನು ಲಾಭ ಪಡೆಯಲಿದ್ದಾರೆ ಎಂದು ಸರ್ಕಾರ ಹೇಳಿದೆ.

blank

ಏಪ್ರಿಲ್​​ನಿಂದ ಜೂನ್​​​ವರೆಗೂ ಕೆಲಸ ಮಾಡಿದ ಕಾರ್ಮಿಕರಿಗೆ ವೇತನದೊಂದಿಗೆ ಹೆಚ್ಚುವರಿ 50 ರೂಪಾಯಿ ನೀಡಲಾಗುವುದು. ಇದು ಕಾರ್ಮಿಕರ ನೇರ ಖಾತೆಗೆ ಹೋಗುತ್ತದೆ. ನಮಗೆ ಬಡವರ ಬಗ್ಗೆ ವಿಶೇಷ ಕಾಳಜಿ ಇರುವುದರಿಂದಲೇ ಈ ಪ್ಯಾಕೇಜ್ ಘೋಷಿಸಿದ್ದೇವೆ ಎಂದಿದ್ದಾರೆ ಸಿಎಂ ನವೀನ್ ಪಟ್ನಾಯಕ್.

ಇನ್ನು, ಕಾರ್ಮಿಕರಿಗಾಗಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಪ್ರಾರಂಭಿಸಿದೆ. ಇದುವರೆಗೂ ಲಕ್ಷಾಂತರ ಜನರಿಗೆ ಸರ್ಕಾರಿ ಕೆಲಸಗಳನ್ನು ಸೃಷ್ಟಿಸಿದ್ದೇವೆ. ಗ್ರಾಮೀಣ ಭಾಗದವರಿಗೆ ಆರ್ಥಿಕ ಉತ್ತೇಜನೆ ನೀಡುವುದು ನಮ್ಮ ಮುಖ್ಯ ಉದ್ದೇಶ.

ಇದನ್ನೂ ಓದಿ: ಅಯ್ಯಪ್ಪ ಭಕ್ತರಿಗೆ ಸಿಹಿಸುದ್ದಿ: ಜುಲೈ 17 ರಿಂದ ಶಬರಿಮಲೆ ಓಪನ್.. ಕಂಡೀಷನ್ಸ್ ಅಪ್ಲೈ

The post ಕೂಲಿ ಕಾರ್ಮಿಕರಿಗೆ ಆಸರೆಯಾದ ಒಡಿಶಾ ಸರ್ಕಾರ; ₹352 ಕೋಟಿ ‘ವಿಶೇಷ ಪ್ಯಾಕೇಜ್’ ಘೋಷಣೆ appeared first on News First Kannada.

Source: newsfirstlive.com

Source link