ನಾಯಕತ್ವ ಬದಲಾವಣೆ ಕೂಗಿಗೆ ಆದಿತ್ಯನಾಥ್ ಡಿಚ್ಚಿ.. ಇನ್ನಷ್ಟು ಗಟ್ಟಿಯಾಯ್ತು ಯೋಗಿ ‘CM’​ ಖುರ್ಚಿ

ನಾಯಕತ್ವ ಬದಲಾವಣೆ ಕೂಗಿಗೆ ಆದಿತ್ಯನಾಥ್ ಡಿಚ್ಚಿ.. ಇನ್ನಷ್ಟು ಗಟ್ಟಿಯಾಯ್ತು ಯೋಗಿ ‘CM’​ ಖುರ್ಚಿ

ನವದೆಹಲಿ: ಉತ್ತರ ಪ್ರದೇಶದಲ್ಲಿ ನಡೆದ ಬ್ಲಾಕ್ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ. ಬರೋಬ್ಬರಿ 825 ಕ್ಷೇತ್ರಗಳ ಪೈಕಿ ಶೇಕಡಾ 85ರಷ್ಟು ಸ್ಥಾನಗಳನ್ನ ಕೇಸರಿಗಳು ಬಾಚಿಕೊಂಡಿದ್ದಾರೆ. ಈ ಮೂಲಕ ಯುಪಿಯಲ್ಲಿ ಭುಗಿಲೆದ್ದಿದ್ದ ನಾಯಕತ್ವ ಬದಲಾವಣೆ ಕೂಗಿಗೆ ಸಿಎಂ ಯೋಗಿ ಆದಿತ್ಯನಾಥ್ ಅದ್ಧೂರಿ ಜಯದ ಮೂಲಕವೇ ಸಂದೇಶ ಹೊರಡಿಸಿದ್ದಾರೆ.

blank

ಕರ್ನಾಟಕದಲ್ಲಿ ನಾಯಕತ್ವ ಬದಲಾವಣ ವಿವಾದದ ಹೊತ್ತಲ್ಲೇ ಉತ್ತರ ಪ್ರದೇಶದಲ್ಲೂ ಇದೇ ಕೂಗು ಪ್ರತಿಧ್ವನಿಸಿತ್ತು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​ ಸ್ಥಾನಕ್ಕೆ ಬೇರೆಯವನ್ನ ಕೂರಿಸಬೇಕು ಅನ್ನೋ ಮಾತುಗಳು ಅಲ್ಲಿಲ್ಲಿ ಕೇಳಿ ಬಂದಿತ್ತು. ಈ ಸಂಬಂಧ ಯುಪಿ ಬಿಜೆಪಿಯಲ್ಲಿ ಒಳಗೊಳಗೆ ತಂತ್ರ-ಪ್ರತಿತಂತ್ರ ನಡೆಯುತ್ತಿದೆ. ಆದ್ರೆ, ಇದೇ ಹೊತ್ತಲ್ಲೇ ಯೋಗಿ ನಾಯಕತ್ವದಲ್ಲಿ ನಡೆದ ಬ್ಲಾಕ್ ಪಂಚಾಯತ್​ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ.

ಯುಪಿ ಬ್ಲಾಕ್ ಪಂಚಾಯತ್​ ಚುನಾವಣೆಯಲ್ಲಿ ಗೆದ್ದ ಕೇಸರಿ
825 ಕ್ಷೇತ್ರಗಳ ಪೈಕಿ 635 ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿಗೆ ಗೆಲುವು

2022ರ ಯುಪಿ ವಿಧಾನಸಭೆ ಚುನಾವಣೆಯ ದಿಕ್ಸೂಜಿ ಎಂದೇ ಕರೆಯಲಾಗಿದ್ದ ಬ್ಲಾಕ್ ಪಂಚಾಯತ್ ಚುನಾವಣೆಯಲ್ಲಿ ಕಮಲ ಪಾಳಯ ಭರ್ಜರಿ ಗೆಲುವು ದಾಖಲಿಸಿದೆ.. ಜಿಲ್ಲಾ ಪಂಚಾಯತ್ ಚುನಾವಣೆ ಬಳಿಕ ಕುತೂಹಲ ಕೆರಳಿಸಿದ್ದ ಬ್ಲಾಕ್​ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಮೈತ್ರಿ ಅದ್ಧೂರಿ ಜಯ ಕಂಡಿದೆ.

ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ ಸಮೀಪ ಸ್ಮಾರ್ಟ್ ಸಿಟಿ, ಟೌನ್​​ಶಿಪ್​​​ ನಿರ್ಮಾಣ -ಕೇಂದ್ರ ಸರ್ಕಾರ

ಯುಪಿಯಲ್ಲಿ ಮತ್ತೆ ಅರಳಿದ ಕಮಲ
ನಿನ್ನೆ ನಡೆದ 825 ಕ್ಷೇತ್ರಗಳ ಬ್ಲಾಕ್​ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಬರೋಬ್ಬರಿ 635 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ.. ಮತದಾನಕ್ಕೂ ಮುನ್ನವೇ 349 ಸ್ಥಾನಗಳಲ್ಲಿ ಅವಿರೋಧವಾಗಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ರು. ಉಳಿದ 476 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಳಗ ಗೆಲುವು ದಾಖಲಿಸಿದೆ. ಈ ಮೂಲಕ ಬ್ಲಾಕ್ ಪಂಚಾಯತ್ ಚುನಾವಣೆಯಲ್ಲಿ ಶೇ.85 ರಷ್ಟು ಸ್ಥಾನಗಳನ್ನ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಬಾಚಿಕೊಂಡಿವೆ.

