ಕಣ್ಣಲ್ಲೇ ಕ್ಯಾಮರಾ.. ಮೈತುಂಬಾ ಸೆನ್ಸಾರ್​.. ನೌಕಾ ಸೇನೆಗೆ ಶಕ್ತಿ ತುಂಬಲಿದೆ ರೋಬೊ ಫಿಶ್

ಕಣ್ಣಲ್ಲೇ ಕ್ಯಾಮರಾ.. ಮೈತುಂಬಾ ಸೆನ್ಸಾರ್​.. ನೌಕಾ ಸೇನೆಗೆ ಶಕ್ತಿ ತುಂಬಲಿದೆ ರೋಬೊ ಫಿಶ್

ಸೇನೆ ದೇಶದ ರಕ್ಷಣೆಗಾಗಿ ಸದಾ ಸಿದ್ಧವಾಗಿರುತ್ತದೆ. ಯಾವಾಗ, ಯಾರು ನಮ್ಮ ಮೇಲೆ ಅಟ್ಯಾಕ್ ಮಾಡುತ್ತಾರೋ ಅನ್ನೋ ಭೀತಿಯಿಂದ ಯಾವಾಗಲು ಸನ್ನದ್ಧವಾಗಿರುತ್ತದೆ. ಈ ನಮ್ಮ ಸೈನಿಕರ ಸೇವೆಯನ್ನು ಮತ್ತಷ್ಟು ಬಲಗೊಳಿಸುತ್ತಿರೋದು ಡಿ.ಆರ್.ಡಿ.ಓ. ತಮ್ಮ ಹೊಸ ಹೊಸ ಆವಿಷ್ಕಾರಗಳಿಂದ ದೇಶದ ಭದ್ರತೆಯನ್ನು ಹೆಚ್ಚಿಸುತ್ತಿರುವ ಡಿ.ಆರ್.ಡಿ.ಓ ಈಗ ಹೊಸದೊಂದು ಡಿವೈಸ್ ಸೇನೆಗೆ ಕೊಡುಗೆಯಾಗಿ ಕೊಡಲು ಸಿದ್ಧವಾಗುತ್ತಿದೆ.

ಭಾರತೀಯ ಸೇನೆ. ವಿಶ್ವದ ಯಾವ ಸೇನೆಗೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಮುನ್ನುಗ್ತಾನೆ ಇದೆ. ಹೊಸ ಹೊಸ ಪ್ಲಾನ್, ಹೊಸ ಹೊಸ ಆವಿಷ್ಕಾರ ದೇಶದ ಭದ್ರತೆಗೆ ಏನೆಲ್ಲಾ ಬೇಕೋ ಎಲ್ಲವನ್ನು ಅಚ್ಚುಕಟ್ಟಾಗಿ ನೆರವೇರಿಸುತ್ತಿದೆ. ಕಳೆದ ದಶಕಗಳಿಗೆ ಹೋಲಿಸಿದರೆ, ಈಗ ನಮ್ಮ ದೇಶದಲ್ಲಿ ಅದೆಷ್ಟೋ ಆಧುನಿಕ ಶಸ್ತ್ರಾಸ್ತ್ರಗಳು, ವಿವಿಧ ಅಟ್ಯಾಕಿಂಗ್ ಏರ್ ಕ್ರಾಫ್ಟ್​​ಗಳು, ಸಮುದ್ರ ತೀರವನ್ನು ಕಾಪಾಡುವ ಬಲಿಷ್ಠವಾದ ಹಡಗುಗಳು ನಮ್ಮ ದೇಶದ ಬಲವೃದ್ಧಿಸಿದೆ. ಇದಕ್ಕೆ ಸರಿಸಮವಾಗಿ ಮಿಸೈಲ್ಸ್, ಸಬ್ ಮೆರಿನ್ , ಟ್ಯಾಂಕರ್ಸ್ .. ಅಬ್ಬ! ಒಂದಾ ಎರಡಾ? ದೇಶದ ಸುರಕ್ಷತೆಯನ್ನು ಮತ್ತಷ್ಟು ಬಲಗೊಳಿಸಲು, ಸೈನಿಕರಿಗೆ ಶತ್ರು ದಾಳಿ ಬಗ್ಗೆ ವಿಷಯ ಕಲೆ ಹಾಕಲು ಸಂಶೋದನೆಗಳು ನಡೆಯುತ್ತಲೇ ಇದೆ. ಈ ಸಂಶೋದನೆಗೆ ಸಾಥ್ ನೀಡುತ್ತಿರುವುದು ಮಿಲಿಟರಿ ಸಂಶೋದನಾ ಸಂಸ್ಥೆ ಡಿ.ಆರ್.ಡಿ.ಓ.

