ಮೈ ಜುಮ್ ಅನ್ನಿಸೋ ಸಾಹಸಕ್ಕೆ ರಾಕಿ ಬಾಯ್ ತಾಲೀಮು.. ಒಂದೇ ಒಂದು ದೃಶ್ಯಕ್ಕೆ ₹1.5 ಕೋಟಿ ಖರ್ಚು..!

ಮೈ ಜುಮ್ ಅನ್ನಿಸೋ ಸಾಹಸಕ್ಕೆ ರಾಕಿ ಬಾಯ್ ತಾಲೀಮು.. ಒಂದೇ ಒಂದು ದೃಶ್ಯಕ್ಕೆ ₹1.5 ಕೋಟಿ ಖರ್ಚು..!

ಕೆಲ ದಿನಗಳ ಹಿಂದೆ ನಾವು ನಿಮ್ಗೆ ಹೇಳಿದ್ವಿ ‘ಕೆಜಿಎಫ್ ಚಾಪ್ಟರ್-2’ ಸಿನಿಮಾದ ಕಟ್ಟ ಕಡೆಯ ಶೂಟಿಂಗ್​​​ ದೃಶ್ಯಗಳು ಸೇರೆಯಾಗುತ್ತಿವೆ ಅಂತ. ಈಗ ಅದರ ಮುಂದುವರೆದ ಭಾಗ. ದೊಡ್ಡ ಮಟ್ಟದಲ್ಲಿ ಮೈ ಜುಮ್ ಅನ್ನಿಸೋ ಸೀನ್ ಶೂಟ್ ಒಂದಕ್ಕೆ ಪ್ರಶಾಂತ್ ನೀಲ್ ಪಡೆ ಸನ್ನದವಾಗುತ್ತಿದೆ. ಈ ದೃಶ್ಯದಲ್ಲಿ ರಾಕಿ ಭಾಯ್ ಯಶ್ ಆರ್ಭಟಿಸಲಿದ್ದಾರೆ. ಕೆಜಿಎಫ್ ಚಾಪ್ಟರ್​ನ ಕಟ್ಟ ಕಡೆಯ ಶೂಟ್​​​ನ ಎಕ್ಸ್​​ಕ್ಲೂಸಿವ್ ಅಪ್​​ಡೇಟ್ಸ್ ಇದೋ ನಿಮ್ಮ ಮುಂದೆ.

blank

ಏಳು ಸಮುದ್ರ ದಾಟಿದೆ ಕನ್ನಡದ ಕೆಜಿಎಫ್​ ಸಿನಿಮಾದ ಖ್ಯಾತಿ. ಬಾಹುಬಲಿ-Beginning ಬಂದ ನಂತರ ಬಾಹುಬಲಿ : The Conclusion ಬಂದಾಗ ಚಿತ್ರಪ್ರೇಮಿಗಳು ಕಾದು ಕುಳಿತಿದ್ರಲ್ಲ ಅದಕ್ಕೂ ಒಂದ್ ಕೈ ಜಾಸ್ತಿ ಕೆಜಿಎಫ್​ ಚಾಪ್ಟರ್ 2. ಪ್ಯಾನ್ ಇಂಡಿಯ ಮೂವಿ ಅನ್ನೋ ಕಲ್ಪನೆಗೆ ನಾಂದಿ ಹಾಡಿದ ಕೆಜಿಎಫ್​ ಐದೈದು ಭಾಷೆಗಳಲ್ಲಿ ಏಕಕಾಲದಲ್ಲಿ ಡಬ್ ಆಗಿ ಮೂಡಿಬಂದ ಸೂಪರ್ ಹಿಟ್ ಸಿನಿಮಾ. ಈಗ ಎರಡನೇ ಕೆಜಿಎಫ್​​ ಸರದಿ , ಹೊಂಬಾಳೆಯಿಂದ ಬಂದಿದೆ ಹೊಸ ಸುದ್ದಿ. ಆಲ್ ಮೋಸ್ಟ್ ಆಲ್ ಶೂಟಿಂಗ್ ಮುಗಿಸಿದ್ದ ಪ್ರಶಾಂತ್ ನೀಲ್ ಪಡೆ ಎಡಿಟಿಂಗ್ ಟೇಬಲ್​​ನಲ್ಲಿ ಕುಳಿತಾಗ ಇನ್ನೇನೋ ಬೇಕು ಎಂದೆನಿಸಿ ಮತ್ತೆ ಶೂಟಿಂಗ್​​ ಅಡ್ಡಕ್ಕೆ ಇಳಿದಿದೆ.