blank

ಬ್ಲಾಕ್ ಪಂಚಾಯತ್ ಚುನಾವಣೆಯಲ್ಲಿ ಅದ್ಧೂರಿ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ಸಿಎಂ ಯೋಗಿ, ಸಬ್ಕಾ ಸಾತ್, ಸಬ್ಕಾ ವಿಕಾಸ್ ಔರ್ ಸಬ್ಕಾ ವಿಶ್ವಾಸದಿಂದ ನಾವು ಗೆದ್ದಿದ್ದೇವೆ ಅಂದ್ರು. ಇಷ್ಟೇ ಅಲ್ಲದೇ ಅಭೂತಪೂರ್ವ ಗೆಲುವು ದಾಖಲಿಸಿದ ಯೋಗಿ ಸರ್ಕಾರಕ್ಕೆ ಪ್ರಧಾನಿ ಮೋದಿ ಟ್ವೀಟ್​ ಮಾಡಿ ಶುಭಕೋರಿದ್ದಾರೆ..

ನಾಯಕತ್ವ ಬದಲಾವಣೆ ವಿವಾದಕ್ಕೆ ಸಿಎಂ ಆದಿತ್ಯನಾಥ್ ಡಿಚ್ಚಿ
ಇನ್ನಷ್ಟು ಗಟ್ಟಿಯಾಯ್ತು ಯೋಗಿ ‘ಮುಖ್ಯಮಂತ್ರಿ’​ ಖುರ್ಚಿ

ಉತ್ತರ ಪ್ರದೇಶದ ನಾಯಕತ್ವ ಬದಲಾವಣೆ ವಿವಾದಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಉತ್ತರ ಕೊಟ್ಟಿದ್ದಾರೆ.. ತಮ್ಮನ್ನ ಬದಲಾಯಿಸಬೇಕು ಎಂದು ಸಂಚು ರೂಪಿಸ್ತಿರೋ ನಾಯಕರಿಗೆ ಅಭೂತ ಪೂರ್ವ ಜಯದ ಮೂಲಕವೇ ಸಿಎಂ ಯೋಗಿ ಸಂದೇಶ ನೀಡಿದ್ದಾರೆ.. ಈ ಮೂಲಕ ತಮ್ಮ ವಿರುದ್ಧ ತಂತ್ರ- ಪ್ರತಿತಂತ್ರ ಹಾಗೂ ಷಡ್ಯಂತ್ರ ಮಾಡ್ತಿರೋ ವಿರೋಧಿಗಳಿಗೆ ಡಿಚ್ಚಿ ಹೊಡೆದಿದ್ದಾರೆ.

ಇಷ್ಟೇ ಅಲ್ಲದೇ ಮುಂದಿನ ಚುನಾವಣೆಯಲ್ಲೂ ಯೋಗಿ ನಾಯಕತ್ವದಲ್ಲೇ ಚುನಾವಣೆ ಎದುರಿಸಬೇಕು ಅನ್ನೋ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎನ್ನಲಾಗ್ತಿದೆ.. ಏನೇ ಆದ್ರೂ ಕೇಂದ್ರದಲ್ಲಿ ಮೋದಿ ಸ್ಟಾರ್ ಆದ್ರೆ ಉತ್ತರ ಪ್ರದೇಶದಲ್ಲಿ ಯೋಗಿ ಸ್ಟಾರ್ ಹಾಗೂ ಬಿಜೆಪಿ ಫೈರ್ ಬ್ರ್ಯಾಂಡ್​ ಅನ್ನೋದನ್ನ ಮತ್ತೊಮ್ಮೆ ಸಾರಿ ಹೇಳಿದ್ದಾರೆ.

ಇದನ್ನೂ ಓದಿ:  ರಾಜ್ಯಪಾಲರಾಗಿ ಗೆಹಲೋತ್​ ಇಂದು ಅಧಿಕಾರ ಸ್ವೀಕಾರ; ಅವರ ರಾಜಕೀಯ ಹಿನ್ನೆಲೆ ಇಲ್ಲಿದೆ

ಇದನ್ನೂ ಓದಿ: ಇಂದಿನಿಂದ ಉಡುಪಿ ಕೃಷ್ಣನ ದರ್ಶನಕ್ಕೆ ಅವಕಾಶ.. ತೀರ್ಥ-ಪ್ರಸಾದ ಸೇವೆ ಇಲ್ಲ

ಇದನ್ನೂ ಓದಿ: ಕೂಲಿ ಕಾರ್ಮಿಕರಿಗೆ ಆಸರೆಯಾದ ಒಡಿಶಾ ಸರ್ಕಾರ; ₹352 ಕೋಟಿ ‘ವಿಶೇಷ ಪ್ಯಾಕೇಜ್’ ಘೋಷಣೆ

ಇದನ್ನೂ ಓದಿ: ಅಯ್ಯಪ್ಪ ಭಕ್ತರಿಗೆ ಸಿಹಿಸುದ್ದಿ: ಜುಲೈ 17 ರಿಂದ ಶಬರಿಮಲೆ ಓಪನ್.. ಕಂಡೀಷನ್ಸ್ ಅಪ್ಲೈ

The post ನಾಯಕತ್ವ ಬದಲಾವಣೆ ಕೂಗಿಗೆ ಆದಿತ್ಯನಾಥ್ ಡಿಚ್ಚಿ.. ಇನ್ನಷ್ಟು ಗಟ್ಟಿಯಾಯ್ತು ಯೋಗಿ ‘CM’​ ಖುರ್ಚಿ appeared first on News First Kannada.

Source: newsfirstlive.com

Source link