blank

ಭೂ ಸೇನೆಯ ಬಳಿ ಇರುವ ಆಧುನಿಕ ರೋಬೋ ವಾಹನಗಳು
ನೋ ಮ್ಯಾನ್ ಆರ್ಮಿ ಸಿದ್ಧ ಮಾಡಿಕೊಳ್ತಾ ಇದೆ ಭಾರತೀಯ ಸೇನೆ

ರೋಬೋಟ್ ಅನ್ನೋದು ಇತ್ತಿಚೆಗೆ ಎಲ್ಲೆಲ್ಲೂ ಕಾಣ್ತಾನೆ ಇರುತ್ತೆ. ಕೆಲುವೊಂದು ಹೋಟೆಲ್​​ಗಳಲ್ಲಿ ರೋಬೋಟ್ ಸರ್ವರ್​​ಗಳು ಊಟ ಬಡಿಸುವುದು ಇದೆ. ಅದೇ ರೀತಿ ಭಾರತೀಯ ಭೂ-ಸೇನೆಯ ಬಳಿ ಬಹಳಷ್ಟು ರೋಬೋಗಳು ಕಾಣಸಿಗುತ್ತೆ. ಇತ್ತಿಚೆಗೆ ಡಿ.ಆರ್.ಡಿ.ಓ ಕಡೆಯಿಂದ ಭಾರತೀಯ ಸೇನೆಗೆ ಉಗ್ರರು ಬೀಡುಬಿಟ್ಟಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ವೀಕ್ಷಿಸಲು ರೋಬೋ ವೆಹಿಕಲ್​​ಗಳನ್ನು ಸಿದ್ಧ ಮಾಡಿಕೊಟ್ಟಿದ್ದರು. ಒಂದು ವೇಳೆ ಪರಿಸ್ಥಿತಿ ಹದಗೆಟ್ಟಿದ್ದರೆ, ಇದೇ ರೋಬೋ ವೆಹಿಕಲ್ಸ್, ಟ್ಯಾಂಕರ್ ಗಳ ರೀತಿ ಶತ್ರುವಿನ ಮೇಲೆ ಗುಂಡಿನದಾಳಿ ಕೂಡ ನಡೆಸಲು ಸಿದ್ಧವಾಗಿತ್ತು. ಈ ರೋಬೋವನ್ನು 100 ರಿಂದ 200 ಫೀಟ್ ದೂರದಲ್ಲಿ ನಿಂತು ಕಮಾಂಡರ್​ಗಳು ಕಂಟ್ರೋಲ್ ಮಾಡ್ತಾರೆ. ಈ ರೋಬೋ, ಎಂಥ ಗುಡ್ಡ ಪ್ರದೇಶಗಳಲ್ಲೂ ಚಲಿಸಬಲ್ಲದು, ಮೆಟ್ಟಿಲುಗಳನ್ನು ಹತ್ತ ಬಲ್ಲದ್ದಾಗಿತ್ತು. ಇದೆ ರೀತಿ ಇಂಡಿಯನ್ ಆರ್ಮಿ ರೋಬೋ ಡಾಗ್ಸ್, ರೋಬೋ ಸೋಲ್ಜರ್ಸ್ ಹೀಗೆ ಒಂದು ಸಂಪೂರ್ಣ ನೋ ಮ್ಯಾನ್ ಆರ್ಮಿಯನ್ನು ಸಿದ್ಧಪಡಿಸುತ್ತಿದೆ.