blank

2020ರ ಡಿಸೆಂಬರ್ 20 ರಂದು ಪ್ರಶಾಂತ್ ನೀಲ್ ಒಂದು ಸಿಹಿ ಸುದ್ದಿಯನ್ನ ಕೊಟಿದ್ರು. ಕೆಜಿಎಫ್​ ಚಾಪ್ಟರ್ 2 ಸಿನಿಮಾದ ಕ್ಲೈಮ್ಯಾಕ್ಸ್​​ ಶೂಟಿಂಗ್ ಕಂಪ್ಲೀಟ್ ಎಂದು. ಈ ಟ್ವೀಟ್ ಸಂದೇಶವನ್ನ ನೋಡಿದ ಚಿತ್ರಪ್ರೇಮಿಗಳಿಗೆ ದಿಲ್​ ಖುಷ್ ಆಗಿತ್ತು. ಆದಷ್ಟು ಬೇಗ ಸಿನಿಮಾವನ್ನ ನೋಡಬಹುದಲ್ಲ ಅನ್ನೋ ಆಸೆಯ ಭರವಸೆ ಮೂಡಿತ್ತು. ಆದ್ರೆ ಕೆಜಿಎಫ್​​-2 ಶೂಟಿಂಗ್​​​​​​​​ ಕ್ಯಾಮೆರಾಗೆ ಕುಂಬಳ ಕಾಯಿ ಪ್ರಾಪ್ತಿಯಾಗಿಲ್ಲ. ಬರೋಬ್ಬರಿ ಆರು ತಿಂಗಳು 11 ದಿನದ ನಂತರ ಮತ್ಯಾಕೆ ಶೂಟಿಂಗ್​​​ಗೆ ಪ್ರಶಾಂತ್ ನೀಲ್ ಪಡೆ ಇಳಿದಿದೆ ಅನ್ನೋದೆ ಇಂಟ್ರಸ್ಟಿಂಗ್. ಜುಲೈ 1ರಿಂದ ಮತ್ತೆ ಶೂಟಿಂಗ್ ನೆಲಕ್ಕೆ ಧುಮುಖಿರೋ ಕೆಜಿಎಫ್​ ಸಿನಿ ಪಡೆ ಒಂದು ದಿನ ಕಂಠೀರವ ಸ್ಟುಡಿಯೋದಲ್ಲಿ ಎರಡು ದಿನ ಮಿನರ್ವ ಮಿಲ್​​ನಲ್ಲಿ ಶೂಟ್ ಮಾಡಲಾಗಿದೆ. ಈಗ ಕಟ್ಟಕಡೆಯ ಅದ್ಧೂರಿ ದೃಶ್ಯವೊಂದನ್ನ ಸೇರೆ ಹಿಡಿಯುವ ಸಿದ್ಧತೆಯಲ್ಲಿ ಪ್ರಶಾಂತ್ ನೀಲ್ ಬಳಗ ಮಗ್ನವಾಗಿದೆ.

blank

ಮೂರು ದಿನ ಟ್ರಯಲ್, ಮೂರು ದಿನ ರಿಯಲ್ ಶೂಟ್
ಹೌದು, ಮೈ ಜುಮ್ ಅನ್ನಿಸೋ ಕಾರ್ ರೇಸಿಂಗ್ ದೃಶ್ಯವನ್ನ ಸೇರೆ ಹಿಡಿಯಲು ಕೆಜಿಎಫ್ ಚಾಪ್ಟರ್-2 ಸಿನಿ ತಂಡ ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರಿನ ನೈಸ್ ರೋಡ್​​ನಲ್ಲಿ ಹತ್ತ್ ಹತ್ರಾ ಒಂದು ಕಿಲೋ ಮೀಟರ್ ಗ್ರೀನ್ ಕಲರ್ ಬಳೆದು ರಾಜಸ್ಥಾನ ಮರುಭೂಮಿಯಲ್ಲಿ ಶೂಟ್ ಮಾಡಬೇಕಿದ್ದ ದೃಶ್ಯವನ್ನ ಸಿಜಿ ತಂತ್ರಜ್ಞಾನದಲ್ಲಿ ಶೂಟ್ ಮಾಡಲು ತೆರೆಮರೆಯಲ್ಲೇ ಕೆಜಿಎಫ್ ಫಿಲ್ಮ್ ಟೀಮ್ ಸಿದ್ಧವಾಗುತ್ತಿದೆ.

