ಕ್ರಿಕೆಟ್ ಲೋಕದ ಕುಚಿಕುಗಳು ಇವ್ರು.. ಧೋನಿ ಅಭಿಮಾನಿಗಳ ಹೃದಯ ಗೆದ್ದ ರೈನಾ..!

ಕ್ರಿಕೆಟ್ ಲೋಕದ ಕುಚಿಕುಗಳು ಇವ್ರು.. ಧೋನಿ ಅಭಿಮಾನಿಗಳ ಹೃದಯ ಗೆದ್ದ ರೈನಾ..!

ಎಂ.ಎಸ್​.ಧೋನಿ ಮತ್ತು ಸುರೇಶ್​ ರೈನಾರ ಗೆಳೆತನ ಎಂಥದ್ದು ಅನ್ನೋದು, ಎಲ್ಲರಿಗೂ ಗೊತ್ತಿರುವ ವಿಚಾರ. ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಧೋನಿ ನಿವೃತ್ತಿ ನೀಡಿದ ದಿನವೇ, ರೈನಾ ಕೂಡ ರಿಟೈರ್​ಮೆಂಟ್​ ಕೊಟ್ಟಿದ್ರು. ಇದೀಗ ಐಪಿಎಲ್​​​ನಲ್ಲೂ ಹಾಗೆ ಮಾಡ್ತೀನಿ ಅಂತಿದ್ದಾರೆ ರೈನಾ.!

ಇದನ್ನೂ ಓದಿ: ನಿವೃತ್ತಿ ದಿನ ನಾನು, ಧೋನಿ ತಬ್ಬಿಕೊಂಡು ಕಣ್ಣೀರಿಟ್ಟೆವು- ಸುರೇಶ್ ರೈನಾ

blank

ಎಬಿ ಡಿವಿಲಿಯರ್ಸ್​-ವಿರಾಟ್​ ಕೊಹ್ಲಿ, ಮಹೇಲಾ ಜಯವರ್ದನೆ-ಕುಮಾರ್​​ ಸಂಗಾಕ್ಕರ, ವಿರಾಟ್​-ಧೋನಿ.. ಹೀಗೆ ಹಲವು ಕ್ರಿಕೆಟಿಗರ ಸ್ನೇಹದ ಹೆಜ್ಜೆ ಗುರುತುಗಳು, ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಆದರೆ ಎಂ​ಎಸ್​ ಧೋನಿ- ಸುರೇಶ್​ ರೈನಾರದ್ದು ಇವರೆಲ್ಲರಿಗಿಂತ, ವಿಶೇಷ ಮತ್ತು ವಿಭಿನ್ನ ಬಾಂಧವ್ಯ. ಕ್ರಿಕೆಟ್​​​ಗೆ​ ಕಾಲಿಟ್ಟಾಗ ಗುರು-ಶಿಷ್ಯರಾಗಿದ್ದ ಈ ಜೋಡಿ, ಇದೀಗ ಬೇರ್ಪಡಿಸಲಾಗದ ಗೆಳೆಯರು.

ಸದ್ಯ ಧೋನಿ-ರೈನಾರ ಬಾಂಧವ್ಯ ಮುನ್ನೆಲೆಗೆ ಬರಲು​ ಕಾರಣ, ರೈನಾ ನೀಡಿದ ಒಂದು ಹೇಳಿಕೆಯಿಂದ. ಹೌದು, ಡಿಸೆಂಬರ್​​ನಲ್ಲಿ ನಡೆಯೋ IPL​ ಮೆಗಾ ಹರಾಜಿನಲ್ಲಿ ಧೋನಿಯನ್ನ ಚೆನ್ನೈ ಉಳಿಸಿಕೊಳ್ಳುತ್ತೋ ಇಲ್ಲವೋ ಅನ್ನೋ ಅನುಮಾನ, ಹುಟ್ಟುಹಾಕಿದೆ. ಆದರೆ ಐಪಿಎಲ್​ ಸ್ಪೆಷಲಿಸ್ಟ್​ ರೈನಾ ಹೇಳಿರುವ ಮಾತು, ಸಂಚಲನ ಸೃಷ್ಟಿಸಿದೆ. ಜೊತೆಗೆ ಆಟಕ್ಕಿಂತ ನಮ್ಮ ಸ್ನೇಹ ದೊಡ್ಡದು ಅನ್ನೋ ಸಂದೇಶವನ್ನ ಕೂಡ ರವಾನಿಸಿದ್ದಾರೆ.