blank

ಏರ್​​ಫೋರ್ಸ್ ಬಳಿ ಇರುವ ರೋಬೋ ಹಕ್ಕಿ
ಉರಿ ಅಟ್ಯಾಕ್​​ನಲ್ಲಿ ಸೇನೆಗೆ ಸಹಾಯ ಮಾಡಿದ್ದು ಇದೆ ರೋಬೋ

ಈಗಾಗಲೆ ವಿಶ್ವ ಪ್ರಸಿದ್ಧ ಏರ್ ಕ್ರಾಫ್ಟ್​ಗಳನ್ನ ತನ್ನದಾಗಿಸಿಕೊಂಡಿರುವ ಭಾರತೀಯ ವಾಯು ಸೇನೆ ಬಳಿ, ತನ್ನದೆಯಾದ ರೋಬೋ ಆರ್ಮಿ ಇದೆ. ಇದು ಕ್ಯಾಮೆರಗಳನ್ನು ಹೊತ್ತು ಆಕಾಶ ಮಾರ್ಗವಾಗಿ ಎಲ್ಲ ಹಕ್ಕಿಗಳ ರೀತಿ ಹಾರಾಡುತ್ತಾ ಇರುತ್ತೆ, ಹಲವು ಬಯೋತ್ಪಾದಕ ಪ್ರದೇಶವನ್ನು ಕಣ್ಗಾವಲಿನಲ್ಲಿ ಇರಿಸಿಕೊಂಡಿರುತ್ತೆ. ಏನಾದರೂ ಅನುಮಾನಾಸ್ಪದ ಘಟನೆಗಳು ಸಂಭವಿಸುತ್ತಿರುವುದು ಕಾಣಿಸಿದರೆ. ಕೂಡಲೇ ಆರ್ಮಿ ಎಚ್ಚೆತ್ತು ಕೊಳ್ಳಲು ಸಹಾಯಕವಾಗುತ್ತದೆ. ದೇಶದ ಸೈನಿಕರ ಮೇಲೆ ದಾಳಿ ಮಾಡಿದ ಉಗ್ರರ ವಿರುದ್ಧ ನಡೆದ ಉರಿ ಅಟ್ಯಾಕ್ ಈ ರೋಬೋ ಹಕ್ಕಿಯ ಸಹಾಯವನ್ನು ನಾವು ಮರೆಯುವಂತಿಲ್ಲ. ಬಯೋತ್ಪಾದಕರ ಚಲನ ವಲನವನ್ನು ಗಮನಿಸಲು ಈ ರೋಬೋವನ್ನು ಹಾರಲು ಬಿಡಲಾಗಿತ್ತು. ನಿರ್ಜನ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಉಗ್ರರ ಬಳಿ ಯಾವ ಯಾವ ಆಯುಧ ಇದೆ, ಅವರಲ್ಲಿ ಯಾರು ಪ್ರಮುಖರು, ಯಾವ ಮಾರ್ಗವಾಗಿ ಅಟ್ಯಾಕ್ ಮಾಡಿದರೆ ಸುಲಭವಾಗಿ ಗೆಲ್ಲಬಹುದು ಎನ್ನುವ ಎಲ್ಲ ಮಾಹಿತಿಗೆ ರೋಬೋ ಹಕ್ಕಿ ಬಹಳಷ್ಟು ಸಹಾಯಕವಾಗಿತ್ತು. ಹಕ್ಕಿ ಆಯ್ತು, ಈಗ ಸಿದ್ಧವಾಗುತ್ತಿರೋದು ರೋಬೊ ಫಿಶ್.

ನೌಕಾ ಸೇನೆಗೆ ಸೇರಲಿದೆ ರೋಬೋಟಿಕ್ ಫಿಶ್!
ಸಮುದ್ರ ಲೋಕದ ಕಣ್ಗಾವಲಿಗೆ ಹೊಸ ಆವಿಷ್ಕಾರ

ವಾಯು ಸೇನೆ ಆಯ್ತು, ಭೂ ಸೇನೆ ಆಯ್ತು. ಇದೀಗ ಇಂಡಿಯನ್ ನೇವಿಗೆ ಸಿದ್ಧವಾಗುತ್ತಿದೆ ಇದೇ ರೋಬೋಟಿಕ್ ಫಿಶ್. ಹೌದು, ರೋಬೋಟಿಕ್ ತಂತ್ರಜ್ಞಾನ ಬೆಳೆದಷ್ಟು ಹೊಸ ಹೊಸ ಆವಿಷ್ಕಾರಗಳು, ಹೊಸ ತಂತ್ರ ಸೃಷ್ಟಿಗಳು ಸಿದ್ಧವಾಗ್ತಾನೆ ಇದೆ. ಇದು ಭಾರತೀಯ ಸೈನ್ಯಕ್ಕೆ ಬಹಳಷ್ಟು ಸಹಾಯಕವಾಗುತ್ತಿರುವುದಂತು ಗಮನಾರ್ಹ ವಿಷಯ. ಶತ್ರುಗಳು ಯಾವ ದಿಕ್ಕಿನಿಂದ, ಯಾವ ಮಾರ್ಗವಾಗಿ ದೇಶದೊಳಕ್ಕೆ ಎಂಟ್ರಿ ಕೊಡ್ತಾರೊ ಗೊತ್ತಿಲ್ಲ. ಆದ್ರೆ ಎಲ್ಲ ಮಾರ್ಗದಲ್ಲಿ ಹದ್ದಿನ ಕಣ್ಣು ಇಡುವುದು, ಎಲ್ಲ ಸುಳಿಗಳಲ್ಲೂ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗುತ್ತದೆ. ಆದ್ದರಿಂದಲೇ, ಇಂಡಿಯನ್ ನೇವಿ ಪಾಲಿಗೆ ಸಿದ್ಧವಾಗುತ್ತಿದೆ. ಸಮುದ್ರ ಲೋಕದಿಂದ ದಾಳಿ ಮಾಡಲು ಪ್ಲಾನ್ ಮಾಡಿರುವ ಶತ್ರು ಪಾಲಯಳಕ್ಕೆ ಇದು ಹೊಸ ತಲೆ ನೋವು ಆಗಿದೆ.

