ರಾಹುಲ್-ಮಯಾಂಕ್​ ಅದೃಷ್ಟ ಬದಲಾಗಲು ಗಿಲ್ ಕಾರಣ? ಸುವರ್ಣಾವಕಾಶ ಬಳಸಿಕೊಂಡರಷ್ಟೇ ಉಳಿಗಾಲ!

ರಾಹುಲ್-ಮಯಾಂಕ್​ ಅದೃಷ್ಟ ಬದಲಾಗಲು ಗಿಲ್ ಕಾರಣ? ಸುವರ್ಣಾವಕಾಶ ಬಳಸಿಕೊಂಡರಷ್ಟೇ ಉಳಿಗಾಲ!

ಗಿಲ್ ಇಂಜುರಿ ಬಳಿಕ ಟೀಮ್ ಇಂಡಿಯಾದಲ್ಲಿ ಉದ್ಭವಿಸಿದ್ದ ಸಮಸ್ಯೆಗಳು ಬಗೆಹರಿದಿವೆ. ಮಯಾಂಕ್ ಹಾಗೂ ಕೆ.ಎಲ್.ರಾಹುಲ್​ ಲೈನ್​​ ಕೂಡ ಕ್ಲಿಯರ್ ಆಗಿದೆ. ಈ ಸುವರ್ಣವಕಾಶ ಬಳಸಿಕೊಳ್ಳಬೇಕಾದ ಚಾಲೆಂಜ್ ಇವರಿಬ್ಬರ ಮುಂದಿದೆ.

blank

ಅದೃಷ್ಟದ ಜೊತೆ ಕನ್ನಡಿಗರಿಗೆ ಎದುರಾಗಿದೆ ಚಾಲೆಂಜ್!
ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ಸಮಸ್ಯೆ ಬಗೆಹರಿದಿದೆ. ಟೀಮ್ ಕಾಂಬಿನೇಷನ್​, ರಿಪ್ಲೇಸ್​ಮೆಂಟ್ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಟೀಮ್ ಇಂಡಿಯಾ ಪರಿಹಾರ ಕಂಡುಕೊಂಡಿದೆ. ಆದರೆ ಈಗ ಮಯಾಂಕ್ ಆ್ಯಂಡ್ ಕೆ.ಎಲ್.ರಾಹುಲ್​ಗೆ, ಬಿಗ್ ಚಾಲೆಂಜ್ ಎದುರಾಗ್ತಿದೆ.

ಹೌದು, ಸದ್ಯ ಶುಭ್​ಮನ್ ಗಿಲ್ ಅನುಪಸ್ಥಿತಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​​ಗಳ ಪರದಾಟ, ಕನ್ನಡಿಗರಿಬ್ಬರಿಗೆ ಅದೃಷ್ಟದ ಬಾಗಿಲು ಬಡಿಯುವಂತೆ ಮಾಡಿದೆ. ಆದ್ರೆ ಇದೇ ಅವಕಾಶವನ್ನ ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು, ಇಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕಿದೆ.

blank

ಸುವರ್ಣಾವಕಾಶ ಬಳಸಿಕೊಂಡರಷ್ಟೇ ಉಳಿಗಾಲ..?
ಆಸ್ಟ್ರೇಲಿಯಾ ಟೆಸ್ಟ್​ ಸರಣಿ ಬಳಿಕ ಅಂತತ್ರಕ್ಕೆ ಸಿಲುಕಿದ್ದ ಮಯಾಂಕ್​ಗೆ, ಶುಭ್​​ಮನ್ ಗಿಲ್ ಇಂಜುರಿ, ಟೆಸ್ಟ್ ಕೆರಿಯರ್​​ಗೆ ಮರುಜೀವ ನೀಡಿದೆ. ಮತ್ತೊಂದೆಡೆ ವೆಸ್ಟ್ ಇಂಡೀಸ್ ಸರಣಿ ಬಳಿಕ ತಂಡದಿಂದ ದೂರ ಉಳಿದಿದ್ದ ರಾಹುಲ್, ಆಸ್ಟ್ರೇಲಿಯಾ ಸರಣಿ ವೇಳೆ ಟೆಸ್ಟ್ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ರೂ ಬೆಂಚ್​ಗೆ ಮಾತ್ರ ಸೀಮಿತವಾಗಿದ್ದರು. ಆದರೆ ಈಗ ಇಂಗ್ಲೆಂಡ್ ಸರಣಿಯಲ್ಲಿ ರಾಹುಲ್​​ ಕಣಕ್ಕಿಳಿಯೋದು ಪಕ್ಕಾ ಎನ್ನಲಾಗ್ತಿದೆ. ಇದು ಕೆ.ಎಲ್.ರಾಹುಲ್ ಟೆಸ್ಟ್ ಕ್ರಿಕೆಟ್​ನಲ್ಲಿ ಮತ್ತೆ ನೆಲೆಕಂಡುಕೊಳ್ಳಲು ಸಕಾಲ!

ಒಟ್ಟಿನಲ್ಲಿ ಕನ್ನಡಿಗರಿಗೆ ಇಂಗ್ಲೆಂಡ್​ ಸರಣಿ, ಟೆಸ್ಟ್ ಕ್ರಿಕೆಟ್​ನಲ್ಲಿ ಬೇರೂರಲು ಸುವರ್ಣಾವಕಾಶ. ಹೀಗಾಗಿ ಸಿಕ್ಕ ಅವಕಾಶವನ್ನ ಮಯಾಂಕ್-ರಾಹುಲ್ ಸದ್ಬಳಕೆ ಮಾಡಿಕೊಳ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

The post ರಾಹುಲ್-ಮಯಾಂಕ್​ ಅದೃಷ್ಟ ಬದಲಾಗಲು ಗಿಲ್ ಕಾರಣ? ಸುವರ್ಣಾವಕಾಶ ಬಳಸಿಕೊಂಡರಷ್ಟೇ ಉಳಿಗಾಲ! appeared first on News First Kannada.

Source: newsfirstlive.com

Source link