blank

ಧೋನಿ ಆಡದಿದ್ರೆ ನಾನು ಆಡೋಲ್ಲ ಎಂದ ರೈನಾ..!
ಧೋನಿ-ರೈನಾ ಸಿಎಸ್​ಕೆ ತಂಡಕ್ಕೆ ಎಂಟ್ರಿ ಕೊಟ್ಟಿದ್ದು, ಒಂದೇ ಸಲ. 2008ರ ಮೊದಲ ಆವೃತ್ತಿಯಿಂದ ಹಿಡಿದು ಇಲ್ಲಿಯವರೆಗೂ, ಇಬ್ಬರೂ CSK ಅವಿಭಾಜ್ಯ ಅಂಗವಾಗಿದ್ದಾರೆ. ಫ್ರಾಂಚೈಸಿ ಎರಡು ವರ್ಷ ನಿಷೇಧಕ್ಕೆ ಒಳಗಾದಾಗ ಮಾತ್ರ, ಈ ಜೋಡಿ ಬೇರೆಯಾಗಿತ್ತಷ್ಟೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿದ ದಿನವೇ, ರೈನಾ ಕೂಡ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ರು. ಇದೀಗ ಧೋನಿ ಐಪಿಎಲ್ ಆಡದಿದ್ದರೆ, ನಾನೂ ಆಡೋದಿಲ್ಲ ಅಂತ ಹೇಳಿ ಎಲ್ಲರನ್ನೂ ಬೆರಗಾಗಿಸಿದ್ದಾರೆ.

ಇದನ್ನೂ ಓದಿ: ಧೋನಿ ಭಾಯ್ ಆಡಲ್ಲ ಅಂದ್ರೆ ನಾನೂ ಆಡಲ್ಲ ಎಂದ ರೈನಾ

‘ಧೋನಿಯನ್ನ ಮನವೊಲಿಸುತ್ತೇನೆ’..!
‘ಮುಂದಿನ ವರ್ಷ ಧೋನಿ ಆಡದೇ ಇದ್ರೆ, ನಾನೂ ಕೂಡ ಆಡುವುದಿಲ್ಲ. 2008ರಿಂದ ಇಬ್ಬರೂ ಸಿಎಸ್‌ಕೆ ಪರ ಆಡುತ್ತಾ ಬಂದಿದ್ದೇವೆ. ಈ ವರ್ಷ ಟ್ರೋಫಿ ಗೆದ್ದರೆ ಮುಂದಿನ ವರ್ಷವೂ ಆಡುವಂತೆ ಧೋನಿಯನ್ನ ನಾನೇ ಮನವೊಲಿಸುತ್ತೇನೆ. ಇದಕ್ಕಾಗಿ ನನ್ನ ಸಾಮರ್ಥ್ಯ ಮೀರಿ ಪ್ರಯತ್ನಿಸುತ್ತೇನೆ. ಅಕಸ್ಮಾತ್ ಧೋನಿ ಆಡುವುದಿಲ್ಲ ಎಂದು ಹೇಳಿದರೆ, ನಾನು ಕೂಡ IPLನ ಯಾವುದೇ ತಂಡದ ಪರ ಆಡುವುದಿಲ್ಲ’
-ಸುರೇಶ್​ ರೈನಾ, ಮಾಜಿ ಕ್ರಿಕೆಟಿಗ

ರೈನಾ ಇನ್ನೂ 3-4 ವರ್ಷಗಳ ಕಾಲ ಆಡಲು ಫಿಟ್​ ಆಗಿದ್ದಾರೆ. ಆದರೂ ಗೆಳೆಯನಿಲ್ಲದ ತಂಡದಲ್ಲಿ ಕಾಣಿಸಿಕೊಳ್ಳಲು, ರೈನಾ ಒಲವು ತೋರುತ್ತಿಲ್ಲ. ಕ್ರಿಕೆಟ್​ ಅಷ್ಟೇ ಅಲ್ಲ, ಖಾಸಗಿ ಜೀವನದಲ್ಲೂ ರೈನಾ, ಧೋನಿ, ಬೆಸ್ಟ್​​ ಫ್ರೆಂಡ್ಸ್. ಅದರಲ್ಲೂ ರೈನಾ ಪಾಲಿಗಂತೂ ಧೋನಿಯೇ ಎಲ್ಲಾ.!! ಹಲವು ಕ್ರಿಕೆಟಿಗರೊಂದಿಗೆ ಒಡನಾಟ ಹೊಂದಿದ್ರೂ, ತಮ್ಮ ನೋವು-ನಲಿವುಗಳನ್ನ ರೈನಾ ಹಂಚಿಕೊಳ್ಳೋದು ಮಾತ್ರ, ಮಿಸ್ಟರ್​​ ಕೂಲ್​ ಧೋನಿ ಬಳಿಯೇ.

 

The post ಕ್ರಿಕೆಟ್ ಲೋಕದ ಕುಚಿಕುಗಳು ಇವ್ರು.. ಧೋನಿ ಅಭಿಮಾನಿಗಳ ಹೃದಯ ಗೆದ್ದ ರೈನಾ..! appeared first on News First Kannada.

Source: newsfirstlive.com

Source link