ರೂಪ ಆಕಾರದಲ್ಲಿ ನಿಜವಾದ ಮೀನನ್ನೆ ಹೋಲುವ ರೋಬೋ
ಸಮುದ್ರದಲ್ಲಿ ಮೀನುಗಳ ನಡುವೆ ಮೀನಾಗಿ ಸಂಚಾರ ಮಾಡುತ್ತೆ

ಇದನ್ನೂ ಓದಿ: ಜಸ್ಟ್ 11 ವರ್ಷಕ್ಕೆ ಫಿಸಿಕ್ಸ್​ನಲ್ಲಿ ಡಿಗ್ರಿ ಮುಗಿಸಿದ ಬಾಲಕ; ಈತನ ಗುರಿಯೇ ಭಯಂಕರ

ಸಮುದ್ರದಲ್ಲಿ ಈ ರೋಬೋ ಮೀನಿನ ಸಂಚಾರವನ್ನು ನೋಡಿ, ನಿಜಕ್ಕೂ ಇದು ಅಸಲಿ ಮೀನಿನ ರೀತಿ ಸಂಚರಿಸುವುದನ್ನು ಕಂಡರೆ ಅಚ್ಚರಿಯಾಗುತ್ತೆ. ಈ ರೋಬೋ ಮೀನು, ನಿಜವಾದ ಮೀನಿನ ರೂಪದಲ್ಲಾಗಲಿ ಆಕಾರದಲ್ಲಿ ಯಾವುದೆ ವ್ಯತ್ಯಾಸವನ್ನು ತೋರುವುದಿಲ್ಲ. ಮೀನು ತನ್ನ ಬಾಲವನ್ನು ಬಡಿಯುತ್ತ ಹೇಗೆ, ಅತ್ತಿಂದಿತ್ತ, ಇತ್ತಿಂದತ್ತ ಸಂಚರಿಸುತ್ತವೋ ಅದೇ ರೀತಿ ಈ ಮೀನುಗಳು, ಸಮುದ್ರದ ಯಾವ ಮೂಲೆಗಾಗಲಿ ಸಂಚರಿಸಬಹುದು. ಆದರೆ ಇದರ ಕಂಟ್ರೋಲ್ ಮಾತ್ರ, ಒಬ್ಬನ ಕೈಯಲ್ಲಿ ಇರುತ್ತೆ. ನೀರಿನಲ್ಲಿ ಮೀನಿನಂತೆ ಸಂಚರಿಸಲು ಒಂದು ನಿರ್ದಿಷ್ಟ ಆಕಾರದ ಅಗತ್ಯ ಇರಲೇಬೇಕು. ಆ ಕಾರಣಕ್ಕೆ ರೋಬೋ ಫಿಶ್​ಗಳನ್ನು ಸಹ ಫಿಶ್ ಅನಾಟಮಿಯನ್ನು ಅಧ್ಯಯನ ಮಾಡಿ, ಮೀನು ಈಜುವುದಕ್ಕೆ ಯಾವ ಅಂಗ ಸಹಾಯ ಮಾಡುತ್ತೋ ಅದೇ ರೀತಿ ಡಿಸೈನ್ ಮಾಡಿದ್ದಾರೆ. ಈ ರೋಬೊಗಳಿಗೆ ಫಿಶ್ ಟೈಲ್, ಫಿಶ್ ಗಿಲ್ಸ್ ಹಾಗೂ ರಿಬ್ಸ್ ಬೋನ್ಸ್​ ಸಹ ಇರುವುದು ನೋಡಬಹುದು. ಮೊದಲಿಗೆ ಇದು ಸಿದ್ಧವಾಗಿದ್ದು ಮಕ್ಕಳಿಗೆ ಆಟಿಕೆಯಾಗಿ.. ಈ ಪ್ರಾಡೆಕ್ಟ್ ಅನ್ನು ಚೀನಾದವರು ಡ್ಯೂಪ್ಲಿಕೇಟ್ ಮಾಡಿ, ಸಣ್ಣ ರೋಬೋ ಮೀನುಗಳನ್ನು ಮಾರುಕಟ್ಟೆಯಲ್ಲಿ ಬಿಟ್ಟಿದ್ದರು. ಆದರೆ ಇದೀಗ ಡಿ.ಆರ್.ಡಿ.ಓ ಅಭೂತ ಪೂರ್ಣ ತಂತ್ರಜ್ಞಾನವನ್ನು ಅಳವಡಿಸಿ ಈ ರೋಬೋ ಫಿಶ್ ನ ಸಂಶೋಧನೆಗೆ ಇಳಿದಿದ್ದಾರೆ.

