2 ವಾರ ಸಾವು-ಬದುಕಿನೊಂದಿಗೆ ಹೋರಾಡಿದ್ದ ಟಾಲಿವುಡ್​ ನಟ ನಿಧನ

2 ವಾರ ಸಾವು-ಬದುಕಿನೊಂದಿಗೆ ಹೋರಾಡಿದ್ದ ಟಾಲಿವುಡ್​ ನಟ ನಿಧನ

ಹೈದರಾಬಾದ್​: ರಸ್ತೆ ಅಪಘಾತದಲ್ಲಿ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಗ್​​ಬಾಸ್ ಸ್ಪರ್ಧಿ, ವಿವಾದಾತ್ಮಕ ಸಿನಿಮಾ ವಿಮರ್ಶೆಗಳ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದ ಟಾಲಿವುಡ್​ ನಟ ಕತ್ತಿ ಮಹೇಶ್​ ಅವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.

ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕೊಡವಲೂರು ಬಳಿ ಜೂನ್ 26 ರಂದು ಕಾರು ಅಪಘಾತ ಸಂಭವಿಸಿತ್ತು. ಲಾರಿ ಹಿಂಬದಿಗೆ ಮಹೇಶ್​ ಚಲಿಸುತ್ತಿದ್ದ ಕಾರು ಡಿಕ್ಕಿಯಾಗಿರುವ ಪರಿಣಾಮ ಕಾರು ಸಂಪೂರ್ಣವಾಗಿ ಜಖಂ ಆಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ನೆಲ್ಲೂರಿನ ಮೆಡಿಕವರ್​ ಕಾರ್ಪೊರೇಟ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟನ ತಲೆ, ಕಣ್ಣಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದ ಪರಿಣಾಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಶಿಫ್ಟ್​ ಮಾಡಲಾಗಿತ್ತು.

ನಟನ ಚಿಕಿತ್ಸೆಗೆ ನೆರವು ನೋಡಿದ್ದ ಆಂಧ್ರ ಪ್ರದೇಶ ಸರ್ಕಾರ 17 ಲಕ್ಷ ರೂಪಾಯಿ ಬಿಡುಗಡೆ ಮಾಡಿತ್ತು. ಆದರೆ ಕಳೆದ ಎರಡು ವಾರಗಳಿಂದ ಸಾವಿನೊಂದಿಗೆ ಹೋರಾಟ ನಡೆಸಿದ್ದ ನಟ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅವರ ಅಂತಿಮ ಸಂಸ್ಕಾರಗಳು ಇಂದು ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಶಿವಣ್ಣ ಹುಟ್ಟುಹಬ್ಬದ ಮುಂಚೆಯೇ ಫ್ಯಾನ್ಸ್​ಗೆ ಸಿಹಿ ಸುದ್ದಿ; 126ನೇ ಚಿತ್ರದ ಸಾರಥಿ ರಿವೀಲ್​

The post 2 ವಾರ ಸಾವು-ಬದುಕಿನೊಂದಿಗೆ ಹೋರಾಡಿದ್ದ ಟಾಲಿವುಡ್​ ನಟ ನಿಧನ appeared first on News First Kannada.

Source: newsfirstlive.com

Source link