ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು- ನಾ ಮುಂದು ತಾ ಮುಂದು ಅಂತಾ ಬಂದವರಿಗೆ ಶಾಕ್

ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು- ನಾ ಮುಂದು ತಾ ಮುಂದು ಅಂತಾ ಬಂದವರಿಗೆ ಶಾಕ್

ಚಿಕ್ಕಬಳ್ಳಾಪುರ: ಕೊರೊನಾ ಲಾಕ್​​ಡೌನ್ ಸಡಿಲಿಕೆ ಹಾಗೂ ವಾರಾಂತ್ಯದ ಕಾರಣದಿಂದ ಇಂದು ಬೆಳಂಬೆಳಗ್ಗೆಯೇ ನಂದಿಬೆಟ್ಟಕ್ಕೆ ಪ್ರವಾಸಿಗರು ಲಗ್ಗೆಯಿಟ್ಟಿದ್ದಾರೆ. ಚಿಕ್ಕಬಳ್ಳಾಪುರ- ಅನ್ ಲಾಕ್ ಆಗಿದ್ದೇ ತಡ ಮನೆಯಲ್ಲಿದ್ದು ಬೇಜಾರಲ್ಲಿದ್ದ ಜನ ಮುಂಜಾನೆ 4-5 ಗಂಟೆಯಿಂದಲೇ ಆಗಮಿಸಿದ್ದರು.

ಬೆಳಗ್ಗೆ 6 ಗಂಟೆ ನಂತರ ಚೆಕ್‌ ಪೋಸ್ಟ್ ಗೇಟ್ ಓಪನ್ ಮಾಡಿದ್ದೇ ತಡ ನಾ ಮುಂದು ತಾ ಮುಂದು ಅಂತ ನಂದಿಬೆಟ್ಟ ಏರಿದ್ದಾರೆ. ನೂರಾರು ಕಾರು ಹಾಗೂ ಬೈಕ್​​ಗಳಲ್ಲಿ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.

blank

ಇನ್ನೂ ಮಾಸ್ಕ್ ಧರಿಸದ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡ್ತಿರೋ ಪ್ರವಾಸಿಗರಿಗೆ ಬೆಳ್ಳಂಬೆಳಗ್ಗೆ ಪೋಲೀಸರು ಶಾಕ್ ಕೊಟ್ಟಿದ್ದು ದಂಡ ವಿಧಿಸುತ್ತಿದ್ದಾರೆ. ಚೆಕ್ ಪೋಸ್ಟ್ ಬಳಿ ವಾಹನಗಳ ಪರಿಶೀಲನೆಯಲ್ಲಿ ತೊಡಗಿರೋ ನಂದಿಗಿರಿಧಾಮ ಹಾಗೂ ಚಿಕ್ಕಬಳ್ಳಾಪುರ ಸಂಚಾರಿ ಠಾಣಾ ಪೊಲೀಸರು ನಿಯಮಗಳನ್ನು ಉಲ್ಲಂಘಿಸಿದವಿಗೆ ತಲಾ 500 ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಮಾಸ್ಕ್ ಧರಿಸದ ಸವಾರರು ಹಾಗೂ ಹೆಲ್ಮೇಟ್, ಮಿರರ್ ಇಲ್ಲದೇ ಬೈಕ್​​ಗಳಲ್ಲಿ ಆಗಮಿಸಿದ 100 ಕ್ಕೂ ಹೆಚ್ಚು ಜನರಿಗೆ ದಂಡ ವಿಧಿಸಲಾಗಿತ್ತು.

blank

ಇನ್ನೂ ಬೆಟ್ಟದ ಮೇಲೆ ಪ್ರವಾಸಿಗರು ತುಂಬಿ ತುಳುಕುತ್ತಿದ್ದು, ಅಧಿಕಾರಿಗಳು ಹಾಗೂ ಪೊಲೀಸರ ಬೀಗಿ ಕ್ರಮಗಳ ನಡವೆಯೂ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ್ದ ದೃಶ್ಯಗಳು ಸಾಮಾನ್ಯವಾಗಿ ಕಣ್ಣಿಗೆ ಬೀಳುತ್ತಿತ್ತು. ಇನ್ನು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬೈಕ್ ಹಾಗೂ ಕಾರಿನಲ್ಲಿ ಬಂದ ಕಾರಣ ನಂದಿ ಹಿಲ್ಸ್​ನಲ್ಲಿ ಟ್ರಾಫಿಕ್ ಜಾಮ್ ಕೂಡ ಆಗಿತ್ತು.

blank

The post ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು- ನಾ ಮುಂದು ತಾ ಮುಂದು ಅಂತಾ ಬಂದವರಿಗೆ ಶಾಕ್ appeared first on News First Kannada.

Source: newsfirstlive.com

Source link