blank

ಕಣ್ಣುಗಳಲ್ಲಿ ಕ್ಯಾಮೆರಾ, ರೋಬೋ ಮೈ ತುಂಬ ಅಲರ್ಟ್ ಸೆನ್ಸಾರ್ಸ್
ಸಮುದ್ರದಲ್ಲಿ ಹಾಗೂ ಆಕಾಶ ಮಾರ್ಗದ ದಾಳಿ ಮೇಲೆ ಕಣ್ಗಾವಲು

ಇದನ್ನೂ ಓದಿ: ಕಲ್ಲು, ಮಣ್ಣಿನ ಕೋಟೆಯಲ್ಲ.. ಇದು ಹಾಲೆಂಡ್ ಕಲಾವಿದನ ಮ್ಯಾಜಿಕ್

ಸೇನ ಸಂಶೋದನಾ ಸಂಸ್ಥೆಯಾಗಿರುವ ಡಿ.ಆರ್.ಡಿ.ಓ ದೇಶದ ಭದ್ರತೆ ದೃಷ್ಟಿಯಿಂದ ಈ ಒಂದು ರೋಬೋ ಫಿಶ್ ಸಂಶೋಧನೆಗೆ ಕೈಹಾಕಿದೆ. ಮೀನಿನ ಕಣ್ಣುಗಳ ಜಾಗದಲ್ಲಿ ಎರಡು ಮೋನಾಕ್ಯೂಲರ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಂದ್ರೆ ಒಂದು ಕ್ಯಾಮೆರಾ ಸಂಪೂರ್ಣ 180 ಡಿಗ್ರಿಯವರೆಗೂ ನೋಡಬಲ್ಲದು. ಎರಡು ಕ್ಯಾಮೆರಾಗಳು ಸೇರಿ ಮೀನಿನ ಸುತ್ತ 360 ಡಿಗ್ರಿಯ ಕಣ್ಗಾವಲನ್ನು ಕಾಪಾಡಿಕೊಳ್ಳಬಲ್ಲದ್ದಾಗಿದೆ. ಒಂದು ಕ್ಯಾಮೆರಾ ಸುಮಾರು 20 ಕೀಲೋ ಮೀಟರ್​​ವರೆಗೆ ತನ್ನ ದೃಷ್ಟಿಯನ್ನು ಚಾಚಬಲ್ಲದ್ದಾಗಿದೆ. ಕ್ಯಾಮೆರಾಗಿಂತ ಹೆಚ್ಚು ಶಕ್ತಿಶಾಲಿ, ಈ ಮೀನಿಗೆ ಅಳವಡಿಸುತ್ತಿರುವ ಸೆನ್ಸಾರ್ಸ್. ರೋಬೋ ಮೀನಿನಲ್ಲಿ ಒಟ್ಟು 18 ರಿಂದ 20 ಸೆನ್ಸಾರ್ಸ್ ಅಳವಡಿಸಲು ಸಂಸ್ಥೆ ನಿರ್ಧರಿಸಿದೆ. ಈ ಸೆನ್ಸಾರ್​​ಗಳು ಎಷ್ಟೋ ಕಿಲೋ ಮಿಟರ್ ದೂರದಿಂದಲೇ ದಾಳಿಯ ಹೊಡೆತವನ್ನು ಗ್ರಹಿಸಬಲ್ಲದು. ಕೇವಲ ಅಟ್ಯಾಕ್​ಗಳನ್ನು ಅಲ್ಲದೆ, ಅಲೆಗಳ ವ್ಯತ್ಯಾಸ, ಸುನಾಮಿ ಸಂಭವದ ಬಗ್ಗೆಯೂ ಇದೆ ಸೆನ್ಸಾರ್​​ಗಳು ಎಚ್ಚರಿಸುತ್ತದೆ. ಅಲ್ಲದೇ ಆಕಾಶ ಮಾರ್ಗವಾಗಿ ಸಮುದ್ರದ ಮೇಲೆ ಬರುತ್ತಿರುವ ಅನುಮಾನಸ್ಪದ ವಾಹನಗಳ ಮೇಲು ಈ ಮೀನು ಕಣ್ಣೀಟ್ಟಿರುತ್ತೆ.

