ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಥಾವರ್​ ಚಂದ್ ಗೆಹಲೋತ್

ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಥಾವರ್​ ಚಂದ್ ಗೆಹಲೋತ್

ಬೆಂಗಳೂರು: ರಾಜ್ಯದ ನೂತನ ರಾಜ್ಯಪಾಲರಾಗಿ ಥಾವರ್​ ಚಂದ್ ಗೆಹಲೋತ್​ ಪ್ರಮಾಣವಚನ ಸ್ವೀಕಾರ ಮಾಡಿದರು. ಈ ಮೂಲಕ ಕರ್ನಾಟಕದ 19ನೇ ಗವರ್ನರ್​ ಆಗಿ ಅಧಿಕಾರ ಸ್ವೀಕರಿಸಿದರು.

ಥಾವರ್​ ಚಂದ್ ಗೆಹಲೋತ್ ಅವರಿಗೆ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್​ ಓಕಾ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ರಾಜ್ಯಪಾಲ ವಿಆರ್​ ವಾಲಾ, ಸಿಎಂ ಬಿಎಸ್​ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವ ರಾಮದಾಸ್​, ಗೃಹಸಚಿವ ಬೊಮ್ಮಾಯಿ, ಡಿಸಿಎಂ ಕಾರಜೋಳ, ಸಚಿವ ಅಶೋಕ್​ ಹಾಗೂ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮಧ್ಯಪ್ರದೇಶದ ಹಿರಿಯ ರಾಜಕಾರಣಿಯಾಗಿರುವ ಗೆಹಲೋತ್, ಮೂರು ಬಾರಿ ಶಾಜಾಪುರ ಮೀಸಲು ಕ್ಷೇತ್ರದ ಶಾಸಕರಾಗಿದ್ದರು. ನಾಲ್ಕು ಬಾರಿ ಲೋಕಸಭಾ ಸಂಸದರಾಗಿ ಕಾರ್ಯ ನಿರ್ವಹಿಸಿದ್ದರು. ಇನ್ನು, ಕೇಂದ್ರದಲ್ಲಿ ಸಾಮಾಜಿಕ ನ್ಯಾಯ & ಸಬಲೀಕರಣ ಸಚಿವರೂ ಆಗಿದ್ದ ಗೆಹಲೋತ್​ರನ್ನ ಈಗ ರಾಜ್ಯದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ ಸಂಘಟನೆಯಲ್ಲಿ ಮತ್ತು ಸರ್ಕಾರದಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿರುವ ಗೆಹಲೋತ್​, 2013ರಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿಯೂ ಆಗಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ. ಗೆಹಲೋತ್​ರವರಿಗೆ ರಾಜ್ಯದ ರಾಜಕಾರಣಿಗಳು, ಹಾಗೂ ಇಲ್ಲಿನ ವಿದ್ಯಾಮಾನಗಳ ಬಗ್ಗೆ ಚೆನ್ನಾಗಿ ತಿಳಿದಿದೆ.

ಇದನ್ನೂ ಓದಿ: ರಾಜ್ಯಪಾಲರಾಗಿ ಗೆಹಲೋತ್​ ಇಂದು ಅಧಿಕಾರ ಸ್ವೀಕಾರ; ಅವರ ರಾಜಕೀಯ ಹಿನ್ನೆಲೆ ಇಲ್ಲಿದೆ

The post ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಥಾವರ್​ ಚಂದ್ ಗೆಹಲೋತ್ appeared first on News First Kannada.

Source: newsfirstlive.com

Source link