blank

ಒಂದೇ ಒಂದು ದೃಶ್ಯಕ್ಕೆ ಬರೋಬ್ಬರಿ ಒಂದೂವರೆ ಕೋಟಿ
ಅದ್ಧೂರಿಯಾಗಿ ಸಖತ್ ರಿಸ್ಕಿಯಾಗಿ ಈ ದೃಶ್ಯವನ್ನ ಸೇರೆ ಹಿಡಿಯ ಬೇಕು ಅನ್ನೋ ಕನಸಿನಿಂದ ಪ್ರಶಾಂತ್ ನೀಲ್ ಬಳಗ ಮೂರು ದಿನ ಟ್ರಯಲ್ ಶೂಟ್ ಮೂರು ದಿನ ರಿಯಲ್ ಶೂಟ್ ಮಾಡಲು ನಿರ್ಧರಿಸಿದೆ. ಈ ತಿಂಗಳ 21ನೇ ತಾರೀಖ್​​ನಿಂದ 26ರವರೆಗೆ ಕೆಜಿಎಫ್​ ಚಾಪ್ಟರ್ 2 ಚಿತ್ರದ ಕಾರ್ ರೇಸ್ ಒಂದನ್ನ ಶೂಟ್ ಮಾಡೋ ದಿನಾಂಕ ನಿಗಧಿಯಾಗಿದೆ. ಈ ದೃಶ್ಯಕ್ಕಾಗಿಯೇ ಕೆಜಿಎಫ್ ಫಿಲ್ಮ್ ಟೀಮ್ ಗುರುಗಾವ್​​ನಿಂದ ಸ್ಪೆಷಲ್ ಕಾರ್ ಒಂದನ್ನ ಆಲ್ಟ್ರು ಮಾಡಿಸಿ ಶೂಟ್ ಮಾಡಿಸುತ್ತಿದೆ. ಈ ಚೇಸಿಂಗ್ ದೃಶ್ಯವನ್ನ ಹಾಲಿವುಡ್ ರೇಂಜ್​​​ಗೆ ಚಿತ್ರೀಸಲು ಸಿದ್ಧವಾಗಿರೋ ಕೆಜಿಎಫ್ ಫಿಲ್ಮ್ ಟೀಮ್ ಬರೊಬ್ಬರಿ ಒಂದೂವರೆ ಕೋಟಿ ಖರ್ಚು ಮಾಡುತ್ತಿದೆಯಂತೆ.

blank

ಸ್ಪೆಷಲ್ ಕಾರ್ ಒಂದಕ್ಕೆ ಪ್ರಶಾಂತ್ ನೀಲ್ ವೇಟಿಂಗ್
ಕೆಜಿಎಫ್ ಸಿನಿಮಾದ ಆಲ್​ ಮೊಸ್ಟ್ ಆಲ್ ಶೂಟಿಂಗ್ ಮುಕ್ತಾಯವಾಗಿದೆ. ಆದ್ರು ಯಾಕೆ ಯಶ್ ತಮ್ಮ ಗಡ್ಡಕ್ಕೆ ಮುಕ್ತಿ ಹಾಡಿಲ್ಲ ಅನ್ನೋ ಕುತೂಹಲ ಎಲ್ಲರಲ್ಲಿತ್ತು. ಆ ಕುತೂಹಲ ಪ್ರಶ್ನೆಗೆ ಈಗ ಉತ್ತರ ಸಿಗುತ್ತಿದೆ. ಆರು ತಿಂಗಳ ನಂತರ ಮತ್ತೆ ಶೂಟಿಂಗ್ ಅಡ್ಡಕ್ಕೆ ಯಶ್ ಬಲಗಾಲಿಡಲಿದ್ದಾರೆ. ಈ ಹಿಂದೆ ಕೆಜಿಎಫ್ ಚಾಪ್ಟರ್ 1 ಚಿತ್ರೀಕರಣವನ್ನು ಹಿಂದಿ ಡಿಸ್ಟ್ರಿಬ್ಯೂಟರ್ಸ್ ಬೇಡಿಕೆಗಾಗಿ ಹಾಡೊಂದರ ರೀ ಶೂಟ್ ಮಾಡಿ ಗೆದ್ದಿತ್ತು ಚಿತ್ರತಂಡ.. ಈಗ ಮತ್ತೊಮ್ಮೆ ರೀ ಆ್ಯಡ್ ಶೂಟ್​​​ಗೆ ಕೆಜಿಎಫ್ ಸಿನಿ ಪಡೆ ಸನ್ನದವಾಗಿದೆ.

The post ಮೈ ಜುಮ್ ಅನ್ನಿಸೋ ಸಾಹಸಕ್ಕೆ ರಾಕಿ ಬಾಯ್ ತಾಲೀಮು.. ಒಂದೇ ಒಂದು ದೃಶ್ಯಕ್ಕೆ ₹1.5 ಕೋಟಿ ಖರ್ಚು..! appeared first on News First Kannada.

Source: newsfirstlive.com

Source link