ಜಲ ಮಾರ್ಗವಾಗಿ ದಾಳಿ ಮಾಡಲು ಚೀನಾ ಪ್ಲಾನ್
ಯಾವುದೇ ದಾಳಿ ಇರಲಿ, ಎಲ್ಲದಕ್ಕೂ ಸಿದ್ಧವಾಗಿರುವ ಸೇನೆ

ಚೀನಾ ಈಗಾಗಲೇ ವಿಶ್ವದ ಎಲ್ಲ ದೇಶಗಳ ವಿರೋಧ ಕಟ್ಟಿಕೊಂಡಿದೆ. ಅಲ್ಲದೆ ತನ್ನ ಕುತಂತ್ರ ಬುದ್ದಿಯಿಂದ ಯುದ್ಧ ಮಾಡಲು ಸಿದ್ದವಾಗುತ್ತಿದೆ. ಭಾರತೀಯ ಸೇನೆ ಎಚ್ಚರ ತಪ್ಪದೆ, ಚೀನ ಕುತಂತ್ರಕ್ಕೆ ಪ್ರತಿ ತಂತ್ರವನ್ನು ರೂಪಿಸಿದೆ. ದಾಳಿ ಯಾವುದೆ ಇರಲಿ, ಯಾವ ಮಾರ್ಗವಾಗಿಯಾದ್ರೂ ಶತ್ರು ಪಾಳಯ ದೇಶಕ್ಕೆ ನುಗ್ಗಲಿ ಭಾರತೀಯರನ್ನು ಸುರಕ್ಷಿತವಾಗಿಡಲು ಎಲ್ಲ ರೀತಿಯ ಸಿದ್ಧತೆಯನ್ನು ಇಂಡಿಯನ್ ಆರ್ಮಿ ಮಾಡಿಕೊಂಡಿದೆ. ಈಗ ರೋಬೋ ಫಿಶ್ ಸಂಶೋಧನೆಯ ಹಂತವನ್ನು ಮುಗಿಸಿ ಪೇಪರ್ ಪಬ್ಲಿಷ್ ಮಾಡಿದೆ. ಅದರ ತಯಾರಿಕೆ ಹಂತ ಮುಗಿದ ಮೇಲೆ ಆದಷ್ಟು ಬೇಗ ಭಾರತೀಯ ಸೇನಾ ಬತ್ತಳಿಕೆಗೆ ಸೇರಲು ರೋಬೋ ಫಿಶ್ ರೆಡಿ ಆಗುತ್ತಿದೆ.

ಇದನ್ನೂ ಓದಿ: ಈ ದ್ರಾಕ್ಷಿ ಹಣ್ಣಿನ ಬೆಲೆ ₹7 ಲಕ್ಷ; ಒಂದು ಬಾರಿ ನೀವು ತಿಂದ್ರೆ.. ಇದೇ ಬೇಕು ಅನ್ನೋದ್ರಲ್ಲಿ ಡೌಟೇ ಇಲ್ಲ

The post ಕಣ್ಣಲ್ಲೇ ಕ್ಯಾಮರಾ.. ಮೈತುಂಬಾ ಸೆನ್ಸಾರ್​.. ನೌಕಾ ಸೇನೆಗೆ ಶಕ್ತಿ ತುಂಬಲಿದೆ ರೋಬೊ ಫಿಶ್ appeared first on News First Kannada.

Source: newsfirstlive.com

Source link